ಮುಖದ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಲು ಜನರು ವಿಭಿನ್ನ ಪ್ರಯತ್ನವನ್ನು ಮಾಡ್ತಾರೆ..ಕೆಲವರು ಫೇಸ್ ಪ್ಯಾಕ್ ಗಳನ್ನ ಬಳಸ್ತಾರೆ ,ಕ್ಲೀನ್ ಅಪ್ ಮಾಡಿಸ್ತಾರೆ ಜೊತೆಗೆ ಫೇಷಿಯಲ್ ಕೂಡ ಮಾಡಿಸ್ತಾರೆ..ಆದ್ರೆ ಏನೆ ಮಾಡಿದ್ರೂ ಅದ್ರಲ್ಲಿ ಸ್ಟೀಮ್ ಕೂಡ ಕೊಡ್ತಾರೆ..ಮುಖದ ಕಾಂತಿಯನ್ನು ಹೆಚ್ಚಿಸಲು ಬಿಸಿ ನೀರಿನ ಹಬೆ ಪ್ರಮುಖ ಸ್ಥಾನವನ್ನು ಪಡೆಯುತ್ತದೆ.. ಹಲವು ಶತಮಾನಗಳಿಂದ ಜನ ಇದನ್ನು ಮಾಡಿಕೊಂಡು ಬಂದಿದ್ದಾರೆ. ಇದು ಚರ್ಮಕ್ಕೆ ಹಲವು ರೀತಿ ಪ್ರಯೋಜನವನ್ನು ನೀಡುತ್ತದೆ.
![](https://pratidhvani.com/wp-content/uploads/2024/05/IMG_7070.jpeg)
ಮೊಡವೆಗಳನ್ನು ತಡೆಗಟ್ಟುತ್ತದೆ
ಸ್ಟೀಮ್ ತಗೊಳೋದ್ರಿಂದ ನಮ್ಮ ಮುಖದಲ್ಲಿ ಆಗುವಂಥ ಪಿಂಪಲ್ಸ್ ಅನ್ನ ತಡೆಗಟ್ಟಲು ಇದು ಸಹಾಯ ಮಾಡುತ್ತದೆ. ನಮ್ಮ ಮುಖದಲ್ಲೇ ಇರುವಂತ ಪೋರ್ಸ್ ನ ಓಪನ್ ಮಾಡಿ ಅದರಲ್ಲಿರುವಂತ ಕೆಟ್ಟ ಕೊಳೆಯನ್ನ ತೆಗೆದು ಹಾಕುತ್ತದೆ.ಇದರಿಂದಾಗಿ ಮುಖದಲ್ಲಿ ಪಿಂಪಲ್ಸ್ ಆಗುವುದು ಕೂಡ ಕಡಿಮೆಯಾಗುತ್ತದೆ.
![](https://pratidhvani.com/wp-content/uploads/2024/05/IMG_7071.jpeg)
ಹೈಡ್ರೇಟ್
ಮುಖದ ಚರ್ಮವನ್ನು ಹೈಡ್ರೇಟ್ ಮಾಡುತ್ತದೆ..ನಮ್ಮ ದೇಹದಲ್ಲಿ ನೀರಿನಾಂಶ ಕಡಿಮೆ ಇದ್ರೆ ಸ್ಕಿನ್ ಡ್ರೈ ಆಗುತ್ತದೆ..ಅದೇ ಸ್ಟೀಮ್ ನ ತಗೊಂಡ್ರೆ ಮುಖದ ಚರ್ಮ ಹೈಡ್ರೇಟ ಆಗುತ್ತದೆ ಹಾಗೂ ಸ್ಕಿನ್ ಗ್ಲೋ ಆಗುತ್ತದೆ..ಕಪ್ಪು ಕಲೆಗಳು ಮಾಯವಾಗುತ್ತವೆ.
ಬ್ಲಡ್ ಫ್ಲೋ
ಹಬೆಯ ಶಾಖವು ಬ್ಲಡ್ ಫ್ಲೋ ನ ಹೆಚ್ಚಿಸುತ್ತದೆ, ಇದು ಚರ್ಮಕ್ಕೆ ಹೆಚ್ಚಿನ ಆಮ್ಲಜನಕವನ್ನು ಒದಗಿಸುತ್ತದೆ ಮತ್ತು ಆರೋಗ್ಯಕರವಾಗಿ ಕಾಣುವಂತೆ ಮಾಡುತ್ತದೆ. ಬ್ಲಡ್ ಫ್ಲೋ ಕಾಲಜನ್ ಮತ್ತು ಎಲಾಸ್ಟಿನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಇದರಿಂದ ಮುಖದಲ್ಲಿ ಆಗುವಂತ ಸುಕ್ಕುಗಳನ್ನು ಕಡಿಮೆ ಮಾಡುತ್ತದೆ.
![](https://pratidhvani.com/wp-content/uploads/2024/05/IMG_7072.jpeg)
ಮುಖವನ್ನು ಸ್ವಚ್ಛಗೊಳಿಸುತ್ತದೆ
ನಿಮ್ಮ ಮುಖವನ್ನು ಸ್ವಚ್ಛಗೊಳಿಸಿ, ನಿಮ್ಮ ಚರ್ಮದಲ್ಲಿರುವ ಕೊಳಕು, ಆಯಿಲಿನೆಸ್ ಮತ್ತು ಡೆಡ್ ಸ್ಕಿನ್ ನ ತೆಗೆದು ಹಾಕುತ್ತದೆ..ಮುಖದ ಕಾಂತಿಯನ್ನು ಜಾಸ್ತಿ ಮಾಡುತ್ತದೆ..
ಆಯ್ಲಿ ಸ್ಕಿನ್ ನಿಮ್ಮದಾಗಿದ್ರೆ ವಾರಕ್ಕೆ ೩ ಭಾರಿ ಸ್ಟೀಮ್ ತಗೋಳಿ.ಇದರಿಂದ ನಿಮ್ಮ ಚರ್ಮದಲ್ಲಿರುವಂತ ಆಯ್ಲಿನೆಸ್ ಕಡಿಮೆ ಆಗುತ್ತದೆ.. ಹಾಗೂ ಡ್ರೈ ಸ್ಕಿನ್ ಇದ್ದವರು ವಾರಕ್ಕೆ ಒಂದು ಸಲ ಮಾತ್ರ ಸ್ಟೀಮ್ ತಗೊಳ್ಬೇಕು ಹೆಚ್ಚು ಬಾರಿ ತಗೊಂಡ್ರೆ ನಿಮ್ಮ ಸ್ಕಿನ್ ಇನ್ನಷ್ಟು ಡ್ರೈ ಆಗ್ತಾ ಹೋಗುತ್ತೆ.
![](https://pratidhvani.com/wp-content/uploads/2024/05/IMG_7069.jpeg)