ನಾಸಿಕ್:
ಮಹಾರಾಷ್ಟ್ರದ ನಾಸಿಕ್ ನಗರದ ಐಟಿ ಕಂಪನಿ Tata Consultancy Services (ಟಿಸಿಎಸ್) ಬಿಪಿಓ ಘಟಕದಲ್ಲಿ ಗಂಭೀರ ಆರೋಪಗಳು ಕೇಳಿಬಂದಿದ್ದು, ಪೊಲೀಸ್ ತನಿಖೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯಿಂದ ತಿಳಿದುಬಂದಿದೆ.“ಆಫೀಸ್ ರೊಮ್ಯಾನ್ಸ್” ಸಂಬಂಧಿತ ದೂರುಗಳಿಂದ ಆರಂಭವಾದ ವಿಚಾರ, ಇದೀಗ ದೊಡ್ಡ ಮಟ್ಟದ ಹಗರಣದ ರೂಪ ಪಡೆದಿದೆ ಎನ್ನಲಾಗುತ್ತಿದೆ.

ಕಳೆದ ನಾಲ್ಕು ವರ್ಷಗಳಿಂದ (2022–2026) ಯುವ ಮಹಿಳಾ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡು ಲೈಂಗಿಕ ಕಿರುಕುಳ ಹಾಗೂ ಬಲವಂತದ ಧಾರ್ಮಿಕ ಪರಿವರ್ತನೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.ಈ ಹಿನ್ನೆಲೆಯಲ್ಲಿ, ಏಳು ಮಹಿಳಾ ಪೊಲೀಸ್ ಅಧಿಕಾರಿಗಳು ಅಂಡರ್ಕವರ್ ಆಗಿ ಉದ್ಯೋಗಿಗಳಂತೆ ಕಾರ್ಯನಿರ್ವಹಿಸಿ ಆರೋಪಿಗಳನ್ನು ಪತ್ತೆಹಚ್ಚಿದರೆಂದು ಹೇಳಲಾಗಿದೆ.

ಪ್ರಕರಣ ಸಂಬಂಧ 9 ಎಫ್ಐಆರ್ಗಳು ದಾಖಲಾಗಿದ್ದು, 7 ಮಂದಿಯನ್ನು ಬಂಧಿಸಲಾಗಿದೆ ಎಂದು ಮಾಹಿತಿ ಹರಿದಾಡುತ್ತಿದೆ. ಈ ಪ್ರಕರಣದಲ್ಲಿ ವಿಶೇಷ ತನಿಖಾ ದಳ (SIT) ರಚನೆಯಾಗಿದ್ದು, ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದೂ ತಿಳಿದುಬಂದಿದೆ.
ಆದಾಗ್ಯೂ, ಈ ಕುರಿತು ಅಧಿಕೃತ ದೃಢೀಕರಣ ಹಾಗೂ ಕಂಪನಿಯಿಂದ ಸ್ಪಷ್ಟ ಪ್ರತಿಕ್ರಿಯೆ ಇನ್ನಷ್ಟೇ ಲಭ್ಯವಾಗಬೇಕಿದೆ. ಪ್ರಕರಣದ ನಿಜಾಸ್ತಿತಿ ಕುರಿತು ತನಿಖೆ ಮುಂದುವರಿದಿದೆ.
ಇದನ್ನೂ ಓದಿ






