• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

‘ಪಿಂಪ್‌ʼ ಸ್ಯಾಂಟ್ರೋ ರವಿಗೆ ವಿವಿಐಪಿ ಸೌಲಭ್ಯ..! ವಿಪಕ್ಷಗಳು ಕೆಂಡಾಮಂಡಲ..

Any Mind by Any Mind
January 15, 2023
in Top Story, ರಾಜಕೀಯ
0
‘ಪಿಂಪ್‌ʼ ಸ್ಯಾಂಟ್ರೋ ರವಿಗೆ ವಿವಿಐಪಿ ಸೌಲಭ್ಯ..! ವಿಪಕ್ಷಗಳು ಕೆಂಡಾಮಂಡಲ..
Share on WhatsAppShare on FacebookShare on Telegram

ರಾಜ್ಯ ಬಿಜೆಪಿ ಸರ್ಕಾರದಲ್ಲಿ ಅಧಿಕಾರಿಗಳ ವರ್ಗಾವಣೆ ದಂಧೆ ನಡೆಸುತ್ತಿದ್ದ ಮಂಜುನಾಥ ಅಲಿಯಾಸ್ ಸ್ಯಾಂಟ್ರೋ ರವಿ ಬಂಧನ ಮಾಡಲಾಗಿದೆ. ಗುಜರಾತ್ನಲ್ಲಿ ಬಂಧನ ಮಾಡಿದ ಬಳಿಕ ಬೆಂಗಳೂರು ಮೂಲಕ ಮೈಸೂರಿಗೆ ಕರೆತರಲಾಗಿದೆ. ಆದರೆ ಯುವತಿಯರು ಹಾಗು ಮಹಿಳೆಯರನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಮಾಂಸ ದಂಧೆ ಮಾಡುವ ಕೆಲಸ ಮಾಡ್ತಿದ್ದ ಸ್ಯಾಂಟ್ರೋ ರವಿಗೆ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಅತೀ ಗಣ್ಯವ್ಯಕ್ತಿಗಳಿಗೆ ನೀಡುವ ಸೌಲಭ್ಯ ನೀಡಲಾಗ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. 

ADVERTISEMENT

ಮಧ್ಯರಾತ್ರಿ ಮಾಧ್ಯಮಗಳ ಕಣ್ತಪ್ಪಿಸಿ ಕರೆದೊಯ್ದ ಖಾಕಿ ಪಡೆ..!

ಸ್ಯಾಂಟ್ರೋ ರವಿ ಮೂಲಕ ಕೋಟಿ ಕೋಟಿ ಹಣ ಕೊಟ್ಟು ತಮಗೆ ಬೇಕಾದ ಸ್ಥಳಗಳಿಗೆ ವರ್ಗಾವಣೆ ಮಾಡಿಸಿಕೊಳ್ತಿದ್ದ ಪೊಲೀಸ್ ಅಧಿಕಾರಿಗಳು, ಸ್ಯಾಂಟ್ರೋ ರವಿಗೆ ಐಶಾರಾಮಿ ವ್ಯವಸ್ಥೆ ಮಾಡುವ ಕೆಲಸ ಮಾಡ್ತಿದ್ದಾರೆ. ಗುಜರಾತ್‌ನ ಅಹಮದಾಬಾದ್‌ನಿಂದ ಮಧ್ಯರಾತ್ರಿ ಕರೆದುಕೊಂಡು ಬಂದ ಪೊಲೀಸರು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಾಮಾನ್ಯ ದ್ವಾರದಲ್ಲಿ 30ಕ್ಕೂ ಹೆಚ್ಚು ಜನ ಪೊಲೀಸರ ನಿಯೋಜನೆ ಮಾಡಿ ಬಂದೋಬಸ್ತ್ ಮಾಡಲಾಗಿತ್ತು. ಮಾಧ್ಯಮ ಸಿಬ್ಬಂದಿಗಳೂ ಕೂಡ ಸಾಮಾನ್ಯ ದ್ವಾರದಲ್ಲೇ ಕಾಯುತ್ತಿದ್ದರು. ಆದರೆ ಸ್ಯಾಂಟ್ರೋ ರವಿಯನ್ನು ವಿಶೇಷ ಗಣ್ಯ ವ್ಯಕ್ತಿಗಳು ಹೊರಕ್ಕೆ ಬರುವ ( VVIP ) ದ್ವಾರದ ಮೂಲಕ ಮಾಧ್ಯಮಗಳ ಕಣ್ತಪ್ಪಿಸಿ ಕರೆದುಕೊಂಡು ಹೋಗಿದ್ದಾರೆ. ಈ ಮೂಲಕ ಪೊಲೀಸರು ಕರ್ತವ್ಯಕ್ಕೂ ಮಿಗಿಲಾದ ಆತ್ಮೀಯತೆ  ಸ್ಯಾಂಟ್ರೋ ರವಿ ಜೊತೆಗೆ ಇದೆ ಎನ್ನುವುದನ್ನು ಸಾಬೀತು ಮಾಡಿಕೊಂಡಿದ್ದಾರೆ. 

ಒನ್ ಟು ಒನ್ ಟಚ್ ಇದ್ದಾರೆ ಎಂದಿದ್ದ ಸ್ಯಾಂಟ್ರೋ ರವಿ..!!

ಪೊಲೀಸರ ವರ್ಗಾವಣೆ ವಿಚಾರದಲ್ಲಿ ಫೋನ್ ಮೂಲಕ ಸಂಭಾಷಣೆ ನಡೆಸಿದ್ದ ಮಂಜುನಾಥ ಅಲಿಯಾಸ್ ಸ್ಯಾಂಟ್ರೋ ರವಿ, ಹಿರಿಯ ಅಧಿಕಾರಿಗಳು ನನ್ನ ಜೊತೆಗೆ ನೇರ ಸಂಪರ್ಕದಲ್ಲಿ ಇದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ನನ್ನ ಹಿತೈಷಿಗಳು, ಗೃಹ ಸಚಿವರನ್ನು ಅವರ ಮನೆಯಲ್ಲೇ ನೇರವಾಗಿ ಭೇಟಿ ಮಾಡಿ ಮಾತನಾಡುವ ಆತ್ಮೀಯತೆ ಇದೆ ಎಂದಿದ್ದನು. ಜೊತೆಗೆ ಸಿಎಂ ಹಾಗು ಅವರ ಪುತ್ರ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ತೀರ್ಥಹಳ್ಳಿ ನಿವಾಸದಲ್ಲಿ ಭೇಟಿ ಮಾಡಿದ್ದ ಫೋಟೋಗಳು ಬಿಡುಗಡೆ ಆಗಿದ್ದವು. ಇದೀಗ ಬಂಧನ ಆದ ಬಳಿಕ ಬೆಂಗಳೂರಿಗೆ ಕರೆದುಕೊಂಡು ಬಂದಾಗ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ವಿಶೇಷ ಗಣ್ಯರು ಸಂಚಾರ ಮಾಡುವ ಬಾಗಿಲಿನ ಮೂಲಕ ಗೌಪ್ಯವಾಗಿ ಕರೆದುಕೊಂಡು ಹೋಗಲಾಗಿದೆ. ಅಂದರೆ ಈ ಹಿಂದೆ ಸ್ಯಾಂಟ್ರೋ ರವಿ ಹೇಳಿಕೆ ನಿಜ ಎನ್ನಬಹುದಾಗಿದೆ.

ರಹಸ್ಯವಾಗಿ ಸ್ಯಾಂಟ್ರೋ ರವಿ ಕರೆದೊಯ್ದ ಪೊಲೀಸರ ವಿರುದ್ಧ HDK ಕಿಡಿ..! 

ಸ್ಯಾಂಟ್ರೋ ರವಿಯನ್ನ ಪೊಲೀಸರು ರಹಸ್ಯವಾಗಿ ಕರೆದೊಯ್ದಿರುವುದಕ್ಕೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕೆಂಡಾಮಂಡಲ ಆಗಿದ್ದಾರೆ. Kempegowda international airport limited ( KIAL ) ಬಳಿ ಮಾತನಾಡಿರುವ ಕುಮಾರಸ್ವಾಮಿ, ಪ್ರಧಾನಿ, ಮುಖ್ಯಮಂತ್ರಿಗಳು ಓಡಾಡುವ ಜಾಗದಲ್ಲಿ ಇಂತಹ ಆರೋಪಿಯನ್ನ ಯಾಕೆ ಕರೆದೊಯ್ದರು..? ಈ ರಾಜ್ಯದಲ್ಲಿ ಪೊಲೀಸ್ ಇಲಾಖೆ ಬದುಕಿದೆಯಾ..? ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ರಾಜ್ಯ ಪೊಲೀಸ್ರು ಸ್ಯಾಂಟ್ರೋ ರವಿಗೆ ರಾಜಾತಿಥ್ಯ ನೀಡ್ತಿದ್ದಾರೆ ಎನಿಸುತ್ತದೆ ಎಂದು ದೂರಿದ್ದಾರೆ. ಇನ್ನು ಗೃಹ ಮಂತ್ರಿಗಳು ಆಹಮದಾಬಾದ್‌ಗೆ ಹೋಗ್ತಾರೆ,  ಅದೇ ಜಾಗದಲ್ಲಿ ಸ್ಯಾಂಟ್ರೋ ರವಿ ಬಂಧನ ವಾಗುತ್ತೆ. ಗುಜರಾತ್‌ನಲ್ಲಿ ಬಿಜೆಪಿ ಸರ್ಕಾರ ಇದೆ, ಹೀಗಾಗಿ ಮೊದಲೇ ರವಿಯನ್ನ ಬಂಧನ ಮಾಡಿದ್ದಾರೆ. ಅವನಿಂದ ಎಲ್ಲಾ ದಾಖಲೆಗಳನ್ನ ಪಡೆದುಕೊಂಡು ಈಗ ಬಂಧನದ ನಾಟಕ ಮಾಡ್ತಿದ್ದಾರೆ ಎಂದಿದ್ದಾರೆ. ಸ್ಯಾಂಟ್ರೋ ರವಿ ಬಳಿ ಇರುವ ಎಲ್ಲಾ ಸಾಕ್ಷಿಗಳನ್ನ ಈಗಾಗಲೇ ನಾಶ ಮಾಡಿರುತ್ತಾರೆ. ಪಿಎಸ್‌ಐ ಡ್ರಗ್ಸ್ ಕೇಸ್ ರೀತಿಯಲ್ಲೇ ಈ ಕೇಸನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕ್ತಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. 

ರಾಜ್ಯ ಸರ್ಕಾರ ಒಂದು ರೀತಿಯಲ್ಲಿ ಅನುಮಾನ ಬರುವ ಹಾಗೆ ನಡೆದುಕೊಳ್ತಿದ್ರೆ, ಮತ್ತೊಂದು ಕಡೆ  ರಾಜ್ಯ ಪೊಲೀಸರೂ ಕೂಡ ಸ್ಯಾಂಟ್ರೋ ರವಿ ವಿಚಾರದಲ್ಲಿ ಹಲವಾರು ರೀತಿಯಲ್ಲಿ ಅನುಮಾನಕ್ಕೆ ಕಾರಣ ಆಗುವಂತೆ ನಡೆದುಕೊಳ್ಳುವ ಮೂಲಕ ಅನುಮಾನಕ್ಕೆ ಪುಷ್ಟಿ ನೀಡುತ್ತಿದ್ದಾರೆ. ರಾಜ್ಯ ಸರ್ಕಾರದಲ್ಲೇ ಮಧ್ಯವರ್ತಿಯಾಗಿ ಅಕ್ರಮ ದಂಧೆ ನಡೆಸುತ್ತಾ, ಸಚಿವರ ಕೈ ಬೆಚ್ಚಗೆ ಮಾಡುವ ಕೆಲಸ ಮಾಡ್ತಿದ್ದ ಸ್ಯಾಂಟ್ರೋ ರವಿಗೆ ಸರ್ಕಾರ ಶಿಕ್ಷೆ ನೀಡುತ್ತಾ..? ಅಸಾಧ್ಯವಾದ ಮಾತು ಎನ್ನುತ್ತಿವೆ ವಿಪಕ್ಷಗಳು. ಆದರೆ ಸಚಿವ ಆರ್. ಅಶೋಕ್ ಸೇರಿದಂತೆ ಬೇರೆ ಬೇರೆ ಸಚಿವರು ಮಾತ್ರ, ಯಾರನ್ನೂ ರಕ್ಷಣೆ ಮಾಡುವ ಕೆಲಸ ಮಾಡಲ್ಲ, ತಪ್ಪು ಮಾಡಿದ್ದವರಿಗೆ ಶಿಕ್ಷೆ ಖಂಡಿತ ಎಂದಿದ್ದಾರೆ. 

ಕೃಷ್ಣಮಣಿ

Tags: BJPCongress Partyಬಿಜೆಪಿ
Previous Post

ಮಂಗಳೂರು ಏರ್​ಪೋರ್ಟ್​ನಲ್ಲಿ ಪ್ರಯಾಣಿಕರಿಗೆ ಬರೆ..! ಅದಾನಿ ಕಂಪನಿಗೆ ಗುಡ್​ನ್ಯೂಸ್​.. 

Next Post

D BOSS| ಡಿ ಬಾಸ್‌ ಫ್ಯಾನ್ಸ್‌ ನಾವು ಕೆಂಡ ಆಗಿದೀವಿ ಬೆಂಕಿ ಉರುದ್ರೇ ಬಸ್ಮ ಆಗೋಗ್ತೀರ!

Related Posts

ಆಚರಣೆ ಸಂಭ್ರಮದ ನಡುವೆ ಅಂಬೇಡ್ಕರ್ ಎಲ್ಲಿದ್ದಾರೆ ?
ಅಂಕಣ

ಆಚರಣೆ ಸಂಭ್ರಮದ ನಡುವೆ ಅಂಬೇಡ್ಕರ್ ಎಲ್ಲಿದ್ದಾರೆ ?

by ಪ್ರತಿಧ್ವನಿ
April 13, 2026
0

ವಿಶೇಷ ಲೇಖನ : ನಾ ದಿವಾಕರ, ಹಿರಿಯ ಲೇಖಕರು.. ಡಾ. ಬಿ.ಆರ್. ಅಂಬೇಡ್ಕರ್ ಮತ್ತೊಮ್ಮೆ ವಾರ್ಷಿಕ ಆಚರಣೆಗಳ ಕೇಂದ್ರ ಬಿಂದುವಾಗಿ ಸಾರ್ವಜನಿಕರ ನಡುವೆ ಕಾಣಿಸಿಕೊಳ್ಳಲಿದ್ದಾರೆ. ತಾನು ದೇಶದ...

Read moreDetails
ಟಿಸಿಎಸ್ ಘಟಕದ ವಿರುದ್ಧ ಗಂಭೀರ ಆರೋಪ: ಅಂಡರ್‌ಕವರ್ ಕಾರ್ಯಾಚರಣೆಯಲ್ಲಿ ಪ್ರಕರಣ ಬಯಲು

ಟಿಸಿಎಸ್ ಘಟಕದ ವಿರುದ್ಧ ಗಂಭೀರ ಆರೋಪ: ಅಂಡರ್‌ಕವರ್ ಕಾರ್ಯಾಚರಣೆಯಲ್ಲಿ ಪ್ರಕರಣ ಬಯಲು

April 12, 2026
ಸಿದ್ದರಾಮಯ್ಯ ಬೆಂಕಿ ಇದ್ದಂತೆ, ಯಾರಿಂದಲೂ ಮುಟ್ಟೋಕಾಗೋಲ್ಲಾ ಮುಟ್ಟಿದ್ರೆ ಭಸ್ಮ ಆಗ್ತಾರೆ.

ದಾವಣಗೆರೆ ದಕ್ಷಿಣ ಉಪಚುನಾವಣೆ: ಕಾಂಗ್ರೆಸ್ ಒಳಜಗಳ ತೀವ್ರ, ಸಚಿವ ಜಮೀರ್ ವಿರುದ್ಧ ಗಂಭೀರ ಆರೋಪ

April 12, 2026
ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!

ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!

April 11, 2026
ಭೂಮಿಗೆ ಮೀರಿದ ಜನಸಂಖ್ಯೆ ಒತ್ತಡ: 2070ರೊಳಗೆ ಗಂಭೀರ  ಸಂಕಟದ ಎಚ್ಚರ

ಭೂಮಿಗೆ ಮೀರಿದ ಜನಸಂಖ್ಯೆ ಒತ್ತಡ: 2070ರೊಳಗೆ ಗಂಭೀರ  ಸಂಕಟದ ಎಚ್ಚರ

April 11, 2026
Next Post
D BOSS| ಡಿ ಬಾಸ್‌ ಫ್ಯಾನ್ಸ್‌ ನಾವು ಕೆಂಡ ಆಗಿದೀವಿ ಬೆಂಕಿ ಉರುದ್ರೇ ಬಸ್ಮ ಆಗೋಗ್ತೀರ!

D BOSS| ಡಿ ಬಾಸ್‌ ಫ್ಯಾನ್ಸ್‌ ನಾವು ಕೆಂಡ ಆಗಿದೀವಿ ಬೆಂಕಿ ಉರುದ್ರೇ ಬಸ್ಮ ಆಗೋಗ್ತೀರ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada