ಉದ್ಯಮಿ ರಾಯ್ ಆತ್ಮಹತ್ಯೆ ಪ್ರಕರಣ ಇದೀಗ ತಿರುವು ಪಡೆದುಕೊಂಡಿದೆ. ಪ್ರಕರಣದಲ್ಲಿ ಬಿಗ್ ಟ್ವಿಸ್ಟ್ ಉಂಟಾಗಿದೆ.ಸಿಜೆ ರಾಯ್ ಆತ್ಮಹತ್ಯೆ ಕೇಸನ್ನು ರಾಜ್ಯ ಸರ್ಕಾರ SIT ಗೆ ತನಿಖೆ ವಹಿಸಿದ್ದು ಹಲವಾರು ವಿಷಯಗಳು ಬಹಿರಂಗವಾಗುತ್ತಿದೆ.

ಮರಣೋತ್ತರ ಪರೀಕ್ಷೆಯ ವೇಳೆ ಮಾನಸಿಕ ಒತ್ತಡ ಹಾಗೂ ಖಿನ್ನತೆಯಿಂದ ರಾಯ್ ಬಳಲುತ್ತಿದ್ದರು ಎಂದು ವರದಿಯಲ್ಲಿ ತಿಳಿದು ಬಂದಿದೆ. SIT ತನಿಖೆ ಸಮಯದಲ್ಲಿ ರಾಯ್ ಅವರ ಡೈರಿ ಸಿಕ್ಕಿದ್ದು. ಅದರಲ್ಲಿ ಹಲವಾರು ವಿಚಾರಗಳನ್ನು ರಾಯ್ ಬರೆದಿಟ್ಟಿದ್ದಾರೆ.

ರಾಯ್ ಹೆಚ್ಚುಯಾರಿಗೆ ಕರೆ ಮಾಡುತ್ತಿದ್ದರು. ವೈಯಕ್ತಿಕ ವಿಚಾರಗಳನ್ನ ಯಾರೊಂದಿಗಾದರೂ ಹಂಚಿಕೊಂಡಿದ್ದಾರೆಯೇ ಎಂದು ತನಿಖೆ ಮಾಡುತ್ತಿದ್ದಾರೆ.SIT ತನಿಖೆ ನಡೆಸಿದ ವೇಳೆ ಹೂಡಿಕೆದಾರರಿಗೆ ರಾಯ್ ಹಣ ಹಿಂತಿರುಗಿಸಿದೆ ಇದುದ್ದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ರಾಯ್ ಯಾರನ್ನೂ ತಮ್ಮ ಕೋಣೆಗೆ ಬಿಡುತ್ತಿರಲಿಲ್ಲ. ಅವರ ಕಚೇರಿಗೆ ಫೇಸ್ ರೆಕಗ್ನಿಷನ್ ತಂತ್ರಜ್ಞಾನದ ಭದ್ರತೆ ಒದಗಿಸಲಾಗಿತ್ತು ಮತ್ತು ಪ್ರವೇಶವು ಅವರಿಗೆ ಮಾತ್ರ ಸೀಮಿತವಾಗಿತ್ತು ಎಂಬ ಮಾಹಿತಿ ಇದೆ.

ರಾಯ್ ನೇರವಾಗಿ ಫೋನ್ ಕರೆಗಳನ್ನು ಮಾಡುತ್ತಿರಲಿಲ್ಲ. ಬದಲಾಗಿ, ಅವರು ವೆಬ್ ಆಧಾರಿತ ಪ್ಲಾಟ್‌ಫಾರ್ಮ್ ನಲ್ಲಿ ಕರೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಹಾಗಾಗಿ ಪತ್ತೆ ಹಚ್ಚುವುದು ಕಷ್ಟವಾಗಿದೆ. ಹಾಗಾಗಿ ಈಗ SIT ಕಾಲ್ ಹಿಸ್ಟರಿಯನ್ನು ಹುಡುತ್ತಿದೆ .ರಾಯ್ ಅವರ ಆತಹತ್ಯೆಗೆ ನಿಖರ ಕಾರಣವೇನೆಂಬುವುದು ಎಸ್‌ಐಟಿ ತನಿಖೆ ನಂತರ ತಿಳಿಯಬೇಕಷ್ಟೆ.






