ವಿಜಯನಗರ : ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ಕೇವಲ 2 ದಿನಗಳು ಮಾತ್ರ ಬಾಕಿ ಉಳಿದಿದೆ. ಸ್ಯಾಂಡಲ್ವುಡ್ನ ಸಾಕಷ್ಟು ಕಲಾವಿದರು ಪ್ರಚಾರದ ಅಖಾಡಕ್ಕೆ ಧುಮುಕಿದ್ದಾರೆ. ಕಿರುತೆರೆಯ ಖ್ಯಾತ ನಟಿ ಕನ್ನಡತಿ ಹಾಗೂ ಪುಟ್ಟಗೌರಿ ಮದುವೆ ಖ್ಯಾತಿಯ ನಟಿ ರಂಜನಿ ರಾಘವನ್ ಕೂಡ ಪ್ರಚಾರದ ಅಖಾಡದಲ್ಲಿ ಧುಮುಕಿದ್ದಾರೆ.
ಮಾಜಿ ಡಿಸಿಎಂ ದಿವಂಹತ ಎಂಪಿ ಪ್ರಕಾಶ್ ಪುತ್ರ ಲತಾ ಮಲ್ಲಿಕಾರ್ಜುನ ಕಾಂಗ್ರೆಸ್ನಿಂದ ಟಿಕೆಟ್ ವಂಚಿತರಾದ ಬಳಿಕ ಹರಪನಹಳ್ಳಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ಇವರ ಪರವಾಗಿ ರಂಜನಿ ರಾಘವನ್ ಮತಯಾಚಿಸಿದ್ದಾರೆ.
ಖ್ಯಾತ ಕನ್ನಡತಿ , ಆತ್ಮೀಯ ನೆಚ್ಚಿನ ನಟಿ ರಂಜನಿ ರಾಘವನ್ ಪ್ರೀತಿ ಪೂರ್ವಕವಾಗಿ ನನಗೆ ಬೆಂಬಲ ಸೂಚಿಸಲು ಬೆಂಗಳೂರಿನಿಂದ ಹರಪನಹಳ್ಳಿಗೆ ಆಗಮಿಸಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಲತಾ ಮಲ್ಲಿಕಾರ್ಜುನ ಪೋಸ್ಟ್ ಶೇರ್ ಮಾಡಿದ್ದಾರೆ .