
ಪರಿಸರವನ್ನು ರಕ್ಷಿಸಿ, ದೇಶವನ್ನ ರಕ್ಷಿಸಿ, ಸಂವಿಧಾನವನ್ನು ರಕ್ಷಿಸಿ, ಧರ್ಮವನ್ನು ರಕ್ಷಿಸಿ, ಸಂಸ್ಕೃತಿಯನ್ನು ರಕ್ಷಿಸಿ, ಮನುಷ್ಯತ್ವವನ್ನು ರಕ್ಷಿಸಿ; ಎಂಬ ಆತಂಕಕಾರಿ ಧ್ವನಿಗಳನ್ನು ಕೇಳುತ್ತಿರುತ್ತೇವೆ. ಆದರೆ ನಾನು ಎಲ್ಲರಲ್ಲಿ ಕೇಳಿಕೊಳ್ಳುವುದು ಮನೋಹಿತಾವಲಯ ಅಂದರೆ ಸೈಕಾಲಜಿಕಲ್ ಎನ್ವಿರಾನ್ಮೆಂಟ್ ರಕ್ಷಿಸಿ ಎಂದು. ನಮ್ಮ ಸೈಕಾಲಜಿಕಲ್ ಎನ್ವಿರಾನ್ಮೆಂಟ್ ರಕ್ಷಿಸಿದರೆ ಮನುಷ್ಯನ ಮನಸ್ಥಿತಿ ಮತ್ತು ಅವನ ಪರಿಸ್ಥಿತಿ ಎರಡು ಸುಧಾರಿಸುತ್ತದೆ. ಆಗ ಪರಿಸರ, ದೇಶ, ಸಂವಿಧಾನ ಧರ್ಮ ಸಂಸ್ಕೃತಿ ಮನುಷ್ಯತ್ವ ಎಲ್ಲದರ ಅರ್ಥವು ಆಗುತ್ತದೆ. ಅದರ ಬಗ್ಗೆ ಪ್ರಜ್ಞೆ ಮೂಡುತ್ತದೆ. ಅದನ್ನು ಹೇಗೆ ನಾವು ಬಳಸುವುದು ಎಂದು ತಿಳಿಯುತ್ತದೆ. ಆಗ ಅವು ತಂತಾನೆ ಉಳಿಯುತ್ತವೆ. ಅವು ನಮ್ಮನ್ನು ಮತ್ತು ನಮ್ಮ ಮುಂದಿನ ಪೀಳಿಗೆಗಳನ್ನು ಉಳಿಸುತ್ತವೆ.
ಮನೋಹಿತಾವಲಯ ಅಂದರೆ ಸೈಕಾಲಜಿಕಲ್ ಎನ್ವಿರಾನ್ಮೆಂಟ್ ಇದನ್ನು ರಕ್ಷಿಸುವುದು ಹೇಗೆ?
ಒಬ್ಬ ವ್ಯಕ್ತಿಯ ಆಲೋಚನೆ ನಡವಳಿಕೆ ಮತ್ತು ಚಟುವಟಿಕೆಗಳು ಎಲ್ಲವೂ ನಿರ್ಧರಿತವಾಗುವುದು ಆಯ ವ್ಯಕ್ತಿಯ ಮನಸ್ಥಿತಿಯ ಅನುಗುಣವಾಗಿ.
ಈ ಮನಸ್ಥಿತಿಯ ಆರೋಗ್ಯದ ಲಕ್ಷಣಗಳೆಂದರೆ

- ತನ್ನ ಆಲೋಚನೆಗಳನ್ನು ಭಾವನೆಗಳನ್ನು ಮತ್ತು ವರ್ತನೆಗಳನ್ನು ತಾನೇ ಗಮನಿಸಿಕೊಳ್ಳಲಾಗುವುದು. ಅದಕ್ಕೆ ಕಾರಣ ಏನು ಅಂತ ಕಂಡುಕೊಳ್ಳೋದು. ಅದರ ಪರಿಣಾಮಗಳು ಏನಾಗುತ್ತವೆ ಅಂತ ಅನ್ನುವುದರ ಬಗ್ಗೆ ದೂರದೃಷ್ಟಿಯನ್ನು ಮತ್ತು ಸೂಕ್ಷ್ಮ ದೃಷ್ಟಿಯನ್ನು ಹೊಂದಿರುವಂತಹ ಸಂವಿಧಾನ ಶೀಲತೆಯನ್ನು ಹೊಂದಿರುವುದು. ಸೆನ್ಸಿಟಿವ್ ಆಗಿ ಇರ್ತಾರೆ.
- ಎರಡನೆಯದಾಗಿ ಉಳಿಸುವ, ಬಾಳಿಸುವ ಮತ್ತು ಸಂರಕ್ಷಿಸುವ ಮನೋಗುಣವನ್ನು ಹೊಂದಿರುವುದು. ನಮ್ಮ ಭಾಷೆ ಸಂಬಂಧಗಳು ನಮ್ಮ ಮತ್ತು ಇತರರ ಬದುಕು ಎಲ್ಲವೂ ಕೂಡ ಉಳಿಯಬೇಕು ಮತ್ತು ಬಾಳಿಸಬೇಕು. ಈ ಸೂಕ್ಷ್ಮತೆ ಇಲ್ಲದೆ ವಿನಾಶಕಾರಿಯಾಗಿ ವರ್ತಿಸುವವನು ಯಾವುದೇ ರೀತಿಯಲ್ಲಾಗಲಿ ಆತ ಮಾನಸಿಕವಾಗಿ ಆರೋಗ್ಯದಲ್ಲಿ ಇರುವವನು ಅಲ್ಲ.
- ನಮ್ಮ ಈಗಿನ ವರ್ತನೆಗೆ ಹಿಂದಿನ ಯಾವುದೋ ಒಂದು ಪ್ರಚೋದನೆ ಅಥವಾ ಪ್ರೇರಣೆ ಇರುತ್ತದೆ. ಅದು ಏನು ಎಂದು ಗುರುತಿಸಿಕೊಳ್ಳುವುದು. ಮತ್ತು ಈಗ ನಾನು ಇಲ್ಲಿ ಹೀಗೆ ವರ್ತಿಸಿದರೆ ಮುಂದೆ ಎಂತಹ ಪರಿಣಾಮವಾಗುತ್ತದೆ, ಅದರಿಂದ ನನ್ನ ಮತ್ತು ನನ್ನ ಜೊತೆಯವರ ಬದುಕಿಗೆ ಏನಾಗುತ್ತದೆ, ನನ್ನ ಮುಂದಿನ ಪೀಳಿಗೆಗಳು ಎಂತಹ ಪರಿಸ್ಥಿತಿಯನ್ನು ಎದುರಿಸುತ್ತದೆ ಎಂಬ ಆಲೋಚನೆ ಮಾಡಲು ಆಗದೇ ಇದ್ದರೆ ಆತ ಮಾನಸಿಕವಾಗಿ ಅಸ್ವಸ್ಥನೆಂಬುದೇ ಖಚಿತ.

ಹಠಮಾರಿತನ ಜಿದ್ದುಗೇಡಿತನ ಸೇಡು ದ್ವೇಷ ಇವುಗಳಿಂದ ಆತ್ಮಹಾನಿ ಅಂದರೆ ತನ್ನನ್ನು ತಾನು ಹಾನಿ ಮಾಡಿಕೊಳ್ಳುವುದು ಕುಟುಂಬದ ಪರಿಸರವನ್ನು ಹಾಳು ಮಾಡುವುದು ತನ್ನ ಜೊತೆಯಲ್ಲಿರುವವರನ್ನು ಸಮಾಜವನ್ನು ಹಾಳು ಮಾಡುವುದು ಇವೆಲ್ಲವೂ ಕೂಡ ಮಾನಸಿಕ ಅಸ್ವಸ್ಥತೆಯ ಲಕ್ಷಣಗಳು.
ವ್ಯಕ್ತಿ ಒಂಟಿಯಾಗಲಿ ಅಥವಾ ಗುಂಪಿನಲ್ಲಾಗಲಿ ವಿನಾಶಕಾರಿ ರೀತಿಯಲ್ಲಿ ನಡೆಯುವುದಕ್ಕೆ ಕುಟುಂಬ, ಶಿಕ್ಷಕರು, ಸಾಮಾಜಿಕ ಪರಿಸರ, ಸಾಂಸ್ಕೃತಿಕ ಆಧ್ಯಾತ್ಮಿಕ ರಾಜಕೀಯ ನಾಯಕರು, ಲೇಖಕರು, ಭಾಷಣಕಾರರು ಮಾಧ್ಯಮದವರು ಎಲ್ಲರೂ ಕಾರಣರಾಗುತ್ತಾರೆ.
ವ್ಯಕ್ತಿ ಸಂವೇದನಶೀಲವಾಗಿರಬೇಕು ತನ್ನ ಮತ್ತು ಇತರರ ಜೀವ ಹಾಗೂ ಜೀವನವನ್ನು ಗೌರವಿಸುವಂತಿರಬೇಕು, ನನ್ನ ಬದುಕು ಮತ್ತು ಇತರರ ಬದುಕು ಬೆಲೆಯುಳ್ಳದ್ದು ಅದು ಹಾನಿಯಾಗಬಾರದು ಎಂಬ ಸೂಕ್ಷ್ಮತೆಯನ್ನು ತಿಳಿದಿರಬೇಕು.

ಈ ಆರೋಗ್ಯಕರ ಮನಸ್ಥಿತಿಯೂ ರೂಪಗೊಳ್ಳಲು ಎಲ್ಲರೂ ತಮ್ಮ ಮಾತುಗಳಲ್ಲಿ ವರ್ತನೆಗಳಲ್ಲಿ, ಕ್ರಿಯೆ ಹಾಗೂ ಪ್ರತಿಕ್ರಿಯೆಗಳಲ್ಲಿ ಪರಸ್ಪರ ಪೂರಕವಾಗಿ ಕೆಲಸ ಮಾಡಬೇಕು.
ನನ್ನ ಅಥವಾ ನಮ್ಮ ಯಾವ ಯಾವ ಮಾತುಗಳು ವರ್ತನೆಗಳು ಇತರರಲ್ಲಿ ವಿನಾಶಕಾರಿಯಾಗಿ ಪ್ರಚೋದಿಸುತ್ತದೆ ಎಂಬುದನ್ನು ಗಮನಿಸಿಕೊಂಡು ವರ್ತಿಸಿದರೆ ನಾವು ಮನೋಹಿತಾವಲಯ ರಕ್ಷಿಸಲು ಮುಂದಾಗಿದ್ದೇವೆ ಎಂದು ಅರ್ಥ.
ಮನಸ್ಥಿತಿ ಮತ್ತು ಪರಿಸ್ಥಿತಿ ಎರಡು ಒಂದಕ್ಕೊಂದು ಪೂರಕವಾಗಿರುತ್ತದೆ. ಮನಸ್ಥಿತಿಯನ್ನು ಸರಿಪಡಿಸಿಕೊಳ್ಳುತ್ತಾ ಹೋದರೆ ಪರಿಸ್ಥಿತಿಯು ಸರಿಹೋಗುತ್ತೆ. ಹಾಗೆಯೇ ವೈಸ್ ವರ್ಸಕೂಡ. ಒಬ್ಬರ ಆರೋಗ್ಯಕರವಾದ ಮನಸ್ಥಿತಿಯು ಮತ್ತೊಬ್ಬರ ಮನಸ್ಸು ಆರೋಗ್ಯಕರವಾಗಿರಲು ಸಹಕರಿಸುತ್ತದೆ.
ಇದು ಸಂಬಂಧಗಳಲ್ಲೂ ಹೌದು ಕುಟುಂಬದಲ್ಲೂ ಹೌದು ಸಮಾಜದಲ್ಲೂ ಹೌದು.