• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, February 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇತರೆ / Others

ʻಶಿವಣ್ಣನಿಗೆ ಹಣ ಅಷ್ಟೇ ಮುಖ್ಯʼ ಎಂದಿದ್ದ ಪ್ರಶಾಂತ್‌ ಸಂಬರ್ಗಿ: ಅಭಿಮಾನಿಗಳ ಆಕ್ರೋಶದ ಬೆನ್ನಲ್ಲೇ ಹೇಳಿಕೆ ವಾಪಸ್‌..!

ಪ್ರತಿಧ್ವನಿ by ಪ್ರತಿಧ್ವನಿ
May 8, 2023
in ಇತರೆ / Others, ಇದೀಗ
0
ʻಶಿವಣ್ಣನಿಗೆ ಹಣ ಅಷ್ಟೇ ಮುಖ್ಯʼ ಎಂದಿದ್ದ ಪ್ರಶಾಂತ್‌ ಸಂಬರ್ಗಿ: ಅಭಿಮಾನಿಗಳ ಆಕ್ರೋಶದ ಬೆನ್ನಲ್ಲೇ ಹೇಳಿಕೆ ವಾಪಸ್‌..!
Share on WhatsAppShare on FacebookShare on Telegram

ರಾಜ್ಯದಲ್ಲಿ ಚುನಾವಣಾ ರಣಕಹಳೆ ಮೊಳಗಿದೆ. ಇನ್ನೆರಡು ದಿನಗಳಲ್ಲಿ ಚುನಾವಣೆ ನಡೆಯಲಿದ್ದು, ಈಗಾಗಲೇ ಪಕ್ಷದ ನಾಯಕರು, ಮುಖಂಡರು ರಾಜ್ಯಾದ್ಯಂತ ಅಬ್ಬರ ಮತ ಪ್ರಚಾರ ನಡೆಸಿದ್ದಾರೆ. ಈ ಬಾರಿ  ರಾಜಕೀಯ ನಾಯಕರಿಗೆ ಸೆಲೆಬ್ರಿಟಿಗಳು ಕೂಡ ಸಾಥ್‌ ನೀಡಿದ್ರು, ಕಿಚ್ಚ ಸುದೀಪ್‌, ಶಿವರಾಜ್‌ ಕುಮಾರ್‌, ದುನಿಯಾ ವಿಜಯ್‌, ರಮ್ಯಾ ಸೇರಿದಂತೆ ಅನೇಕ ಕಲಾವಿದರು ರಾಜ್ಯದ ನಾನಾ ಕಡೆ ತೆರಳಿ ಮತಯಾಚಿಸಿದರು. ಈ ಹಿಂದೆ ಶಿವರಾಜ್‌ಕುಮಾರ್‌ ಕಾಂಗ್ರೆಸ್‌ ಪರ ಪ್ರಚಾರ ಮಾಡಿದ್ದಕ್ಕೆ ಕನ್ನಡದ ಬಿಗ್‌ಬಾಸ್‌ ಸ್ಪರ್ಧಿ ಪ್ರಶಾಂತ್‌ ಸಂಬರ್ಗಿ, ಸೋಶಿಯಲ್‌ ಮೀಡಿಯಾದಲ್ಲಿ  ಹಲವು ಪೋಸ್ಟ್‌ಗಳನ್ನ ಹಾಕಿ, ನಾಲಿಗೆ ಹರಿಬಿಟ್ಟಿದ್ದರು. ಪ್ರಶಾಂತ್‌ ಸಂಬರ್ಗಿ ನಡೆಗೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದ್ದಂತೆ, ಇದೀಗ ಪ್ರಶಾಂತ್‌ ಸಂಬರ್ಗಿ ತಮ್ಮ ಮಾತನ್ನ ಹಿಂಪಡೆದಿದ್ದಾರೆ. ‘ಶಿವಣ್ಣ ಯಾವಾಗಲೂ ಸ್ಕ್ರಿಪ್ಟ್ ಕೇಳಲ್ಲ. ಅವರಿಗೆ ಹಣ ಅಷ್ಟೇ ಮುಖ್ಯ. ಸಿನಿಮಾ ಫ್ಲಾಪ್ ಆದರೂ ಅವರು ಕೇಳುವುದಿಲ್ಲ. ಮತ್ತೆ ಹಣ ತೆಗೆದುಕೊಂಡು ಮತ್ತೊಂದು ಸಿನಿಮಾ ಸಹಿ ಮಾಡುತ್ತಾರೆ. ರಾಜಕೀಯದಲ್ಲೂ ಅವರದ್ದು ಅದೇ ಸೂತ್ರ. ಅಭ್ಯರ್ಥಿ ಗೆಲ್ಲಲಿ, ಬಿಡಲಿ ಹಣ ಬಂದ್ರೆ ಆಯ್ತು’ ಎಂದಿದ್ದರು. ಜೊತೆಗೆ ಕರ್ನಾಟಕಕ್ಕೆ ಅವರ ಕೊಡುಗೆ ಏನು ಅಂತ ಸಾಮಾಜಿಕ ಜಾಲತಾಣದಲ್ಲಿ ಪ್ರಶಾಂತ್‌ ಸಂಬರ್ಗಿ ಪ್ರಶ್ನೆ ಮಾಡಿದ್ದರು.

ADVERTISEMENT

ಪ್ರಶಾಂತ್‌ ಸಂಬರ್ಗಿ ಹೇಳಿಕೆಗೆ ಶಿವಣ್ಣನ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರು. ಪ್ರಶಾಂತ್‌ ಸಂಬರ್ಗಿ ಕ್ಷಮೆ ಕೇಳಬೇಕು ಅಂತ ಪಟ್ಟು ಹಿಡಿದಿದ್ದರು. ʻನನಗೇನು ಹಣ ಕಡಿಮೆ ಆಗಿದ್ಯಾ? ನಾನು ಮನಸ್ಸಿನ ಮಾತು ಕೇಳಿ ಬಂದಿದ್ದೀನಿ. ಅವರು ಆ ರೀತಿ ಮಾತನಾಡೋದು ಸರಿ ಅಲ್ಲ. ಮಾತನ್ನು ಅವರು ಹಿಂಪಡೆಯಲಿ’ ಅಂತ ಶಿವಣ್ಣ ಕೂಡ ಪ್ರಶಾಂತ್‌ ಸಂಬರ್ಗಿ ಹೇಳಿಕೆಗೆ ಪ್ರತಿಕ್ರಿಯಿಸಿದ್ದರು. ಇದೀಗ ಕೆಟ್ಟ ಮೇಲೆ ಬುದ್ಧಿ ಬಂತು ಅನ್ನೋ ಹಾಗೆ ಪ್ರಶಾಂತ್‌ ಸಂಬರ್ಗಿ ತಮ್ಮ ಮಾತನ್ನ ಹಿಂಪಡೆದಿದ್ದಾರೆ.

ʻಶಿವಣ್ಣ ಹಾಗೂ ಇನ್ನೊಬ್ಬ ನಮ್ಮ ಆಪ್ತಮಿತ್ರನೊಂದಿಗೆ ಇದೀಗ ತಾನೇ ಮಾತನಾಡಿದೆ. ಶಿವಣ್ಣ ಅವರು ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಸ್ನೇಹಿತರನ್ನು ಹೊಂದಿದ್ದಾರೆ. ತಂದೆಯ ಬಯಕೆಯಂತೆ ಶಿವಣ್ಣ ಅವರು ರಾಜಕೀಯದಿಂದ ದೂರವಾಗಿದ್ದಾರೆ. ನಾನು ಅವರ ಬಗ್ಗೆ ಬರೆದಿರುವ ನನ್ನ ಪೋಸ್ಟ್ ಅನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇನೆ. ಶಿವಣ್ಣ ಮತ್ತು ಅವರ ಅಭಿಮಾನಿಗಳಿಗೆ ಕರ್ನಾಟಕದಾದ್ಯಂತ ನೋಯಿಸಬಾರದೆಂದು ಬಯಸುತ್ತೇನೆʼ ಅಂತ ಸಾಮಾಜಿಕ ಜಾಲತಾಣದಲ್ಲಿ ಪ್ರಶಾಂತ್‌ ಸಂಬರ್ಗಿ ಬರೆದುಕೊಂಡಿದ್ದಾರೆ.

Tags: #actors#campaign#election2023#fans#karnataka#karnatakaassemblyelection#prashanthsambagi#sandalwood#shivanna#shivarajkumar
Previous Post

ಆರಾಧನಾ ಸಂಸ್ಕೃತಿಯ ರಾಜಕೀಯ ರೂಪ- ರೋಡ್‌ ಷೋ

Next Post

ಕಾಂಗ್ರೆಸ್​ ಬಹುಮತದಿಂದ ಗೆಲುವು ಸಾಧಿಸುವುದು ನಿಶ್ಚಿತ : ಹೆಚ್​. ವಿಶ್ವನಾಥ್​

Related Posts

ಅಣೆಕಟ್ಟು ಸುರಕ್ಷತೆ ಒಂದೇ ಇಲಾಖೆಯ ಜವಾಬ್ದಾರಿಯಲ್ಲ : ಸಿಎಂ ಸಿದ್ದರಾಮಯ್ಯ
Top Story

ಅಣೆಕಟ್ಟು ಸುರಕ್ಷತೆ ಒಂದೇ ಇಲಾಖೆಯ ಜವಾಬ್ದಾರಿಯಲ್ಲ : ಸಿಎಂ ಸಿದ್ದರಾಮಯ್ಯ

by ಪ್ರತಿಧ್ವನಿ
February 13, 2026
0

ಬೆಂಗಳೂರು :  ಭಾರತದಲ್ಲಿಯೇ ಅತಿ ಹೆಚ್ಚು ಅಣೆಕಟ್ಟುಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದ್ದು, ಅಣೆಕಟ್ಟು ಸುರಕ್ಷತೆ ಕುರಿತು ನಡೆಯುವ ಚರ್ಚೆಗಳಲ್ಲಿ ಅನುಭವ ಮತ್ತು ಜವಾಬ್ದಾರಿ ಎರಡನ್ನೂ ಹೊಂದಿದ್ದೇವೆ...

Read moreDetails
ಹೃದಯಾಘಾತ : ಹಿಟ್‌ ಚಿತ್ರಗಳ ನಿರ್ದೇಶಕ  ಜೋ ಸೈಮನ್‌ ಕೊನೆಯುಸಿರು..

ಹೃದಯಾಘಾತ : ಹಿಟ್‌ ಚಿತ್ರಗಳ ನಿರ್ದೇಶಕ ಜೋ ಸೈಮನ್‌ ಕೊನೆಯುಸಿರು..

February 13, 2026
ಆರೋಗ್ಯ ಇಲಾಖೆ ಅಧಿಕಾರಿ ವರ್ಗಾವಣೆಗೆ ಸಿಎಂ ಹೆಸರಲ್ಲಿ ನಕಲಿ  ಲೆಟರ್‌ : ಕಿಡಿಗೇಡಿಗಳ ವಿರುದ್ಧ ಕೇಸ್‌ ದಾಖಲು..

ಆರೋಗ್ಯ ಇಲಾಖೆ ಅಧಿಕಾರಿ ವರ್ಗಾವಣೆಗೆ ಸಿಎಂ ಹೆಸರಲ್ಲಿ ನಕಲಿ ಲೆಟರ್‌ : ಕಿಡಿಗೇಡಿಗಳ ವಿರುದ್ಧ ಕೇಸ್‌ ದಾಖಲು..

February 13, 2026
ಹಿರಿ ಜೀವದ ನರೇಗಾ ಯಶೋಗಾಥೆ : ನೆಮ್ಮದಿಯ ಬದುಕಿಗೆ “ಖಾತ್ರಿ”ಯಿದ್ದ ಉದ್ಯೋಗಕ್ಕೆ ಬೀಳದಿರಲಿ ಕತ್ತರಿ..!

ಹಿರಿ ಜೀವದ ನರೇಗಾ ಯಶೋಗಾಥೆ : ನೆಮ್ಮದಿಯ ಬದುಕಿಗೆ “ಖಾತ್ರಿ”ಯಿದ್ದ ಉದ್ಯೋಗಕ್ಕೆ ಬೀಳದಿರಲಿ ಕತ್ತರಿ..!

February 13, 2026
ಆರೋಗ್ಯ ಇಲಾಖೆ ಅಧಿಕಾರಿ, ಅಬಕಾರಿಗೆ ಟ್ರಾನ್ಸ್‌ಫರ್‌ : ಸಿದ್ದು ಸರ್ಕಾರದ ಕುರುಡು ನೀತಿಗೆ ಸಿಡಿದ ಬಿಜೆಪಿ..

ಆರೋಗ್ಯ ಇಲಾಖೆ ಅಧಿಕಾರಿ, ಅಬಕಾರಿಗೆ ಟ್ರಾನ್ಸ್‌ಫರ್‌ : ಸಿದ್ದು ಸರ್ಕಾರದ ಕುರುಡು ನೀತಿಗೆ ಸಿಡಿದ ಬಿಜೆಪಿ..

February 13, 2026
Next Post
ಕಾಂಗ್ರೆಸ್​ ಬಹುಮತದಿಂದ ಗೆಲುವು ಸಾಧಿಸುವುದು ನಿಶ್ಚಿತ : ಹೆಚ್​. ವಿಶ್ವನಾಥ್​

ಕಾಂಗ್ರೆಸ್​ ಬಹುಮತದಿಂದ ಗೆಲುವು ಸಾಧಿಸುವುದು ನಿಶ್ಚಿತ : ಹೆಚ್​. ವಿಶ್ವನಾಥ್​

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada