ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಕೇವಲ ಭಾರತ ಮಾತ್ರವಲ್ಲದೆ, ಹಲವು ವಿದೇಶಿ ಗಣ್ಯರು, ಹಲವು ದೇಶದ ಪ್ರಮುಖ ನಾಯಕರು ಈಗಾಗಲೇ ಪಾಲ್ಗೊಂಡಿರುವುದನ್ನು ಗಮನಿಸಿರ್ತೀರ. ಈ ಮಧ್ಯೆ ಸದಾ ವಿವಾದಗಳಿಂದಲೇ ಸುದ್ದಿಯಲ್ಲಿರುವ ಆಕೆ ಕೂಡ ಕುಂಭ ಮೇಳದಲ್ಲಿ ಮಿಂದೇಳುವ ಮೂಲಕ ಸುದ್ದಿಯಲ್ಲಿದ್ದಾಳೆ.

ಮಹಾಕುಂಭ ಮೇಳದಲ್ಲಿ ಜನಸಾಮಾನ್ಯರಿಂದ ಹಿಡಿದು ಸಲೆಬ್ರಿಟಿಗಳು ಭಾಗಿಯಾಗಿ ಪುಣ್ಯಸ್ನಾನ ಮಾಡ್ತಿದ್ದಾರೆ. ಅದೇ ರೀತಿ ಬಾಲಿವುಡ್ನ ಕಾಂಟ್ರವರ್ಸಿ ಕ್ಲೀನ್ ಪೂನಂ ಪಾಂಡೆ, ಕುಂಭಮೇಳದಲ್ಲಿ ಭಾಗಿಯಾಗಿ ಗಂಗೆಯಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ.

ಈ ಬಗ್ಗೆ ಪೂನಂ ಪಾಂಡೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಶೇರ್ ಮಾಡಿದ್ದು, ಗಂಗೆಯಲ್ಲಿ ಸ್ನಾನ ಮಾಡಿ ನನ್ನ ಪಾಪಗಳೇಲ್ಲವೂ ತೊಳೆದುಹೋಗಿದೆ ಅಂತ ಬರೆದುಕೊಂಡಿದ್ದಾರೆ.