ಮೇಷ ರಾಶಿಯ ಈ ದಿನದ ಭವಿಷ್ಯ

ಮೇಷ ರಾಶಿಯವರಿಗೆ ಹೊಸ ಕಾರ್ಯಾ ಆರಂಭಿಸಲು ಇಂದು ಉತ್ತಮವಾದ ದಿನ. ಕೌಟುಂಬಿಕ ಜೀವನ ಉತ್ತಮವಾಗಿರಲಿದೆ. ಖರ್ಚುಗಳು ಹೆಚ್ಚಾಗುವ ಸಾಧ್ಯತೆ ಇದೆ. ಆರೋಗ್ಯ ಉತ್ತಮವಾಗಿರಲಿದೆ. ಯೋಗ ಧ್ಯಾನದ ಬಗ್ಗೆ ಹೆಚ್ಚಿನ ಗಮನ ವಹಿಸಿ. ಹಳೆಯ ಸ್ನೇಹಿತರನ್ನು ಭೇಟಿಯಾಗಲಿದ್ದು ಸಂತೋಷ ದುಪ್ಪಟ್ಟಾಗಲಿದೆ. ವಿದ್ಯಾರ್ಥಿಗಳಿಗೆ ಯಾವುದೇ ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಉತ್ತಮವಾದ ದಿನ.
ವೃಷಭ ರಾಶಿಯ ಈ ದಿನದ ಭವಿಷ್ಯ

ವೃಷಭ ರಾಶಿಯವರಿಗೆ ಇಂದು ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಹಣಕಾಸು ವಿಷಯದಲ್ಲಿ ಚಿಂತೆ ಕಾಡಬಹುದು ಆದರೆ ಸ್ನೇಹಿತರ ಸಹಾಯದಿಂದ ಈ ಸಮಸ್ಯೆ ವೇಗವಾಗಿ ನಿವಾರಣೆಯಾಗುತ್ತದೆ. ಬಹುದಿನದ ಯೋಜನೆಯೊಂದು ಯಶಸ್ವಿಯಾಗುತ್ತವೆ. ಕೌಟುಂಬಿಕವಾಗಿ ಸಂತೋಷದ ವಾತಾವರಣ ಇರಲಿದೆ.
ಮಿಥುನ ರಾಶಿಯ ಈ ದಿನದ ಭವಿಷ್ಯ

ಮಿಥುನ ರಾಶಿಯವರಿಗೆ ಇಂದು ಹೊಸ ಹೊಸ ಅವಕಾಶಗಳು ಸಿಗಲಿದೆ. ಕಚೇರಿಯಲ್ಲಿ ಮೇಲಾಧಿಕಾರಿಗಳಿಂದ ಮೆಚ್ಚುಗೆ ಪಡೆಯುವಿರಿ. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ಇಂದು ಸಾಮಾಜಿಕ ವಲಯದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ಖರ್ಚು ವೆಚ್ಚದಲ್ಲಿ ಎಚ್ಚರಿಕೆ ಇರಲಿ.
ಕರ್ಕಾಟಕ ರಾಶಿಯ ಈ ದಿನದ ಭವಿಷ್ಯ

ಕರ್ಕಾಟಕ ರಾಶಿಯವರು ಇಂದು ತನ್ನ ನಡೆ ನುಡಿಯ ಬಗ್ಗೆ ಎಚ್ಚರಿಕೆಯಿಂದ ಇರುವುದು ಉತ್ತಮ. ಇಂದು ನೀವು ಆಡಿದ ಮಾತು ಬಹುದೊಡ್ಡ ಪರಿಣಾಮ ಬೀರಬಹುದು. ಧ್ಯಾನದತ್ತ ಗಮನ ಹರಿಸುವುದು ಉತ್ತಮ. ಕುಟುಂಬದಲ್ಲಿ ಶಾಂತಿ ಕೆಡದಂತೆ ನೋಡಿಕೊಳ್ಳಿ. ಹಣ ಮಂಜಿನಂತೆ ಕರಗಿ ಹೋಗುವ ಸಾಧ್ಯತೆಯಿದ್ದು, ವೆಚ್ಚದಲ್ಲಿ ಎಚ್ಚರಿಕೆ ಇರಲಿ.
ಸಿಂಹ ರಾಶಿಯ ಈ ದಿನದ ಭವಿಷ್ಯ

ಬಹು ದಿನಗಳಿಂದ ನಿಮ್ಮ ಕೈ ಸೇರಬೇಕಾದ ಹಣ ಇಂದು ನಿಮ್ಮ ಕೈ ಸೇರುತ್ತದೆ. ಸಿಂಹ ರಾಶಿಯವರ ಆರ್ಥಿಕ ಸ್ಥಿತಿ ಬಲವಾಗುತ್ತದೆ. ಉದ್ಯೋಗದಲ್ಲಿ ಹೊಸ ಹೊಸ ಅವಕಾಶಗಳು ಸಿಗಲಿದ್ದು, ಮನಸ್ಸಿಗೆ ನೆಮ್ಮದಿ ಸಿಗಲಿದೆ. ಧಾರ್ಮಿಕ ಸ್ಥಳಗಳಿಗೆ ಕುಟುಂಬ ಸಮೇತರಾಗಿ ಭೇಟಿ ನೀಡಿ. ಆಧ್ಯಾತ್ಮಿಕ ಚಿಂತನೆಗೆ ಹೆಚ್ಚಿನ ಸಮಯ ಸಿಗಲಿದೆ.
ಕನ್ಯಾ ರಾಶಿಯ ಈ ದಿನದ ಭವಿಷ್ಯ

ಕನ್ಯಾ ರಾಶಿಯವರಿಗೆ ಗುರುವಿನ ನೆರಳು ಇರುವ ಕಾರಣ ಹೊಸ ಯೋಜನೆಗಳಿಗೆ ಹಣ ಹೂಡಿಕೆ ಮಾಡಲು ಇದು ಸಕಾಲ. ವೃತ್ತಿ ಜೀವನದಲ್ಲಿ ಪ್ರಗತಿ ಸಿಗಲಿದೆ. ಬಹು ದಿನಗಳಿಂದ ಬಳಲುತ್ತಿದ್ದ ಕಾಯಿಲೆಯಿಂದ ಮುಕ್ತಿ ಸಿಗಲಿದೆ. ಮಾತುಗಳಲ್ಲಿ ಎಚ್ಚರಿಕೆ ಇರಲಿ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಸಿಗಲಿದೆ.
ತುಲಾ ರಾಶಿಯ ಈ ದಿನದ ಭವಿಷ್ಯ

ತುಲಾ ರಾಶಿಯವರಿಗೆ ಹಲವು ದಿನದಿಂದ ಕೈ ಸೇರಬೇಕಾದ ಹಣ ಇಂದು ವಾಪಾಸ್ ಸಿಗುವ ಸಾಧ್ಯತೆ ಇದೆ. ದೂರ ಪ್ರವಾಸದ ಅವಕಾಶ ಸಿಗಲಿದೆ. ಕೌಟುಂಬಿಕವಾಗಿ ನೆಮ್ಮದಿಯ ವಾತಾವರಣ ಇರಲಿದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ಕಚೇರಿಯಲ್ಲಿ ಕೆಲಸದ ಒತ್ತಡ ಕಡಿಮೆಯಾಗಲಿದೆ.
ವೃಶ್ಚಿಕ ರಾಶಿಯ ಈ ದಿನದ ಭವಿಷ್ಯ

ವೃಶ್ಚಿಕ ರಾಶಿಯವರಿಗೆ ಇಂದು ಸಂತಸದ ವಾತಾವರಣ ಇರಲಿದೆ. ಅಲ್ಪ ಖರ್ಚುಗಳು ಇರಲಿದೆ. ಆಪ್ತರನ್ನು ಭೇಟಿಯಾಗಲಿದ್ದೀರಿ. ಆರೋಗ್ಯ ಸುಧಾರಿಸಲಿದೆ. ವಿದ್ಯಾರ್ಥಿಗಳಿಗೆ ಉತ್ತಮವಾದ ದಿನ. ಇಂದು ಸಂಜೆ ವೇಳೆಗೆ ಮನಃಶಾಂತಿ ಹೆಚ್ಚಲಿದೆ. ಕೌಟುಂಬಿಕವಾಗಿ ಉತ್ತಮ ಸಮಯ ಕಳೆಯುವಿರಿ.
ಧನು ರಾಶಿಯ ಈ ದಿನದ ಭವಿಷ್ಯ

ಧನು ರಾಶಿಯವರಿಗೆ ಇಂದು ದೂರ ಪ್ರಯಾಣದ ಅವಕಾಶ ಸಿಗಲಿದೆ. ಹಣಕಾಸಿನ ವ್ಯವಹಾರಗಳಲ್ಲಿ ಎಚ್ಚರಿಕೆ ಅಗತ್ಯ. ಅನ್ಯರೊಂದಿಗೆ ಹಣಕಾಸಿನ ವ್ಯವಹಾರ ಮಾಡುವ ಮುನ್ನ ಎಚ್ಚರಿಕೆ ವಹಿಸಿ. ಅತಿ ಮುಖ್ಯ ವಿಷಯಗಳಿಗೆ ಆತ್ಮೀಯರ ಸಲಹೆ ಪಡೆಯಿರಿ. ಆರೋಗ್ಯದಲ್ಲಿ ಎಚ್ಚರಿಕೆ ಇರಲಿ. ವಾಹನ ಚಾಲನೆಯಲ್ಲಿ ಜಾಗ್ರತೆವಹಿಸುವುದು ಉತ್ತಮ.
ಮಕರ ರಾಶಿಯ ಈ ದಿನದ ಭವಿಷ್ಯ

ಮಕರ ರಾಶಿಯವರಿಗೆ ಈ ದಿನ ಉತ್ತಮವಾಗಿರಲಿದೆ. ಮನೆಯಲ್ಲಿ ನೆಮ್ಮದಿಯ ವಾತಾವರಣ ಇರಲಿದೆ. ಮಾನಸಿಕ ಒತ್ತಡ ಕಡಿಮೆಯಾಗಲಿದೆ. ಹಣದ ಹರಿವು ಕೂಡ ಉತ್ತಮವಾಗಿರಲಿದ್ದು, ದಿನದ ಕೊನೆಯಲ್ಲಿ ಬಹು ಕಾಲದಿಂದ ನಿರೀಕ್ಷಿಸುತ್ತಿದ್ದ ಸಂತೋಷದ ಸುದ್ದಿ ಸಿಗಲಿದೆ.
ಕುಂಭ ರಾಶಿಯ ಈ ದಿನದ ಭವಿಷ್ಯ

ಕುಂಭ ರಾಶಿಯವರಿಗೆ ಆರೋಗ್ಯದಲ್ಲಿ ಏರುಪೇರಾಗಲಿದ್ದು, ಆಹಾರ ಸೇವನೆಯಲ್ಲಿ ಎಚ್ಚರಿಕೆ ಇರಲಿ. ಕೌಟುಂಬಿಕವಾಗಿ ಉತ್ತಮ ದಿನವಾಗಿರಲಿದೆ. ಸ್ನೇಹಿತರ ಸಹಕಾರದಿಂದ ಬಹು ಮುಖ್ಯವಾದ ಕೆಲಸ ಯಶಸ್ವಿಯಾಗಲಿದೆ. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ಮನಸ್ಸಿಗೆ ನೆಮ್ಮದಿ ಇರಲಿದೆ.
ಮೀನ ರಾಶಿಯ ಈ ದಿನದ ಭವಿಷ್ಯ

ಮೀನ ರಾಶಿಯವರಿಗೆ ಸ್ನೇಹಿತರಿಂದ ಸಹಾಯ ಸಿಗಲಿದೆ. ವ್ಯರ್ಥ ಖರ್ಚುಗಳಿಂದ ತಪ್ಪಿಸಿಕೊಳ್ಳಿ. ಆಧ್ಯಾತ್ಮಿಕ ಚಿಂತನೆಗೆ ಸಮಯ ನೀಡುವುದು ಉತ್ತಮ. ಯೋಗ ಧ್ಯಾನದತ್ತ ಗಮನ ಹರಿಸಿ. ಕುಟುಂಬದ ಹಿರಿಯರಿಂದ ಪ್ರೋತ್ಸಾಹ ಸಿಗುತ್ತದೆ. ಕೌಟುಂಬಿಕವಾಗಿ ಉತ್ತಮ ವಾತಾವರಣ ಇರಲಿದೆ.











