ಬಾಲಿವುಡ್ ನಟ ಸೈಫ್ ಅಲಿಖಾನ್ಗೆ (Saif alikhan) ಚಾಕು ಇರಿದ ಪ್ರಕರಣದಲ್ಲಿ ಇದೀಗ ಮುಂಬೈ ಪೊಲೀಸರು (Mumbai police) ಆರೋಪಿ ಅರೆಸ್ಟ್ ಮಾಡಿದ್ದಾರೆ. ಕಳ್ಳತನ ಮಾಡಲು ಮಧ್ಯರಾತ್ರಿ ಸೈಫ್ ಅಲಿ ಖಾನ್ ಮನೆಗೆ ನುಗ್ಗಿದ್ದ ಕಳ್ಳ,ನಟನಿಗೆ ಕುತ್ತಿಗೆ ಸೇರಿ ಸುಮಾರು 5 ಕಡೆಗಳಲ್ಲಿ ಚಾಕುವಿನಿಂದ ಇರಿದು ಪರಾರಿಯಾಗಿದ್ದ.

ಈ ಘಟನೆ ನಡೆದ 30 ಗಂಟೆಗಳಲ್ಲಿ ಚಾಕು ಇರಿದು ಎಸ್ಕೇಪ್ ಆಗಿದ್ದ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಚಾಕು ದಾಳಿ ಮಾಡಿ ದಾಳಿಕೋರನನ್ನ ಬಂಧಿಸಿದ ಮುಂಬೈ ಪೊಲೀಸರು,ಆರೋಪಿಯನ್ನ ಬಾಂದ್ರಾ ಠಾಣೆಗೆ ಕರೆತಂದಿದ್ದಾರೆ .
ಜನವರಿ 15 ರ ಮಧ್ಯರಾತ್ರಿ ೨:೩೦ರ ಸುಮಾರಿಗೆ ನಟ ಸೈಫ್ ಅಲಿ ಖಾನ್ ಮನೆಗೆ ನುಗ್ಗಿದ್ದ ಖದೀಮ, ನಟನಿಗೆ ಚಾಕುವಿನಿಂದ ಇರುದ್ ಎಸ್ಕೇಪ್ ಆಗಿದ್ದ. ನಿನ್ನೆಯಷ್ಟೇ ದುಷ್ಕರ್ಮಿಯ ಸಿಸಿಟಿವಿ ಫೂಟೇಜ್ ಲಭ್ಯವಾಗಿತ್ತು. ಹೀಗಾಗಿ ಇಂದು ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಬಾಂದ್ರಾ ಠಾಣೆಯಲ್ಲಿ ಆರೋಪಿಯ ತೀವ್ರ ವಿಚಾರಣೆ ನಡೆಸಲಾಗುತ್ತಿದೆ.