• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, February 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ರಾಜಕೀಯ

ಶೀಘ್ರದಲ್ಲೇ ಸಂಸದ ಪ್ರತಾಪ್​ ಸಿಂಹ ರಾಜಕೀಯ ಜೀವನ ಕೊನೆಗೊಳ್ಳುತ್ತೆ : ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್​

Any Mind by Any Mind
June 16, 2023
in ರಾಜಕೀಯ
0
ಶೀಘ್ರದಲ್ಲೇ ಸಂಸದ ಪ್ರತಾಪ್​ ಸಿಂಹ ರಾಜಕೀಯ ಜೀವನ ಕೊನೆಗೊಳ್ಳುತ್ತೆ : ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್​
Share on WhatsAppShare on FacebookShare on Telegram

ಬೆಂಗಳೂರು : ಪ್ರತಾಪ್ ಸಿಂಹ ಅವರೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಿಮ್ಮ ಎಂಟು ವಿಧಾನಸಭಾ ಕ್ಷೇತ್ರದಲ್ಲಿ ಯಾಕೆ ಪ್ರಚಾರ ಮಾಡಲಿಲ್ಲ. ಅಲ್ಲೇಲ್ಲಾ ನೀವು ಅಡ್ಜಸ್ಟ್ಮೆಂಟ್ ರಾಜಕಾರಣ ಮಾಡಿದ್ದೀರಾ. 2024ರ ಚುನಾವಣೆಯಲ್ಲಿ ನಿಮ್ಮ ಪೊಲಿಟಿಕಲ್ ಲೈಫ್ ಎಂಡ್ ಆಗುತ್ತೆ. ಬಿಜೆಪಿಯವರೆ ನಿಮ್ಮನ್ನ ಸೋಲಿಸುವ ಕೆಲಸ ಮಾಡ್ತಾರೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಗುಡುಗಿದರು.

ADVERTISEMENT

ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಂ.ಲಕ್ಷ್ಮಣ್, ವಿರೋಧ ಪಕ್ಷವಾಗಿ ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡ್ತಿರೋದು ರಾಜ್ಯದ ದುರಂತ. ಸಂಸದ ಪ್ರತಾಪ್‌ ಸಿಂಹ, ಸಿ.ಟಿ‌ ರವಿ, ಅಶೋಕ್ ಚುನಾವಣೆ ಸೋತ ದಿನದಿಂದ ಕಾಂಗ್ರೆಸ್ ಪಕ್ಷವನ್ನ ಅಟ್ಯಾಕ್ ಮಾಡ್ತಿದ್ದಾರೆ. ಪ್ರತಾಪ್ ಸಿಂಹ ಅಡ್ಜಸ್ಟ್ಮೆಂಟ್ ರಾಜಕಾರಣದ ಬಗ್ಗೆ ಮಾತನಾಡಿದ್ದಾರೆ. ಹಾಗಾದ್ರೆ ನಿಮ್ಮ ಪಕ್ಷದಲ್ಲಿ ಯಾರು ಅಡ್ಜಸ್ಟ್ಮೆಂಟ್ ಮಾಡ್ಕೊಂಡಿದ್ರು ಹೇಳಿ..? 2014 ರಲ್ಲಿ ನೀವು ಹೇಗೆ ಗೆದ್ರಿ ಹೇಳಿ. ನೀವು ಗೆಲ್ಲಲು ಯಾರು ಸಪೋರ್ಟ್ ಮಾಡಿದ್ರು, ಯಾವ ಪಕ್ಷದವ್ರನ್ನ ಕಾಲಿಡ್ಕೊಂಡಿದ್ರಿ 2019 ರಲ್ಲಿ ಹೇಗೆ ಗೆದ್ರಿ ಹೇಳಿ…? ನೀವು ಪ್ರತಿನಿಧಿಸುವ ಮೈಸೂರು ಕೊಡಗು ವ್ಯಾಪ್ತಿಯಲ್ಲಿ ಎಲ್ಲಿ ಪ್ರಚಾರ ಮಾಡಿದ್ರಿ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಯಾವ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರ ಮಾಡಿದ್ರಿ..? ವರುಣ ಕ್ಷೇತ್ರದಲ್ಲಿ ಪ್ರಚಾರ ಮಾಡ್ತಿದ್ರಿ. ನಿಮ್ಮ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರದಲ್ಲಿ ಯಾಕೆ ಪ್ರಚಾರ ಮಾಡ್ಲಿಲ್ಲ. ಅಲ್ಲೇಲ್ಲಾ ನೀವು ಅಡ್ಜಸ್ಟ್ಮೆಂಟ್ ರಾಜಕಾರಣ ಮಾಡಿದ್ದೀರಾ ಎಂದು ಕುಟುಕಿದರು.

ಸಿದ್ದರಾಮಯ್ಯನವರ ವಿರುದ್ಧ ತೊಡೆ ತಟ್ಟಿದ್ರಿ. ಜನ ಏನು ಮಾಡಿದ್ರು ಗೊತ್ತಾಯ್ತಾ..? 2018ರಲ್ಲಿ ಪಾಪ ನಿಮ್ಮ ಮನೆಯವರು ಒಟ್ಟಾಗಿ ಕ್ಯಾನ್ವಾಸ್ ಮಾಡಿದ್ರಿ. 2019ರಲ್ಲೂ ನೀವು ನಿಮ್ಮ ಮನೆಯವರು ಕ್ಯಾನ್ವಾಸ್ ಮಾಡಿದ್ರಿ. ಆದ್ರೆ ಈ ಬಾರಿ ಚುನಾವಣೆಯಲ್ಲಿ ನಿಮ್ಮ ಮನೆಯವರು ಎಲ್ಲೂ ಕಾಣಲಿಲ್ಲ. ಯಾಕೆ ಅಡ್ಜಸ್ಟ್ಮೆಂಟ್ ರಾಜಕಾರಣ ಮಾಡಿದ್ರಿ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ನಿಮ್ಮ ಕಾರ್ಯ ಏನು…? ನೀವು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಬ್ಲ್ಯಾಕ್ ಮೆಲ್ ಮಾಡ್ತಿದ್ದಿರಿ. ಅದಕ್ಕೆ ಅಲ್ಲಿಗೆ ಹೋಗ್ತಿರಾ..? ಎಂದು ಕಿಡಿಕಾರಿದರು.

ಅಕ್ಕಿ ವಿಚಾರದಲ್ಲಿ ಕೇಂದ್ರ ಸರ್ಕಾರ ಬಡಬಗ್ಗರ ಹೊಟ್ಟೆಯ ಮೇಲೆ ಹೊಡೆಯುತ್ತಿದೆ. ಬೇರೆ ಬೇರೆ ರಾಜ್ಯದಲ್ಲಿ ನಾವು ಅಕ್ಕಿಯನ್ನ ಪರ್ಚೇಸ್ ಮಾಡ್ತೀವಿ. ಅದಕ್ಕೆ ಸಂಬಂಧಿಸಿದಂತೆ ಚರ್ಚೆ ಆಗಿದೆ. ಕಳೆದ ಒಂದು ವಾರದಿಂದ ಬಿಜೆಪಿಯವ್ರು ಮೈಮೇಲೆ ಚೇಳು ಬಿಟ್ಕೊಂಡವರ ಆಗೆ ಆಡ್ತಿದ್ದಾರೆ. ವಿದ್ಯುತ್ ದರ ಹೆಚ್ಚಾಗಿದೆ ಅಂತಾ ನಮ್ಮ ಮೇಲೆ ಸುಳ್ಳು ಹೇಳ್ತಿದ್ದಾರೆ. ಆದರೆ ಈಗ ದರ ಏರಿಕೆ ಆಗಿರೋದು. ಬಿಜೆಪಿಯವರು ಅಧಿಕಾರದಲ್ಲಿ ಇದ್ದಾಗ ಒಟ್ಟು 5 ರೂಪಾಯಿ 62 ಪೈಸಾ ಹೆಚ್ಚಾಗಿದೆ. ಈಗ 70 ಪೈಸಾ ಹೆಚ್ಚಾಗಿರೋದು ಬಿಜೆಪಿ ಸರ್ಕಾರದ್ದೆ,ನಮ್ಮದಲ್ಲಾ. ಇವರು ಸುಳ್ಳು ಹೇಳ್ತಾರಲ್ಲ ಇವರಿಗೆ ಯಾವುದರಲ್ಲಿ ಹೊಡಿಬೇಕು. ಈವಾಗ ಎಲ್ಲಾ ಹಾರಾಡ್ತಾರೆ. ಹಿಂದೆ ವಿದ್ಯುತ್ ದರ ಹೆಚ್ಚಾದಾಗ ಯಾಕೆ ಸೌಂಡ್ ಮಾಡ್ಲಿಲ್ಲ. ಈಗ ಕಾಣ್ತಿದ್ಯಾ ನಿಮಗೆ. ಬಿಜೆಪಿಯ ಅಂದಾಭಿಮಾನಿಗಳು ಈಗ ಪ್ರತಿಭಟನೆ ಮಾಡ್ತಾರಂತೆ ಎಂದು ಎಂ.ಲಕ್ಷ್ಮಣ್ ಲೇವಡಿ ಮಾಡಿದರು.
ಪ್ರತಾಪ್ ಸಿಂಹ ಅವರೇ 2024 ರಲ್ಲಿ ನಡೆಯುವ ಚುನಾವಣೆಯಲ್ಲಿ ನಿಮ್ಮ ಪೊಲಿಟಿಕಲ್ ಲೈಫ್ ಎಂಡ್ ಆಗುತ್ತೆ. ನಿಮ್ಮನ್ನ ಸೋಲಿಸುವ ಕೆಲಸವನ್ನ ಬಿಜೆಪಿಯವ್ರೆ ಮಾಡ್ತಾರೆ. ನೀವು ಒಬ್ಬರೇ ಪ್ರೆಸ್ ಮೀಟ್ ಮಾಡ್ತಿದ್ದಿರಿ. ನಿಮ್ಮ ಜೊತೆಗೆ ಯಾವ ಒಬ್ಬ ನಾಯಕ ಬರಲ್ಲ. ಹೋಗಿ ಪಿರಿಯಾಪಟ್ಟಣ, ಚಾಮುಂಡೇಶ್ವರಿ, ಹುಣಸೂರು ಭಾಗದಲ್ಲಿ ಪ್ರೆಸ್ ಮೀಟ್ ಮಾಡಿ ನೋಡಣ. ಅಲ್ಲಿ ಹೋದ ತಕ್ಷಣ ನಿಮ್ಮ ಕಾರ್ಯಕರ್ತರೇ ಹೊಡಿತಾರೆ ನಿಮಗೆ. ಮಡಿಕೇರಿಗೆ ಪ್ರತಾಪ್ ಸಿಂಹ ಯಾವಾಗ ಬರ್ತಾರೆ ಅಂತಾ ಭೋಪಯ್ಯ, ಅಪ್ಪಚ್ಚು ರಂಜನ್ ಕಾಯುತ್ತಿದ್ದಾರೆ. ಮೈಸೂರಿನಲ್ಲಿ ನಾಗೇಂದ್ರ ಕಾಯುತ್ತಿದ್ದಾರೆ. ಅಡ್ಜಸ್ಟ್ಮೆಂಟ್ ರಾಜಕೀಯ ಮಾಡುತ್ತಿರುವ ಪ್ರತಾಪ್ ಸಿಂಹ ನಿಮಗೆ ಚಳಿ ಬಿಡಿಸ್ತಾರೆ. ಇತ್ತೀಚಿಗೆ ಪ್ರತಾಪ್ ಸಿಂಹ ಮಡಿಕೇರಿಗೆ ಹೋದಾಗ ಹಂದಿ ಹಿಂದೆಯಿಂದ ಬಂದು ಕಚ್ಬಿಡ್ತಂತೆ. ಅದಕ್ಕೆ ಪ್ರತಾಪ್ ಸಿಂಹ ಇತ್ತೀಚೆಗೆ ಜಾಸ್ತಿ ಕಿರ್ಚಾಡ್ತಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್ ವಾಗ್ದಾಳಿ ನಡೆಸಿದರು.

Tags: BangaloreBJPCentral GovernmentKPCC Spokesperson M. LaxmanPratap SinghState Government
Previous Post

ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿ 10 ಐಎಎಸ್​​ ಅಧಿಕಾರಿಗಳ ಪಟ್ಟಿ ಇಲ್ಲಿದೆ

Next Post

ಕಿಯೋನಿಕ್ಸ್‌ ಸಂಸ್ಥೆಯನ್ನು ಪ್ರಸ್ತುತತೆಗೆ ಅನುಗುಣವಾಗಿ ಸಜ್ಜುಗೊಳಿಸಲು ಸಚಿವ ಪ್ರಿಯಾಂಕ್‌ ಖರ್ಗೆ ನಿರ್ದೇಶನ

Related Posts

ಕೇಳಚಂದ್ರ ಫೌಂಡೇಷನ್‌ ನಿಂದ ಕೌಶಲ್ಯ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ
Top Story

ಕೇಳಚಂದ್ರ ಫೌಂಡೇಷನ್‌ ನಿಂದ ಕೌಶಲ್ಯ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ

by ಪ್ರತಿಧ್ವನಿ
February 10, 2026
0

  ಬೆಂಗಳೂರು, ಫೆ. 10, 2026: ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಕೆ.ಜಿ. ಹಳ್ಳಿಯ ಕೇಳಚಂದ್ರ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ ವಿವಿಧ ಕೌಶಲಗಳ ತರಬೇತಿ ಪೂರ್ಣಗೊಳಿಸಿದ ಮಹಿಳೆಯರಿಗೆ ಕೇಳಚಂದ್ರ...

Read moreDetails
ಜಿ.ಟಿ ದೇವೇಗೌಡ ಈಗ ಮಹಾನ್ ನಾಯಕರ ಜೊತೆ ಇದ್ದಾರೆ: ಕುಮಾರಸ್ವಾಮಿ ವಾಗ್ದಾಳಿ

ಜಿ.ಟಿ ದೇವೇಗೌಡ ಈಗ ಮಹಾನ್ ನಾಯಕರ ಜೊತೆ ಇದ್ದಾರೆ: ಕುಮಾರಸ್ವಾಮಿ ವಾಗ್ದಾಳಿ

February 8, 2026
ನವಲಗುಂದ ವಿಧಾನಸಭಾ ಕ್ಷೇತ್ರದ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದ ಸಚಿವ ಸಂತೋಷ್‌ ಲಾಡ್

ನವಲಗುಂದ ವಿಧಾನಸಭಾ ಕ್ಷೇತ್ರದ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದ ಸಚಿವ ಸಂತೋಷ್‌ ಲಾಡ್

February 7, 2026
ಕೋಲಾರ-ಚಿಕ್ಕಬಳ್ಳಾಪುರ ಜನತೆಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ

ಕೋಲಾರ-ಚಿಕ್ಕಬಳ್ಳಾಪುರ ಜನತೆಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ

February 7, 2026
BIG BREAKING: ಕನಕಪುರ ಶ್ರೀನಿವಾಸ್ ವಿರುದ್ಧ ನಿರ್ದೇಶಕ ಪ್ರೇಮ್ ದೂರು

BIG BREAKING: ಕನಕಪುರ ಶ್ರೀನಿವಾಸ್ ವಿರುದ್ಧ ನಿರ್ದೇಶಕ ಪ್ರೇಮ್ ದೂರು

February 7, 2026
Next Post
ಕಿಯೋನಿಕ್ಸ್‌ ಸಂಸ್ಥೆಯನ್ನು ಪ್ರಸ್ತುತತೆಗೆ ಅನುಗುಣವಾಗಿ ಸಜ್ಜುಗೊಳಿಸಲು ಸಚಿವ ಪ್ರಿಯಾಂಕ್‌ ಖರ್ಗೆ ನಿರ್ದೇಶನ

ಕಿಯೋನಿಕ್ಸ್‌ ಸಂಸ್ಥೆಯನ್ನು ಪ್ರಸ್ತುತತೆಗೆ ಅನುಗುಣವಾಗಿ ಸಜ್ಜುಗೊಳಿಸಲು ಸಚಿವ ಪ್ರಿಯಾಂಕ್‌ ಖರ್ಗೆ ನಿರ್ದೇಶನ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada