ಪ್ರಧಾನಿ ನರೇಂದ್ರ ಮೋದಿ ಭಾಷಣ ಆರಂಭಿಸುತ್ತಿದ್ದಂತೆ ವಿಪಕ್ಷಗಳು ಗಲಾಟೆ ಶುರು ಮಾಡಿದರು. ಸಭಾಪತಿ ಹೇಳಿದರೂ ಕೇಳದ ವಿರೋಧ ಪಕ್ಷದ ನಾಯಕರು ಜೋರಾಗಿ ಘೋಷಣೆಗಳನ್ನ ಕೂಗಿದರು. ಮೋದಿ ಇಲ್ಲಿ ಕೂಲ್ ಆಗಿ ಎಲ್ಲವನ್ನು ಎದುರಿಸಿದರು.

ಸಭಾಪತಿಗಳೇ, ಖರ್ಗೆ ಅವರು ಎದ್ದು ನಿಂತು ವಿರೋಧ ಮಾಡ್ತಾ ಇದ್ದಾರೆ. ದಯವಿಟ್ಟು ಅವರನ್ನ ಕೂರಲು ಹೇಳಿ. ಅವರಿಗೆ ವಯಸ್ಸಾಗಿದೆ, ಅವರ ಆರೋಗ್ಯ ಮುಖ್ಯ. ಎಂದು ಮೋದಿ ಹೇಳಿದರು.ನೀವು ಸುಸ್ತಾಗಬೇಡಿ, ಆರಾಮಾಗಿ ಕೂತ್ಕೊಂಡು ಮಾತನಾಡಿ ಎಂದು ಖರ್ಗೆ ಅವರಿಗೆ ಮೋದಿ ಹೇಳಿದರು.

ಒಂದು ಕಾಲದಲ್ಲಿ “ದುರ್ಬಲ ಐದು” ಆರ್ಥಿಕತೆಗಳಲ್ಲಿ ಒಂದಾಗಿದ್ದ ಭಾರತ, ಈಗ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವತ್ತ ವೇಗವಾಗಿ ಸಾಗುತ್ತಿದೆ ಎಂದರು. ಯಾವುದೇ ದೇಶಗಳು ಸುಮ್ಮನೆ ಒಪ್ಪಂದಕ್ಕೆ ಬರುವುದಿಲ್ಲ. ನಾವು ಅಭಿವೃದ್ಧಿಯತ್ತ ಮುನ್ನುಗ್ಗುತ್ತಿರುವುದರಿಂದ ನಮ್ಮ ಜೊತೆ ಅಮೆರಿಕ, ಯುರೋಪ್ ಮತ್ತು ರಷ್ಯಾದಂತಹ ರಾಷ್ಟ್ರಗಳು ಬರುತ್ತಿವೆ. ಭಾರತ ಸರಿಯಾದ ದಿಕ್ಕಿನಲ್ಲಿ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದರು ಮೋದಿ. ಕಾಂಗ್ರೆಸ್ ಆಡಳಿತದಲ್ಲಿ ಮಾಡಿದ ತಪ್ಪುಗಳನ್ನು ನಾವು ಸರಿಪಡಿಸುತ್ತಿದ್ದೇವೆ ಎಂದರು ಮೋದಿ.






