• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, March 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

ಗಿಗ್‌ ಕಾರ್ಮಿಕರ ಸುರಕ್ಷತೆಯ ಬಗ್ಗೆ ಸಚಿವ ಲಾಡ್‌ ಕಳವಳ : 10 ನಿಮಿಷದ ಡೆಲಿವರಿ ಸ್ಥಗಿತದ ಕಾರ್ಮಿಕರ ಬೇಡಿಕೆಗೆ ಸ್ಪಂದನೆ

ಪ್ರತಿಧ್ವನಿ by ಪ್ರತಿಧ್ವನಿ
January 18, 2026
in Uncategorized
0
ಕುಂದಾಪುರ ಇಎಸ್‌ಐ ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಕ್ರಮ: ಸಚಿವ ಸಂತೋಷ್‌ ಲಾಡ್‌
Share on WhatsAppShare on FacebookShare on Telegram

ಬೆಂಗಳೂರು :  ಹತ್ತು ನಿಮಿಷದಲ್ಲಿ ಉತ್ಪನ್ನಗಳನ್ನು ಮನೆಬಾಗಿಲಿಗೆ ಹತ್ತು ನಿಮಿಷದಲ್ಲಿ ತಲುಪಿಸುವ ವಿಷಯ ಇತ್ತೀಚೆಗೆ ಸಾಕಷ್ಟು ಚರ್ಚೆ ಹುಟ್ಟು ಹಾಕಿತ್ತು. ಈ ಹತ್ತು ನಿಮಿಷದ ಡೆಲಿವರಿಯನ್ನು ಕ್ವಿಕ್‌ ಕಾಮರ್ಸ್‌ ವಲಯದ ಕಂಪನಿಗಳು ಇದೀಗ ಕೈ ಬಿಟ್ಟಿವೆ.

ADVERTISEMENT

ರಸ್ತೆ ಸುರಕ್ಷತೆಯ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು ಗಿಗ್‌ ಕಾರ್ಮಿಕರ ಆರೋಗ್ಯ ಮತ್ತು ಭದ್ರತೆಗೆ ಇದೀಗ ಸ್ಪಂದನೆ ಸಿಕ್ಕಿದೆ. ಈ ನಿರ್ಧಾರಕ್ಕೇನೋ ಕೇಂದ್ರ ಸರ್ಕಾರ ಈಗ ಬಂದಿದೆ ಆದರೆ ಈ ಚರ್ಚೆಯನ್ನು ಕಾರ್ಮಿಕ ಸಚಿವ ಸಂತೋಷ್‌ ಎಸ್‌ ಲಾಡ್‌ (Santosh Lad) ಅವರು, ಸಾಕಷ್ಟು ದಿನಗಳ ಹಿಂದೆಯೇ ಹುಟ್ಟು ಹಾಕಿದ್ದರು ಎಂಬುದು ಗಮನಾರ್ಹ.

ಗಿಗ್‌ ಕಾರ್ಮಿಕರ (Gig Workers) ಸುರಕ್ಷತೆಯನ್ನು ಆದ್ಯತೆಯಾಗಿ ಪರಿಗಣಿಸಿ ಹತ್ತು ನಿಮಿಷದ ವಿತರಣೆಯನ್ನು ರದ್ದು ಮಾಡುವ ಬಗ್ಗೆ ಇ ಕಾಮರ್ಸ್‌ ಕಂಪನಿಗಳೊಂದಿಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಚರ್ಚೆ ನಡೆಸಿದ್ದರು. ಇದರ ಬೆನ್ನಲ್ಲೆ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಬ್ಲಿಂಕಿಟ್‌, ಸ್ವಿಗ್ಗಿ ಮತ್ತು ಜೆಫ್ಟೊ ಕಂಪನಿಗಳು ಈ ಹತ್ತು ನಿಮಿಷದ ಸೇವೆಯನ್ನು ರದ್ದು ಮಾಡಿವೆ.

ಗಿಗ್‌ ಕಾರ್ಮಿಕರ ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆ ಕಾರ್ಮಿಕ ಸಚಿವ ಸಂತೋಷ್‌ ಎಸ್‌ ಲಾಡ್‌ ಅವರು, ಸಾಕಷ್ಟು ಹಿಂದಿನಿಂದಲೂ ಕಾಳಜಿ ಮತ್ತು ಕಳವಳವನ್ನು ವಹಿಸುತ್ತಾ ಬಂದಿದ್ದಾರೆ. ಗಿಗ್‌ ಕಾರ್ಮಿಕರು ನಗರ ಮತ್ತು ಪಟ್ಟಣಗಳಲ್ಲಿ ವಸ್ತುಗಳನ್ನು ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುವ ವೇಳೆ ಯಾವ ರೀತಿ ಅನಾರೋಗ್ಯಕ್ಕೊಳಗಾಗುತ್ತಾರೆ, ಎಷ್ಟೊಂದು ಪ್ರಮಾಣದಲ್ಲಿ ಹೊಗೆಯನ್ನು ಸೇವಿಸುತ್ತಾರೆ ಎಂಬ ಬಗ್ಗೆ ಮಾತನಾಡಿದ್ದರು.

ಇದನ್ನೂ ಓದಿ : ಅಬಕಾರಿ ಇಲಾಖೆಯಲ್ಲಿ 3,542 ಕೋಟಿ ಭ್ರಷ್ಟಾಚಾರ :‌ ಸಿದ್ದು ಸರ್ಕಾರದ ವಿರುದ್ಧ ಛಲವಾದಿ ಹೊಸ ಬಾಂಬ್..!

ಸದಾ ಅವಸರದಲ್ಲಿ ಕೆಲಸ ಮಾಡುವ ಗಿಗ್‌ ಕಾರ್ಮಿಕರು ತಮ್ಮ ಜೀವನವನ್ನೇ ಹೇಗೆ ಪಣಕ್ಕಿಡುತ್ತಾರೆ ಎಂಬ ವಿಷಯವನ್ನು ಲಾಡ್‌ ಅವರು ಸಾಕಷ್ಟು ವೇದಿಕೆಗಳಲ್ಲಿ ಹಂಚಿಕೊಂಡಿದ್ದರು. ವಿವಿಧ ಉತ್ಪನ್ನಗಳನ್ನು ಡೆಲಿವರಿ ಮಾಡುವ ಗಿಗ್‌ ಕಾರ್ಮಿಕರು 10 ನಿಮಿಷಗಳಲ್ಲಿ ಆರ್ಡರ್‌ ಡೆಲಿವರಿ ಮಾಡಬೇಕು ಎಂಬ ಅವಸರದಲ್ಲಿ ರಸ್ತೆಯಲ್ಲಿ ಜೀವದ (Life) ಹಂಗು ತೊರೆದು ವೇಗವಾಗಿ ವಾಹನ ಚಾಲನೆ ಮಾಡುತ್ತಾರೆ ಎಂಬ ಅಂಶವನ್ನು ಸಚಿವರು ಹೇಳಿದ್ದರು.

“10 ನಿಮಿಷದ ಡೆಲಿವರಿ” ಮಾದರಿಯನ್ನು ರದ್ದುಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಗಿಗ್‌ ಕಾರ್ಮಿಕರು ಕಳೆದ ತಿಂಗಳು ಪ್ರತಿಭಟನೆ ನಡೆಸಿದ್ದರು.ದೇಶವ್ಯಾಪಿ ಮುಷ್ಕರದ ಪರಿಣಾಮ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ, ಗಿಗ್‌ ಪ್ಲಾಟ್‌ಫಾರ್ಮ್‌ ಕಂಪನಿಗಳ ಜೊತೆಗೆ ಮಾತುಕತೆ ನಡೆಸಿತ್ತು.

ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರು ಅಸಂಘಟಿತ ಕಾರ್ಮಿಕರ ಜೀವನ ಭದ್ರತೆ ಹಲವಾರು ಯೋಜನೆಗಳನ್ನು ಜಾರಿ ಮಾಡುತ್ತಾ ಬಂದಿದ್ದಾರೆ. ಗಿಗ್‌ ಕಾರ್ಮಿಕರಿಗಂತೂ ಅವರು ತಮ್ಮ ಇಲಾಖೆಗಳ ಮೂಲಕ ಅಪಘಾತ ವಿಮೆ ಹಾಗೂ ಜೀವ ವಿಮಾ ಯೋಜನೆಯನ್ನು ಜಾರಿ ಮಾಡಿ ಇಡೀ ದೇಶದಲ್ಲೇ ಮಾದರಿಯಾಗಿದ್ದಾರೆ.

Siddaramaih : ಬಿಜೆಪಿಯವರಿಗೆ ಸಂಸ್ಕೃತಿ ಇಲ್ಲ #pratidhvani #siddaramaiah #bjp #rashok #bjp #congress

ಲಾಡ್‌ ಅವರ ದೂರದೃಷ್ಟಿಯಿಂದಾಗಿ ಸಾಕಷ್ಟು ಗಿಗ್‌ ಕಾರ್ಮಿಕರು ಲಾಭ ಪಡೆದುಕೊಂಡಿದ್ದಾರೆ. ಅವರ ಕುಟುಂಬದಲ್ಲಿ ನಗೆ ಮೂಡಿದೆ. ಇದೀಗ ಈ ಹತ್ತು ನಿಮಿಷದ ಡೆಲಿವರಿಗೆ ಬ್ರೇಕ್‌ ಬಿದ್ದಿರುವುದರಿಂದಲೂ ಅಸಂಖ್ಯಾತ ಗಿಗ್‌ ಕಾರ್ಮಿಕರಿಗೆ ನೆಮ್ಮದಿ ಸಿಕ್ಕಿದೆ.

ಕಾರ್ಮಿಕರಿಗೆ ಏನೇ ಒಳಿತನ್ನು ಮಾಡುವುದಿದ್ದರೂ ಸಚಿವ ಲಾಡ್‌ ಅವರು ಯೋಚನೆ ಮಾಡಿಯೇ ಇರುತ್ತಾರೆ. ರಾಜ್ಯದ ಕಾರ್ಮಿಕರಿಗಾಗಿ ಅವರು ತಮ್ಮ ಇಲಾಖೆಯ ಮೂಲಕ ಹಲವಾರು ಯೋಜನೆ ಮತ್ತು ಸೌಲಭ್ಯಗಳನ್ನು ಜಾರಿ ಮಾಡಿದ್ದಾರೆ.

ಕರ್ನಾಟಕ ರಾಜ್ಯ ಗಿಗ್‌ ಕಾರ್ಮಿಕರ ವಿಮಾ ಯೋಜನೆ ಕರ್ನಾಟಕದಲ್ಲಿ ಜಾರಿಯಾಗುವುದರಲ್ಲಿ ಸಂತೋಷ್‌ ಲಾಡ್‌ ಅವರು ಮಹತ್ವದ ಪಾತ್ರ ವಹಿಸಿದ್ದಾರೆ. ಇಡೀ ದೇಶದಲ್ಲೇ ಮೊದಲ ಬಾರಿಗೆ ಇಂತಹ ವಿಮಾ ಯೋಜನೆ ಎಂಬುದು ತಿಳಿದಿರುವ ವಿಷಯ. ಸಚಿವ ಲಾಡ್‌ ಅವರ ದೂರಗಾಮಿ ಆಲೋಚನೆ ಹೇಗೆ ಪ್ರಯೋಜನಕ್ಕೆ ಬಂದಿದೆ ಎಂಬುದು ತಿಳಿದಿದೆ.

ಇದನ್ನೂ ಓದಿ : ತನ್ನ ಮಾತು ವಿರೋಧಿಸುವರಿಗೆ ಟ್ರಂಪ್ ಮತ್ತೆ ಶಾಕ್

ಆನ್‌ಲೈನ್‌ ಡೆಲಿವರಿ ವೃತ್ತಿಯಲ್ಲಿ ಅರೆಕಾಲಿಕವಾಗಿ ಮತ್ತು ಪೂರ್ಣವಾಗಿ ತೊಡಗಿಸಿಕೊಂಡ ಎಷ್ಟೋ ಗಿಗ್‌ ಕಾರ್ಮಿಕರಿಗೆ ಸರಿಯಾದ ಜೀವವಿಮೆ ಮತ್ತು ಅಪಘಾತ ವಿಮೆ ದೊರೆಯದೇ ಸಾಕಷ್ಟು ತೊಂದರೆಗೆ ಸಿಲುಕಿದ್ದರು. ಆದರೆ ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯ ಗಿಗ್‌ ಕಾರ್ಮಿಕರ ವಿಮಾ ಯೋಜನೆ ಅಂತಹ ಕಾರ್ಮಿಕರಿಗೆ ಸಂಜೀವಿನಿಯಾಗಿ ಲಾಭ ಮಾಡಿಕೊಟ್ಟಿದೆ. ಇಂತಹ ಮಹತ್ವದ ಯೋಜನೆಯ ಎಲ್ಲ ಯಶಸ್ಸು ಸಚಿವ ಸಂತೋಷ್‌ ಲಾಡ್‌ ಅವರಿಗೆ ಸಲ್ಲಬೇಕಿದೆ.

Tags: Congress Governmentfood delivery workergig workerskannada newskarnatak newsKarntaka governmentLabour MInisterPratidhvaniSantosh LadsiddaramaiahWorkers safety
Previous Post

“ನನ್ನ ಅನುಪಸ್ಥಿಯಲ್ಲಿ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ”

Next Post

Daily Horoscope: ಇಂದು ಹೂಡಿಕೆಯಲ್ಲಿ ದಿಢೀರ್‌ ಲಾಭ ಗಳಿಸುವ ರಾಶಿಗಳಿವು

Related Posts

ಷೇರು ಮಾರುಕಟ್ಟೆ ಹೂಡಿಕೆ  ಲಾಭದ ಆಸೆ ತೋರಿಸಿ  5 ತಿಂಗಳಿನಲ್ಲಿ  ಒಟ್ಟು 1420 ಕೋಟಿ ರೂ ವಂಚನೆ
Uncategorized

ಯುದ್ಧ: ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ; ಇಂದು ಇಷ್ಟು ಲಕ್ಷ ಕೋಟಿ ನಷ್ಟ!

by ಪ್ರತಿಧ್ವನಿ
March 4, 2026
0

ಆರಂಭವಾದ ಇಸ್ರೇಲ್‌ ಮತ್ತು ಇರಾನ್‌ ನಡುವಿನ ಯುದ್ಧ, ಜಾಗತಿಕ ಮಾರುಕಟ್ಟೆಯ ಮೇಲೆ ಭಾರೀ ಪರಿಣಾಮ ಬೀರಿದೆ.ಷೇರು ಮಾರುಕಟ್ಟೆ ಕಳೆದ ಮೂರು ದಿನಗಳಿಂದ ಕುಸಿತದಲ್ಲೇ ಇದೆ. https://youtu.be/T_9ShsZfbLQ?si=U5AQgH1ySRkDVowt ಯುಎಸ್-ಇರಾನ್...

Read moreDetails
“ಒಳ ಮೀಸಲಾತಿ ಜಾರಿ ಮಾಡದೇ ಹುದ್ದೆ ಭರ್ತಿಯಾದರೆ, ರಾಜ್ಯದಲ್ಲಿ ಮುಂದಿನ ಘಟನೆಗಳಿಗೆ ನೀವೇ ಹೊಣೆ”

“ಒಳ ಮೀಸಲಾತಿ ಜಾರಿ ಮಾಡದೇ ಹುದ್ದೆ ಭರ್ತಿಯಾದರೆ, ರಾಜ್ಯದಲ್ಲಿ ಮುಂದಿನ ಘಟನೆಗಳಿಗೆ ನೀವೇ ಹೊಣೆ”

March 4, 2026
ಇರಾಕ್ -ಇರಾನ್ ಯುದ್ಧ: ಸೋಮವಾರ ಇಡೀ ದಿನ ನಡೆದದ್ದೇನು?

ಇರಾಕ್ -ಇರಾನ್ ಯುದ್ಧ: ಸೋಮವಾರ ಇಡೀ ದಿನ ನಡೆದದ್ದೇನು?

March 3, 2026
ಸಾಮಾಜಿಕ ಒಳಬೇನೆಯೂ ನೈತಿಕ ಅಧಃಪತನವೂ..

ಸಾಮಾಜಿಕ ಒಳಬೇನೆಯೂ ನೈತಿಕ ಅಧಃಪತನವೂ..

March 1, 2026
Breaking: ಇರಾನ್ ನಾಯಕ ಅಲಿ ಖಮೇನಿ ಸಾವನ್ನು ದೃಢಪಡಿಸಿದ ಡೊನಾಲ್ಡ್ ಟ್ರಂಪ್! 

Breaking: ಇರಾನ್ ನಾಯಕ ಅಲಿ ಖಮೇನಿ ಸಾವನ್ನು ದೃಢಪಡಿಸಿದ ಡೊನಾಲ್ಡ್ ಟ್ರಂಪ್! 

March 1, 2026
Next Post
Daily Horoscope: ಇಂದು ಹೂಡಿಕೆಯಲ್ಲಿ ದಿಢೀರ್‌ ಲಾಭ ಗಳಿಸುವ ರಾಶಿಗಳಿವು

Daily Horoscope: ಇಂದು ಹೂಡಿಕೆಯಲ್ಲಿ ದಿಢೀರ್‌ ಲಾಭ ಗಳಿಸುವ ರಾಶಿಗಳಿವು

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada