• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, February 6, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ತ್ರಿಷಾ ಜೊತೆ ರೇಪ್‌ ಸೀನ್‌ ಬೇಕಿತ್ತು: ವಿವಾದಕ್ಕೆ ಗುರಿಯಾದ ತಮಿಳು ಹಿರಿಯ ಖಳನಟನ ಹೇಳಿಕೆ!

ಪ್ರತಿಧ್ವನಿ by ಪ್ರತಿಧ್ವನಿ
November 19, 2023
in Top Story, ಸಿನಿಮಾ
0
ತ್ರಿಷಾ ಜೊತೆ ರೇಪ್‌ ಸೀನ್‌ ಬೇಕಿತ್ತು: ವಿವಾದಕ್ಕೆ ಗುರಿಯಾದ ತಮಿಳು ಹಿರಿಯ ಖಳನಟನ ಹೇಳಿಕೆ!
Share on WhatsAppShare on FacebookShare on Telegram

ಚೆನ್ನೈ: ಲೋಕೇಶ್‌ ಕನಗರಾಜ್‌ ನಿರ್ದೇಶನದ ವಿಜಯ್‌ ನಟನೆಯ ʼಲಿಯೋʼ ಚಿತ್ರ ಬಾಕ್ಸಾಫಿಸಿನಲ್ಲಿ ಉತ್ತಮ ಕಲೆಕ್ಷನ್‌ ಮಾಡುತ್ತಿದ್ದಂತೆ, ಚಿತ್ರದಲ್ಲಿ ನಟಿ ತ್ರಿಷಾ ಜೊತೆ ರೇಪ್‌ ಸೀನ್‌ ನಟಿಸಲು ಅವಕಾಶ ಮಾಡಿಕೊಟ್ಟಿಲ್ಲ ಎಂದು ಹಿರಿಯ ನಟ ಮನ್ಸೂರ್‌ ಅಲಿ ಖಾನ್‌ ಅವರು ಆಘಾತಕಾರಿ ಹೇಳಿಕೆ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.

  “ನಾನು ತ್ರಿಶಾ ಜೊತೆ ನಟಿಸುತ್ತಿದ್ದೇನೆ ಎಂದಾಗ, ಚಿತ್ರದಲ್ಲಿ ಬೆಡ್‌ರೂಮ್‌ ಸೀನ್‌ ಇದೆ ಎಂದು ಭಾವಿಸಿದ್ದೆ. ನನ್ನ ಹಿಂದಿನ ಸಿನಿಮಾಗಳಲ್ಲಿ ಕುಶ್ಬು, ರೋಜಾ ಅವರನ್ನು ಎತ್ತಿಕೊಂಡು ಹೋಗಿ ರೇಪ್‌ ಸೀನ್‌ ಮಾಡಿದ್ದೆ, ಅದೇ ರೀತಿ ತ್ರಿಷಾರನ್ನು ಬೆಡ್‌ರೂಮ್‌ಗೆ ಎತ್ತಿಕೊಂಡು ಹೋಗಬಹುದು ಎಂದು ನಾನು ಭಾವಿಸಿದ್ದೆ. ನಾನು ಸಾಕಷ್ಟು ಅತ್ಯಾಚಾರದ ದೃಶ್ಯಗಳನ್ನು ಮಾಡಿರುವುದರಿಂದ ಇದು ನನಗೆ ಹೊಸದಲ್ಲ. ಆದರೆ ಈ ಚಿತ್ರತಂಡ ಕಾಶ್ಮೀರದಲ್ಲಿ ಶೂಟಿಂಗ್ ಸಮಯದಲ್ಲಿ ತ್ರಿಷಾರನ್ನು ನನಗೆ ತೋರಿಸಿಯೇ ಇಲ್ಲ” ಎಂದು ಮನ್ಸೂರ್‌ ಖಾನ್‌ ಮಾಧ್ಯಮಗಳೊಂದಿಗೆ ಹೇಳಿದ್ದರು.

ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರು ವ್ಯಾಪಕ ಆಕ್ರೋಶ ಹೊರ ಹಾಕಿದ್ದು, ಸಹನಟಿಯಂದಿರ ಬಗ್ಗೆ ನಟನಿಗೆ ಇರುವ ಮನೋಭಾವವನ್ನು ಟೀಕಿಸಿದ್ದರು. ಮನ್ಸೂರ್‌ ಹೇಳಿಕೆಗಳು ಸ್ತ್ರೀವಿರೋಧಿ ಮಾತ್ರವಲ್ಲ ವೃತ್ತಿಪರತೆಗೂ ಅಗೌರವ ಎಂದು ಖಂಡಿಸಿದ್ದರು.

 ನಟಿ ತ್ರಿಷಾ ತನ್ನ ಖಂಡನೆಯನ್ನು ವ್ಯಕ್ತಪಡಿಸಿದ್ದು, “ಮನ್ಸೂರ್ ಅಲಿ ಖಾನ್ ನನ್ನ ಬಗ್ಗೆ ಅಸಹ್ಯವಾಗಿ ಮಾತನಾಡಿರುವ ವೀಡಿಯೊ ನನ್ನ ಗಮನಕ್ಕೆ ಬಂದಿದೆ. ನಾನು ಇದನ್ನು ಬಲವಾಗಿ ಖಂಡಿಸುತ್ತೇನೆ. ಇದು ಲೈಂಗಿಕತೆ, ಅಗೌರವ, ಸ್ತ್ರೀದ್ವೇಷ, ಮತ್ತು ಕೀಳು ಅಭಿರುಚಿಯನ್ನು ಹೊಂದಿದೆ. ಅವರಂತಹ ಕ್ಷುದ್ರ ವ್ಯಕ್ತಿಯೊಂದಿಗೆ ನಟಿಸದೆ ಇರುವುದಕ್ಕೆ ನಾನು ಕೃತಜ್ಞಳಾಗಿದ್ದೇನೆ. ನನ್ನ ಉಳಿದ ಚಲನಚಿತ್ರ ವೃತ್ತಿಜೀವನದಲ್ಲಿ ಅದು ಎಂದಿಗೂ ಸಂಭವಿಸದಂತೆ ನೋಡಿಕೊಳ್ಳುತ್ತೇನೆ. ಅವರಂತಹವರು ಮನುಕುಲಕ್ಕೆ ಕೆಟ್ಟ ಹೆಸರು” ಎಂದು ಟ್ವೀಟ್‌ ಮಾಡಿದ್ದಾರೆ.

 

ಈ ಬಗ್ಗೆ ನಿರ್ದೇಶಕ ಲೋಕೇಶ್‌ ಕನಗರಾಜ್‌ ಕೂಡಾ ಆಕ್ರೋಶ ಹೊರ ಹಾಕಿದ್ದು, “ನಾವೆಲ್ಲರೂ ಒಂದೇ ತಂಡದಲ್ಲಿ ಕೆಲಸ ಮಾಡಿದ್ದರಿಂದ ಮನ್ಸೂರ್ ಅಲಿ ಖಾನ್ ಅವರು ಮಾಡಿದ ಸ್ತ್ರೀದ್ವೇಷದ ಕಾಮೆಂಟ್‌ಗಳನ್ನು ಕೇಳಿ ಅಸಮಾಧಾನ ಮತ್ತು ಕೋಪಗೊಂಡಿದ್ದೇವೆ. ಮಹಿಳೆಯರು, ಸಹ ಕಲಾವಿದರು ಮತ್ತು ವೃತ್ತಿಪರರಿಗೆ ಗೌರವ ನೀಡುವುದರಲ್ಲಿ ಯಾವುದೇ ರಾಜಿ ಇಲ್ಲ ಮತ್ತು ನಾನು ಈ ನಡವಳಿಕೆಯನ್ನು ಸಂಪೂರ್ಣವಾಗಿ ಖಂಡಿಸುತ್ತೇನೆ” ಎಂದು ಟ್ವೀಟ್‌ ಮಾಡಿದ್ದಾರೆ.

ADVERTISEMENT

Disheartened and enraged to hear the misogynistic comments made by Mr.Mansoor Ali Khan, given that we all worked in the same team. Respect for women, fellow artists and professionals should be a non-negotiable in any industry and I absolutely condemn this behaviour. https://t.co/PBlMzsoDZ3

— Lokesh Kanagaraj (@Dir_Lokesh) November 18, 2023

Tags: Cinemaleolokesh KanagarajMansoor Ali khantamiltrisha
Previous Post

World Cup Final IND v/s AUS: ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ಕೆ

Next Post

ವಿಶ್ವಕಪ್ ಫೈನಲ್ಸ್ | ಆಸ್ಟ್ರೇಲಿಯಾಗೆ 240 ಟಾರ್ಗೆಟ್ ಕೊಟ್ಟ ಟೀಂ ಇಂಡಿಯಾ: ಬೌಲರ್‌ಗಳ ಮೇಲೆ ಹೆಚ್ಚಿದ ನಿರೀಕ್ಷೆ

Related Posts

Bengaluru: ಬೆಂಗಳೂರು ಏರ್‌ಪೋರ್ಟ್​ನಲ್ಲಿ ಕೋಟ್ಯಂತರ ರೂ. ಮೌಲ್ಯದ ಚಿನ್ನ, ವಜ್ರ ಕಳ್ಳತನ!
Top Story

Bengaluru: ಬೆಂಗಳೂರು ಏರ್‌ಪೋರ್ಟ್​ನಲ್ಲಿ ಕೋಟ್ಯಂತರ ರೂ. ಮೌಲ್ಯದ ಚಿನ್ನ, ವಜ್ರ ಕಳ್ಳತನ!

by ಪ್ರತಿಧ್ವನಿ
February 6, 2026
0

ದೇವನಹಳ್ಳಿ: ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ(Kempegowda International Airport Bengaluru) ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ ಹಾಗೂ ವಜ್ರಾಭರಣ ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದೆ. ಮಹಿಳಾ...

Read moreDetails
WPL 2026: ಕಪ್‌ ಗೆದ್ದ RCB ತಂಡಕ್ಕೆ ಕಿಂಗ್‌ ಕೊಹ್ಲಿ ಅಭಿನಂದನೆ: ಫ್ಯಾನ್ಸ್‌ಗೆ ಎಂಜಾಯ್‌ ಎಂದ ವಿರಾಟ್‌

WPL 2026: ಕಪ್‌ ಗೆದ್ದ RCB ತಂಡಕ್ಕೆ ಕಿಂಗ್‌ ಕೊಹ್ಲಿ ಅಭಿನಂದನೆ: ಫ್ಯಾನ್ಸ್‌ಗೆ ಎಂಜಾಯ್‌ ಎಂದ ವಿರಾಟ್‌

February 6, 2026
Drugs Case: ತಮಿಳು ಚಿತ್ರರಂಗದಲ್ಲಿ ಡ್ರ** ಘಾಟು: ನಟಿ ಸೇರಿ 8 ಮಂದಿ ಬಂಧನ

Drugs Case: ತಮಿಳು ಚಿತ್ರರಂಗದಲ್ಲಿ ಡ್ರ** ಘಾಟು: ನಟಿ ಸೇರಿ 8 ಮಂದಿ ಬಂಧನ

February 6, 2026
ಸೈಬರ್ ದಂಧೆಗೆ ಸಿಐಡಿ ಬಿಗ್‌ ಶಾಕ್: 13 ಮಾಸ್ಟರ್ ಮೈಂಡ್‌ಗಳ ಬಂಧನ

ಸೈಬರ್ ದಂಧೆಗೆ ಸಿಐಡಿ ಬಿಗ್‌ ಶಾಕ್: 13 ಮಾಸ್ಟರ್ ಮೈಂಡ್‌ಗಳ ಬಂಧನ

February 6, 2026
Daily Horoscope February 6: ಇಂದು ಸಕಲ ಸಂಪತ್ತನ್ನು ಆಕರ್ಷಿಸುವ ರಾಶಿಗಳಿವು..!

Daily Horoscope February 6: ಇಂದು ಸಕಲ ಸಂಪತ್ತನ್ನು ಆಕರ್ಷಿಸುವ ರಾಶಿಗಳಿವು..!

February 6, 2026
Next Post
ವಿಶ್ವಕಪ್ ಫೈನಲ್ಸ್ | ಆಸ್ಟ್ರೇಲಿಯಾಗೆ 240 ಟಾರ್ಗೆಟ್ ಕೊಟ್ಟ ಟೀಂ ಇಂಡಿಯಾ: ಬೌಲರ್‌ಗಳ ಮೇಲೆ ಹೆಚ್ಚಿದ ನಿರೀಕ್ಷೆ

ವಿಶ್ವಕಪ್ ಫೈನಲ್ಸ್ | ಆಸ್ಟ್ರೇಲಿಯಾಗೆ 240 ಟಾರ್ಗೆಟ್ ಕೊಟ್ಟ ಟೀಂ ಇಂಡಿಯಾ: ಬೌಲರ್‌ಗಳ ಮೇಲೆ ಹೆಚ್ಚಿದ ನಿರೀಕ್ಷೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada