ಹನೂರು: ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಮಲೆ ಮಹದೇಶ್ವರ ಸ್ವಾಮಿಯ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು.
ಮಂಗಳವಾರ ಬೆಳಿಗ್ಗೆ 8.20 ರಿಂದ 9.10ರ ನಡುವಿನ ಶುಭ ಲಗ್ನದಲ್ಲಿ ಮಲೆ ಮಾದಪ್ಪನ ಮಹಾ ರಥೋತ್ಸವವು ಸಾಲೂರು ಬೃಹನ್ಮಠದ ಶಾಂತ ಮಲ್ಲಿಕಾರ್ಜುನ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ವಿಜೃಂಭಣೆಯಿಂದ ನಡೆಯಿತು.
ಮಲೆ ಮಾದಪ್ಪನ ಮಹಾರಥೋತ್ಸವಕ್ಕೆ ಬೂದುಗುಂಬಳಕಾಯಿ ಒಡೆಯುವ ಮೂಲಕ ಚಾಲನೆ ದೊರೆಯುತ್ತಿದ್ದಂತೆ ನಡೆದಿದ್ದ ಲಕ್ಷಾಂತರ ಭಕ್ತಾದಿಗಳ ಉಘೇ ಮಾದಪ್ಪ ಜಯ ಘೋಷಗಳು ಮುಗಿಲು ಮುಟ್ಟುವಂತಿತ್ತು.
ಮಹಾ ರಥೋತ್ಸವದಲ್ಲಿ ಚಾಮರಾಜನಗರ ಜಿಲ್ಲಾಧಿಕಾರಿ ರಮೇಶ್ ಪ್ರಾಧಿಕಾರದ ಕಾರ್ಯದರ್ಶಿ ಕಾತ್ಯಾಯಿನಿ ದೇವಿ ಹಾಗೂ ಇನ್ನಿತರರು ಭಾಗವಹಿಸಿದ್ದರು.