ಲೋಕಸಭಾ ಚುನಾವಣೆಗೆ ಮೂಹೂರ್ತ.. ಕರ್ನಾಟಕದಲ್ಲಿ ಭರ್ಜರಿ ತಯಾರಿ.. ಕೇಂದ್ರ ಚುನಾವಣಾ ಆಯೋಗ ಇಡೀ ದೇಶಕ್ಕೆ 7 ಹಂತದಲ್ಲಿ ಚುನಾವಣಾ ದಿನಾಂಕ ಪ್ರಕಟ ಮಾಡಿದೆ. ಏಪ್ರಿಲ್ 19 ರಿಂದ ದೇಶದಲ್ಲಿ ಮತದಾನ ಆರಂಭ ಆಗಲಿದೆ. ಕರ್ನಾಟಕದಲ್ಲಿ ಎರಡು ಹಾಗು ಮೂರನೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಏಪ್ರಿಲ್ 26ರಂದು ರಾಜ್ಯದಲ್ಲಿ ಮೊದಲ ಹಂತ, ಮೇ 07ರಂದು ರಾಜ್ಯದಲ್ಲಿ ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಮೇ 13 ರಂದು ನಾಲ್ಕನೇ ಹಂತಮೇ 20ರಂದು 5ನೇ ಹಂತ, ಮೇ 25 ರಂದು 6ನೇ ಹಂತ ಹಾಗು ಜೂನ್ 1ರಂದು ಕಡೆಯ 7ನೇ ಹಂತದ ಚುನಾವಣೆ ನಡೆಯಲಿದೆ. ದೇಶಾದ್ಯಂತ ಒಂದೇ ದಿನ ಜೂನ್ 04ರಂದು ಮಂಗಳವಾರ ಮತ ಎಣಿಕೆ ನಡೆಯಲಿದೆ. ಕರ್ನಾಟಕದಲ್ಲಿ ಮತದಾನ ನಡೆದ ತಿಂಗಳ ಬಳಿಕ ಫಲಿತಾಂಶ

ಹೊರಬೀಳಲಿದೆ. ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಕರ್ನಾಟಕ ರಾಜ್ಯದಲ್ಲಿ ನಡೆಯುವ ಚುನಾವಣೆ ಕುರಿತು ಮಾಹಿತಿ ನೀಡಿದ್ದಾರೆ, ರಾಜ್ಯದಲ್ಲಿ 5,42,54000 ಮತದಾರರು ಇದ್ದಾರೆ. 2,71,66,220 ಪುರುಷರು ಹಾಗು 2.70 ಕೋಟಿ ಮಹಿಳಾ ಮತದಾರರು ಇದ್ದಾರೆ ಎಂದಿದ್ದು, 11,24,622 ಮಂದಿ ಮೊದಲ ಬಾರಿಗೆ ಮತದಾನ ಮಾಡುವ ಯುವ ಮತದಾರರು ಇದ್ದಾರೆ ಎಂದಿದ್ದಾರೆ. 85 ವರ್ಷ ಮೇಲ್ಪಟ್ಟ 5,70,168 ಹಾಗು ದಿವ್ಯಾಂಗ ಮತದಾರರು 6, 12,154, ಕೊರವ, ಜೇನು ಕುರುಬರು 38, 798 ಮತದಾರು ಇದ್ದರೆ, ಅತಿ ಹೆಚ್ಚು ಮತದಾರರನ್ನು ಬೆಂಗಳೂರು ಉತ್ತರ ಕ್ಷೇತ್ರ ಹೊಂದಿದೆ. ಉಡುಪಿ-ಚಿಕ್ಕಮಗಳೂರು ಅತೀ ಕಡಿಮೆ ಮತದಾರರನ್ನು ಹೊಂದಿದೆ. ಚುನಾವಣೆ ಅಕ್ರಮದ ಮೇಲೆ ಕಣ್ಣಿಡಲು ಫ್ಲೈಯಿಂಗ್ ಸ್ವ್ಯಾಡ್ ನೇಮಕ ಮಾಡಿದ್ದು, 2,357 ಫ್ಳೈಯಿಂಗ್ ಸ್ವ್ಕಾಡ್ಗಳ ನೇಮಕ ಮಾಡಲಾಗಿದೆ. ವಿಡಿಯೋ ಸರ್ವೈಲೆನ್ಸ್ ಟೀಂ 647 ಮಂದಿ, ಅಕೌಂಟಿಂಗ್ ಟೀಂ 258 ಸಿಬ್ಬಂದಿ, ವಿಡಿಯೋ ವೀಕ್ಷಣೆಗೆ 257 ಸಿಬ್ಬಂದಿ ನೇಮಕ ಮಾಡಲಾಗಿದೆ. ರಾಜ್ಯದಲ್ಲಿ 58 ಸಾವಿರ ಮತಕೇಂದ್ರಗಳಿವೆ. 3.5 ಲಕ್ಷ ಚುನಾವಣಾ ಸಿಬ್ಬಂದಿ ಕಾರ್ಯ ನಿರ್ವಹಣೆ ಮಾಡಲಿದ್ದಾರೆ. 28 ಲೋಕಸಭಾ ಕ್ಷೇತ್ರಗಳಲ್ಲಿ ಆರ್ಒಗಳ ನೇಮಕ ಮಾಡಲಾಗಿದೆ. 18 ವರ್ಷ ಆಗುತ್ತಿರುವವರು ಮತದಾನ ನೋಂದಣಿಗೆ ಅವಕಾಶ ಮಾಡಿಕೊಡಲಾಗಿದೆ. ಮಾರ್ಚ್ 31ರೊಳಗೆ ಹದಿನೆಂಟು ವರ್ಷ ಪೂರ್ಣ ಆಗುವವರು ನೋಂದಣಿ ಮಾಡಕೊಳ್ಳಬಹುದು ಎಂದು ಚುನಾವಣಾ ಅಧಿಕಾರಿ ತಿಳಿಸಿದ್ದಾರೆ. ನಮ್ಮ ರಾಜ್ಯದ ಸುತ್ತ ಆರು ರಾಜ್ಯಗಳ ಗಡಿ ಹಂಚಿಕೊಂಡಿದ್ದು, ಚೆಕ್ ಪೋಸ್ಟ್ ರಚಿಸಲಾಗಿದೆ. ಎಲ್ಲಾ ಕಡೆ ಚೆಕ್ ಪಾಯಿಂಟ್ ಹಾಕಿದ್ದೇವೆ ಅಂತಾನೂ ತಿಳಿಸಿದ್ದಾರೆ. ಈಗಾಗಲೇ ಕಳೆದ ಆರು ತಿಂಗಳಿಂದಲೇ ವಿಜಿಲೆನ್ಸ್ ಸ್ಟಾರ್ಟ್ ಮಾಡಿದ್ದು, ಕಳೆದ ಆಗಸ್ಟ್ನಿಂದ ಮಾರ್ಚ್ ತನಕ 532 ಕೋಟಿ ಹಣವನ್ನ ಸೀಜ್ಮಾ

ಡಲಾಗಿದೆ. 42 ಕೋಟಿ ಮೌಲ್ಯದ ಲಿಕ್ಕರ್ ವಶಕ್ಕೆ ತೆಗೆದುಕೊಂಡಿದ್ದೇವೆ. 26 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದ್ದೇವೆ. 71 ಕೋಟಿ ಮೌಲ್ಯದ ಗೋಲ್ಡ್ ಸೀಜ್ ಮಾಡಿದ್ದೇವೆ. ಮತದಾರರ ಪಟ್ಟಿಗೆ ಹೆಸರು ಸೇರಿಸಲು ಫಾರಂ 6ನಲ್ಲಿ ಅರ್ಜಿ ಸಲ್ಲಿಸಬಹುದು. ಯಾವುದೇ ರೀತಿಯ ಅವ್ಯವಹಾರ ನಡೆಯುತ್ತಿದ್ದರೆ ಸಾರ್ವಜನಿಕರೂ ಚುನಾವಣಾ ಅಧಿಕಾರಿಗಳ ಗಮನಕ್ಕೆ ತನ್ನಿ, ಈ ಬಾರಿ ಅತ್ಯಧಿಕ ಸಂಖ್ಯೆಯಲ್ಲಿ ಮತದಾನ ಮಾಡುವ ಮೂಲಕ ದಾಖಲೆ ನಿರ್ಮಿಸೋಣ ಎಂದು ರಾಜ್ಯದ ಜನತೆಗೆ ಕರೆ ನೀಡಿದ್ದಾರೆ. ರ್ಯಾಲಿ, ಹೆಲಿಕಾಪ್ಟರ್ ಲ್ಯಾಂಡಿಂಗ್, ಪ್ರಚಾರದ ವೆಹಿಕಲ್ಗೆ ಅನುಮತಿ ಪಡೆಯಬೇಕು. ಸುವಿದಾ ಆ್ಯಪ್ ಮೂಲಕವೇ ಅರ್ಜಿ ಹಾಕಿದವರಿಗೆ ಅನುಮತಿ ಸಿಗಲಿದೆ ಎಂದಿದ್ದಾರೆ.






