• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

ಲ್ಯಾಂಡ್ ಲಾರ್ಡ್ ಚಿತ್ರದ ʼನಿಂಗವ್ವ ನಿಂಗವ್ವʼ ಸಾಂಗ್‌ ರಿಲೀಸ್: ಹೇಗಿದೆ ನಿಂಗವ್ವ- ರಾಚಯ್ಯನ ಡ್ಯುಯೆಟ್?

ಪ್ರತಿಧ್ವನಿ by ಪ್ರತಿಧ್ವನಿ
December 20, 2025
in Uncategorized
0
ಲ್ಯಾಂಡ್ ಲಾರ್ಡ್ ಚಿತ್ರದ ʼನಿಂಗವ್ವ ನಿಂಗವ್ವʼ ಸಾಂಗ್‌ ರಿಲೀಸ್: ಹೇಗಿದೆ ನಿಂಗವ್ವ- ರಾಚಯ್ಯನ ಡ್ಯುಯೆಟ್?
Share on WhatsAppShare on FacebookShare on Telegram

ಸಾರಥಿ ಫಿಲಂಸ್ ಲಾಂಛನದಲ್ಲಿ ಕೆ.ವಿ. ಸತ್ಯಪ್ರಕಾಶ್ – ಹೇಮಂತ್ ಗೌಡ ಕೆ.ಎಸ್ ನಿರ್ಮಿಸಿರುವ, ಜಡೇಶ್ ಕೆ.ಹಂಪಿ ನಿರ್ದೇಶನದ ಹಾಗೂ ದುನಿಯಾ ವಿಜಯ್, ರಚಿತರಾಮ್ ಅಭಿನಯದ ‘ಲ್ಯಾಂಡ್ ಲಾರ್ಡ್’ ಚಿತ್ರಕ್ಕಾಗಿ ಯೋಗರಾಜ್ ಭಟ್ ಅವರು ಬರೆದಿರುವ, ಅಜನೀಶ್ ಲೋಕನಾಥ್ ಸಂಗೀತ ನೀಡಿರುವ ʼನಿಂಗವ್ವ ನಿಂಗವ್ವʼ ಹಾಡು ಬಿಡುಗಡೆಯಾಗಿದೆ. ವಿಜಯ್ ಪ್ರಕಾಶ್ – ಅನನ್ಯ ಭಟ್ ಕಂಠಸಿರಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಭೂಷಣ್ ನೃತ್ಯ ಸಂಯೋಜನೆ ಮಾಡಿದ್ದಾರೆ‌. ದುನಿಯಾ ವಿಜಯ್ – ರಚಿತರಾಮ್ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಆನಂದ್ ಆಡಿಯೋ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಯಾಗಿರುವ ಈ ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.

ADVERTISEMENT
ActressAindritaRay: ಕಸ ಸುಡುತ್ತಿರುವ ವಿಡಿಯೋ ಹಾಕಿರುವ ನಟಿ ಐಂದ್ರಿತಾ ರೈ..! #munirathna #bjp #mla

ಸ್ಯಾಂಡಲ್‌ವುಡ್‌ನ ತಾರಾ ದಂಪತಿಗಳಾದ ನೆನಪಿರಲಿ ಪ್ರೇಮ್ – ಜ್ಯೋತಿ, ಡಾರ್ಲಿಂಗ್ ಕೃಷ್ಣ – ಮಿಲನ ನಾಗರಾಜ್ ಹಾಗೂ ತರುಣ್ ಸುಧೀರ್ – ಸೋನಾಲ್ ಅವರಿಂದ ನಿಂಗವ್ವ ನಿಂಗವ್ವ ಹಾಡು ಬಿಡುಗಡೆಯಾಯಿತು. ಹಾಡು ಬಿಡುಗಡೆ ಮಾಡಿ ಮಾತನಾಡಿದ ದಂಪತಿಗಳು ಯೋಗರಾಜ್ ಭಟ್ ಅವರ ಸಾಹಿತ್ಯ, ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ, ವಿಜಯ್ ಪ್ರಕಾಶ್ ಗಾಯ‌ನ ಹಾಗೂ ವಿಶೇಷವಾಗಿ ದುನಿಯಾ ವಿಜಯ್, ರಚಿತರಾಮ್ ಅವರ ಅಭಿನಯದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಸ್ವಾಮಿ ಅವರ ಛಾಯಾಗ್ರಹಣ ಪೈಟಿಂಗ್ ಇದ್ದ ಹಾಗೆ ಇದೆ ಎಂದು ಬಣ್ಣಿಸಿದರು. ನಿರ್ದೇಶಕರ ಕಾರ್ಯವೈಖರಿ ಚೆನ್ನಾಗಿದೆ ಎಂದು ತಿಳಿಸಿ, ನಿರ್ಮಾಪಕರಿಗೆ ಶುಭವನ್ನು ಕೋರಿದರು. ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು. ಆನಂತರ ದಂಪತಿಗಳಿಗೆ ದುನಿಯಾ ವಿಜಯ್ ಹಾಗೂ ರಚಿತರಾಮ್ ಬಾಗಿನ ನೀಡಿ ಸನ್ಮಾನಿಸಿದರು. ನೀನಾಸಂ ಸತೀಶ್ ಹಾಗೂ ಗುರು ದೇಶಪಾಂಡೆ ಅತಿಥಿಗಳಾಗಿ ಆಗಮಿಸಿದ್ದರು.

Mallikarjun Kharge : ಬಿಜೆಪಿ ವಿರುದ್ದ ಗುಡುಗಿದ ಮಲ್ಲಿಕಾರ್ಜುನ್‌ ಖರ್ಗೆ..! #GRamGClears #rajsabha

ಈ ಸಂದರ್ಭದ ಸಂತೋಷವನ್ನು ನೋಡಿ ಮಾತುಗಳೆ ಹೊರಡುತ್ತಿಲ್ಲ. ಮೊದಲಿಗೆ ಹಾಡು ಬಿಡುಗಡೆ ಮಾಡಿ ಕೊಟ್ಟ ದಂಪತಿಗಳಿಗೆ ಧನ್ಯವಾದ. ನನ್ನ ಹಿಟ್ ಸಾಂಗ್ ಗಳ ಲಿಸ್ಟ್ ನಲ್ಲಿ ಅಧಿಕ ಹಾಡುಗಳನ್ನು ಬರೆದಿರುವುದು ಯೋಗರಾಜ್ ಭಟ್ ಅವರು. ಈ ಹಾಡನ್ನು ಅದ್ಭುತವಾಗಿ ಬರೆದಿದ್ದಾರೆ. ಅಷ್ಟೇ ಚೆನ್ನಾಗಿ ವಿಜಯ್ ಪ್ರಕಾಶ್ ಹಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ಭೂಷಣ್ ಅವರ ನೃತ್ಯ ನಿರ್ದೇಶನ ಕೂಡ ಉತ್ತಮವಾಗಿದೆ. ಸಾಮಾನ್ಯವಾಗಿ ನಾಯಕಿಯರು ಈ ವಯಸ್ಸಿನ ಪಾತ್ರ ಒಪ್ಪಿಕೊಳ್ಳುವುದು ಕಡಿಮೆ.

ರಚಿತರಾಮ್ ಅವರು ಒಪ್ಪಿಕೊಂಡು ಈ ಪಾತ್ರ ಮಾಡಿದ್ದಾರೆ. ನನಗೂ ಕೂಡ ಈ ಹಾಡು‌ ಬಿಡುಗಡೆ ಆಗುವವರೆಗೂ ನನ್ನ ಪಾತ್ರದ ಬಗ್ಗೆ ಎಲ್ಲರೂ ಏನು ಹೇಳಬಹುದು ಎಂಬ ಕುತೂಹಲವಿತ್ತು. ಈಗ ಎಲ್ಲರೂ ಪ್ರಶಂಸೆ ನೀಡುತ್ತಿದ್ದಾರೆ. ಒಳ್ಳೆಯ ಕಥೆ ಮಾಡಿಕೊಂಡಿರುವ ನಿರ್ದೇಶಕ ಜಡೇಶ್ ಕೆ ಹಂಪಿ ಅವರಿಗೆ ಹಾಗೂ ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಣ ಮಾಡಿರುವ ನಿರ್ಮಾಪಕರಿಗೆ ಅಭಿನಂದನೆಗಳನ್ನು ತಿಳಿಸಿದ ಚಿತ್ರದ ನಾಯಕ ದುನಿಯಾ ವಿಜಯ್, ಜನವರಿ 23ರಂದು ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ ನೋಡಿ ಪ್ರೋತ್ಸಾಹ ನೀಡಿ ಎಂದರು.

DK Shivakumar: ವಿಜಯೇಂದ್ರ ಹೇಳಿಕೆಗೆ ಡಿಕೆಶಿ ಖಡಕ್‌ ರಿಯಾಕ್ಷನ್‌..! #byvijayendra #bjp #dkshivakumar

ಈ ಹಾಡು ಉತ್ತಮವಾಗಿ ಮೂಡಿಬಂದಿದೆ‌. ಈ ಹಾಡಿನ ಚಿತ್ರೀಕರಣ ಸಮಯದಿಂದಲೂ ಯಾವಾಗ ಬಿಡುಗಡೆಯಾಗಬಹುದೆಂದು ಕಾಯುತ್ತಿದೆ. ಸ್ವಾಮಿ ಅವರ ಛಾಯಾಗ್ರಹಣ, ಯೋಗರಾಜ್ ಭಟ್ ಅವರ ಸಾಹಿತ್ಯ, ಅಜನೀಶ್ ಲೋಕನಾಥ್ ಅವರ ಸಂಗೀತ ಹಾಗು ವಿಜಯ್ ಪ್ರಕಾಶ್ ಅವರ ಗಾಯನ ಎಲ್ಲವೂ ಚೆನ್ನಾಗಿದೆ. ಇನ್ನೂ, ವಿಜಯ್ ಸರ್ ರಾಚಯ್ಯ ಪಾತ್ರದಲ್ಲಿ, ನಾನು ನಿಂಗವ್ವ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇವೆ. ಈ ಹಾಡಲ್ಲಿ ನಮ್ಮಿಬ್ಬರ ಅಭಿನಯಕ್ಕೆ ಎಲ್ಲರೂ ನೀಡುತ್ತಿರುವ ಮೆಚ್ಚುಗೆಗೆ ಮನ ತುಂಬಿ ಬಂದಿದೆ ಎಂದು ನಾಯಕಿ ರಚಿತರಾಮ್ ಖುಷಿ ಹಂಚಿಕೊಂಡಿದ್ದಾರೆ.

ಆಗಮಿಸಿದ ಅತಿಥಿಗಳಿಗೆ ಹಾಗೂ ಚಿತ್ರತಂಡದವರಿಗೆ ಧನ್ಯವಾದ ತಿಳಿಸಿ ಮಾತನಾಡಿದ ನಿರ್ದೇಶಕ ಜಡೇಶ್ ಕೆ ಹಂಪಿ, ನಾನು ಚಿತ್ರರಂಗಕ್ಕೆ ಪ್ರವೇಶ ಮಾಡಲು ಕಾರಣರಾದ ಗುರು ದೇಶಪಾಂಡೆ ಹಾಗು ತರುಣ್ ಸುಧೀರ್ ಇಲ್ಲಿರುವುದು ಖುಷಿಯಾಗಿದೆ. ಇನ್ನೂ, ಈ ನಿಂಗವ್ವ ಎಂಬ ಅದ್ಭುತ ಹಾಡನ್ನು ಯೋಗರಾಜ್ ಭಟ್ ಅವರು ಬರೆದುಕೊಟ್ಟಿದ್ದಾರೆ. ವಿಜಿ ಸರ್ ಹಾಗು ಯೋಗರಾಜ್ ಭಟ್ ಅವರ ಕಾಂಬಿನೇಶನ್ ನಲ್ಲಿ ಬಂದಿರುವ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿದೆ. ಈಗ ಆ ಸಾಲಿಗೆ ನಿಂಗವ್ವ ಕೂಡ ಸೇರಲಿದೆ. ನನ್ನ ಹಿಂದಿನ ಎರಡು ಚಿತ್ರಗಳಿಗೂ ಸಂಗೀತ ಸಂಯೋಜಿಸಿದ್ದ ಅಜನೀಶ್ ಅವರೆ ಈ ಚಿತ್ರಕ್ಕೂ ಸಂಗೀತ ನೀಡಿದ್ದಾರೆ. ವಿಜಯ್ ಪ್ರಕಾಶ್ ಹಾಗೂ ಅನನ್ಯ ಭಟ್ ಸೊಗಸಾಗಿ ಹಾಡಿದ್ದಾರೆ. ನಿರ್ಮಾಪಕರು ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಣ ಮಾಡಿದ್ದಾರೆ. ಚಿತ್ರದ ಎಲ್ಲಾ ಹಾಡುಗಳು ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದರು.

Belagavi Winter Session: ಸಂವಿಧಾನದ ಪುಸ್ತಕವನ್ನ ತೋರಿಸಿ ಯತ್ನಾಳ್​ಗೆ ಸಿದ್ದು ಪಾಠ  #pratidhvani

ಜಡೇಶ್ ಅವರು ಮೊದಲು ಕಥೆ ಹೇಳಿದಾಗ ನಾನು ಸದ್ಯಕ್ಕೆ ಸಿನಿಮಾ ಮಾಡುವುದಿಲ್ಲ ಎಂದು ಹೇಳಿದ್ದೆ. ಆದರೆ ಅವರು ನಾವು ನಿರ್ಮಾಣ ಮಾಡುವವರೆಗೂ ಬಿಡಲಿಲ್ಲ. ನನ್ನ ಮಗ ಹೇಮಂತ್ ಗೌಡ ಈ ಚಿತ್ರದ ನಿರ್ಮಾಪಕರು. ನಾನು ಅವರ ಜೊತೆ ಇದ್ದೀನಿ. ಚಿತ್ರ ನಿರ್ಮಾಣ ಮಾಡಲು ಅನೇಕ ಜನ ಸ್ನೇಹಿತರು ಸಾಥ್ ನೀಡಿದ್ದಾರೆ. ಅವರಿಗೆ ಹಾಗೂ ನನ್ನ ಇಡೀ ಚಿತ್ರತಂಡಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ ಎಂದರು ನಿರ್ಮಾಪಕ ಕೆ.ವಿ.ಸತ್ಯಪ್ರಕಾಶ್. ಹೇಮಂತ್ ಗೌಡ ಅವರು ಸಹ ಜನವರಿ 23 ರಂದು ತೆರೆಗೆ ಬರುತ್ತಿರುವ ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.

ಹಾಡು ಹುಟ್ಟಿದ ಸಮಯವನ್ನು ತಮ್ಮದೇ ಆದ ಶೈಲಿಯಲ್ಲಿ ವಿವರಿಸಿದ ಗೀತರಚನೆಕಾರ ಯೋಗರಾಜ್ ಭಟ್, ಚಿತ್ರಕ್ಕೆ ಶುಭ ಕೋರಿದರು. ಗಾಯಕ ವಿಜಯ್ ಪ್ರಕಾಶ್ ಅವರು ಸಹ “ನಿಂಗವ್ವ” ಹಾಡಿನ ಬಗ್ಗೆ ಮಾತನಾಡಿ, ಎರಡು ಸಾಲುಗಳನ್ನು ಹಾಡಿದರು.

Belagavi Winter Session: ಸಂವಿಧಾನದ ಪುಸ್ತಕವನ್ನ ತೋರಿಸಿ ಯತ್ನಾಳ್​ಗೆ ಸಿದ್ದು ಪಾಠ  #pratidhvani

ಇದು ನನ್ನ ಜಡೇಶ್.ಕೆ .ಹಂಪಿ ಅವರ ಕಾಂಬಿನೇಶನ್‌ನ ಮೂರನೇ ಚಿತ್ರ. ಈ ಹಿಂದೆ ದುನಿಯಾ ವಿಜಯ್ ಹಾಗೂ ರಚಿತರಾಮ್ ಅವರ “ಜಾನಿ ಜಾನಿ ಎಸ್ ಪಪ್ಪ” ಚಿತ್ರಕ್ಕೂ ನಾನೇ ಸಂಗೀತ ಸಂಯೋಜನೆ ಮಾಡಿದ್ದೆ. ಬಹಳ ವರ್ಷಗಳ ನಂತರ ಈ ಚಿತ್ರಕ್ಕೆ ಸಂಗೀತ ನೀಡಿದ್ದೇನೆ. ಯೋಗರಾಜ್ ಭಟ್ ಅವರ ಸಾಹಿತ್ಯ, ವಿಜಯ್ ಪ್ರಕಾಶ್ – ಅನನ್ಯ ಭಟ್ ಅವರ ಗಾಯನದಲ್ಲಿ “ನಿಂಗವ್ವ” ಹಾಡು ಚೆನ್ನಾಗಿ ಮೂಡಿಬಂದಿದೆ. ಈ ಚಿತ್ರದ ಎಲ್ಲಾ ಹಾಡುಗಳು ಚೆನ್ನಾಗಿದೆ. ಸದ್ಯದಲ್ಲೇ ಉಳಿದ ಹಾಡುಗಳು ಬಿಡುಗಡೆಯಾಗಲಿದೆ ಎಂದು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹೇಳಿದರು. ಸಂಭಾಷಣೆ ಬರೆದಿರುವ ಮಾಸ್ತಿ, ಶ್ರೀಕಾಂತ್, ಛಾಯಾಗ್ರಾಹಕ ಸ್ವಾಮಿ ಜೆ ಗೌಡ, ಸಿ.ಆರ್ ಬಾಬಿ ಹಾಗೂ ಆನಂದ್ ಆಡಿಯೋ ಶ್ಯಾಮ್ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Tags: Duniya VijayKannadakannada movieskannada songsMovieRchitha Ramsandalwood
Previous Post

ಶಬರಿಮಲೆ ಅಯ್ಯಪ್ಪಸ್ವಾಮಿಯ ಚಿನ್ನ ಕಳ್ಳತನ ಕೇಸ್‌: ಬಳ್ಳಾರಿಯ ಜ್ಯುವೆಲ್ಲರಿ ಮಾಲೀಕ ಅರೆಸ್ಟ್

Next Post

Air India: ಪ್ರಯಾಣಿಕನ ಮೇಲೆ ಏ‌ರ್ ಇಂಡಿಯಾ ಪೈಲೆಟ್ ಭೀಕರ ಹ**

Related Posts

ಐಪಿಎಲ್ 2026ಕ್ಕೆ ಬಿಸಿಸಿಐ ಹೊಸ ರೂಲ್ಸ್: ಸಮಯ ವ್ಯರ್ಥಕ್ಕೆ ಬ್ರೇಕ್, ಆಟದ ವೇಗ ಹೆಚ್ಚಿಸಲು ಈ ಕ್ರಮ!
Uncategorized

ಐಪಿಎಲ್ 2026ಕ್ಕೆ ಬಿಸಿಸಿಐ ಹೊಸ ರೂಲ್ಸ್: ಸಮಯ ವ್ಯರ್ಥಕ್ಕೆ ಬ್ರೇಕ್, ಆಟದ ವೇಗ ಹೆಚ್ಚಿಸಲು ಈ ಕ್ರಮ!

by ಪ್ರತಿಧ್ವನಿ
April 9, 2026
0

Indian Premier League (IPL) ಪಂದ್ಯಗಳ ಅವಧಿ ಹೆಚ್ಚುತ್ತಿರುವ ಹಿನ್ನೆಲೆ, Board of Control for Cricket in India 2026ರ ಆವೃತ್ತಿಯಿಂದ ಕಟ್ಟುನಿಟ್ಟಿನ ಹೊಸ ನಿಯಮಗಳನ್ನು...

Read moreDetails
ಸುಪ್ರೀಂ ಕೋರ್ಟ್ ಗರಂ: ಆದೇಶ ಉಲ್ಲಂಘನೆ ಆರೋಪದ ಮೇಲೆ ಐಎಎಸ್ ಅಧಿಕಾರಿಗೆ ತರಾಟೆ

ಸುಪ್ರೀಂ ಕೋರ್ಟ್ ಗರಂ: ಆದೇಶ ಉಲ್ಲಂಘನೆ ಆರೋಪದ ಮೇಲೆ ಐಎಎಸ್ ಅಧಿಕಾರಿಗೆ ತರಾಟೆ

April 9, 2026
ಅಮೆರಿಕ–ಇರಾನ್ ಕದನ ವಿರಾಮಕ್ಕೆ ಭಾರತದ ಫಸ್ಟ್ ರಿಯಾಕ್ಶನ್ ಇಲ್ಲಿದೆ

ಅಮೆರಿಕ–ಇರಾನ್ ಕದನ ವಿರಾಮಕ್ಕೆ ಭಾರತದ ಫಸ್ಟ್ ರಿಯಾಕ್ಶನ್ ಇಲ್ಲಿದೆ

April 9, 2026
ನಾಳೆ 2ನೇ ಪಿಯುಸಿ ಫಲಿತಾಂಶ ಪ್ರಕಟ: ಆನ್‌ಲೈನ್ ನಲ್ಲಿ ರಿಸಲ್ಟ್ ನೋಡುವುದು ಹೇಗೆ ?

ನಾಳೆ 2ನೇ ಪಿಯುಸಿ ಫಲಿತಾಂಶ ಪ್ರಕಟ: ಆನ್‌ಲೈನ್ ನಲ್ಲಿ ರಿಸಲ್ಟ್ ನೋಡುವುದು ಹೇಗೆ ?

April 8, 2026
ಉಪಚುನಾವಣೆ ಕದನ ಅಂತಿಮ ಘಟ್ಟಕ್ಕೆ: ದಾವಣಗೆರೆ ದಕ್ಷಿಣ–ಬಾಗಲಕೋಟೆ ಕ್ಷೇತ್ರಗಳಲ್ಲಿ ಮತದಾನಕ್ಕೆ ಸಕಲ ಸಿದ್ಧತೆ

ಉಪಚುನಾವಣೆ ಕದನ ಅಂತಿಮ ಘಟ್ಟಕ್ಕೆ: ದಾವಣಗೆರೆ ದಕ್ಷಿಣ–ಬಾಗಲಕೋಟೆ ಕ್ಷೇತ್ರಗಳಲ್ಲಿ ಮತದಾನಕ್ಕೆ ಸಕಲ ಸಿದ್ಧತೆ

April 8, 2026
Next Post
Air India: ಪ್ರಯಾಣಿಕನ ಮೇಲೆ ಏ‌ರ್ ಇಂಡಿಯಾ ಪೈಲೆಟ್ ಭೀಕರ ಹ**

Air India: ಪ್ರಯಾಣಿಕನ ಮೇಲೆ ಏ‌ರ್ ಇಂಡಿಯಾ ಪೈಲೆಟ್ ಭೀಕರ ಹ**

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada