.D ಕುಮಾರಸ್ವಾಮಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ, ಕೇಂದ್ರ ಸಚಿವರಾಗಬೇಕು ಎಂದು ಪಕ್ಷದ ಜನರು ಬಯಸಿದ್ರು. ಹಳೇ ಮೈಸೂರು ಭಾಗದ ಪ್ರಭಾವಿ ನಾಯಕ ಕುಮಾರಸ್ವಾಮಿ ಗೆಲುವಿಗಾಗಿ ಪ್ರಾರ್ಥನೆ ಮಾಡಿದ್ದು ಗದಗದ ಅಭಿಮಾನಿಗಳು. ಇದೀಗ ಹರಕೆ ಹೊತ್ತಿದ್ದ ಜೆಡಿಎಸ್ ಮುಖಂಡರು ಪಂಡಿತ ಪುಟ್ಟರಾಜ ಗವಾಯಿಗಳ ಗದ್ದುಗೆಗೆ ಪೂಜೆ ಸಲ್ಲಿಸಿ ಹರಕೆ ತೀರಿಸಿದ್ದಾರೆ.
ಬಿಸಿ ಬಿಸಿ ಹೋಳಿಗೆ ಮಾಡಿ, ಮಠದಲ್ಲಿನ ಮಕ್ಕಳು ಹಾಗು ಭಕ್ತರಿಗೆ ಉಣಬಡಿಸಿದ್ದಾರೆ. ಗದಗ ನಗರದ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ 1008 ಹೋಳಿಗೆ ಮಾಡಿ ಹಂಚುವ ಮೂಲಕ ಜೆಡಿಎಸ್ ಕಾರ್ಯಕರ್ತರು ಹರಕೆ ಹೊತ್ತಿದ್ರಂತೆ. ಅದರಂತೆ ಇದೀಗ ಕುಮಾರಸ್ವಾಮಿ ಕೇಂದ್ರ ಸಚಿವರಾಗಿದ್ದು, ಹರಕೆ ತಿರಿಸಿದ್ದಾರೆ.
ಶ್ರೀ ವೀರೇಶ್ವರ ಪುಣ್ಯಾಶ್ರಮದ ಪಂಡಿತ ಪುಟ್ಟರಾಜ ಗವಾಯಿಗಳ ಗದ್ದುಗೆಯಲ್ಲಿ ಪೂಜೆ ಸಲ್ಲಿಸಿರುವ ಗದಗ ಜಿಲ್ಲಾ ಜೆಡಿಎಸ್ ಮುಖಂಡರು, ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಕೇಂದ್ರದಲ್ಲಿ ಸಚಿವರಾದ ಕುಮಾರಸ್ವಾಮಿ ಪರವಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದೇ ವೇಳೆ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳಾದ ಶ್ರೀ ಕಲ್ಲಯ್ಯಜ್ಜನವರಿಗೆ ಸನ್ಮಾನಿಸಿ ಗೌರವಿಸಿದ್ದಾರೆ. ಈ ವೇಳೆ ಮಾತನಾಡಿರುವ, ಜೆಡಿಎಸ್ ರಾಜ್ಯ ವಕ್ತಾರರಾದ ವೆಂಕನಗೌಡ ಗೋವಿಂದಗೌಡ, ನಾವು ಬೇಡಿಕೊಂಡ ಹರಕೆ ಈಡೇರಿದೆ, ಹೀಗಾಗಿ ಭಕ್ತರಿಗೆ ಹೋಳಿಗೆ ಊಟ ಮಾಡಿಸಿದ್ದೇವೆ ಎಂದಿದ್ದಾರೆ.
ಗದಗ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಪ್ರಭಾವ ಅಷ್ಟೊಂದು ಇಲ್ಲದಿದ್ದರೂ ಹೆಚ್.ಡಿ ಕುಮಾರಸ್ವಾಮಿ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಎನ್ನಲಾಗಿದೆ. ರಾಜ್ಯ ರಾಜ್ಯಕಾರಣದಿಂದ ಕೇಂದ್ರಕ್ಕೆ ಹೋಗುವ ನಿರ್ಧಾರ ಮಾಡಿದ ಬಳಿಕ ಕುಮಾರಸ್ವಾಮಿ ಅಭಿಮಾನಿಗಳು ಈ ರೀತಿಯ ಹರಕೆ ಹೊತ್ತಿದ್ರಂತೆ. ಕರ್ನಾಟಕದಿಂದ ದೇವೇಗೌಡರು ಪ್ರಧಾನಿ ಆಗಿದ್ರು. ಮುಂದೆ ಕುಮಾರಸ್ವಾಮಿ ಕೂಡ ಪ್ರಧಾನಿ ಆಗಲಿ ಎಂದು ಅಭಿಮಾನಿಗಳು ಆಶಯ ವ್ಯಕ್ತಪಡಿಸಿದ್ದಾರೆ.