ಮಹಿಳೆಯರಿಗೆ ಅಡುಗೆ ಮಾಡುವುದು ಒಂದು ರೀತಿಯ ಟಾಸ್ಕ್ ಆದ್ರೆ ಅಡುಗೆ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಮತ್ತೊಂದು ರೀತಿಯ ಟಾಸ್ಕ್ ಅಥವಾ ಕೆಲಸ ಅಂತ ಹೇಳಬಹುದು. ಎಷ್ಟೇ ಸ್ವಚ್ಛತೆ ಕಾಪಾಡಿಕೊಂಡರೂ ಕೂಡ ಪ್ರತಿದಿನ ಅಡುಗೆ ಮನೆ ಗಲೀಜು ಆಗುವಂತದ್ದು ಸಹಜ. ಅಡಿಗೆಮನೆ ಸ್ವಚ್ಛವಾಗಿ ಇಲ್ಲದಿದ್ದರೆ ಒಂದು ರೀತಿ ಆ ತಲೆ ನೋವು. ಕೆಲವು ಬಾರಿ ಅಡುಗೆ ಮಾಡುವ ಟೈಂನಲ್ಲಿ ಎಣ್ಣೆ ಹಾರುವಂಥದ್ದು ಸಾಂಬಾರ್ ಅಥವಾ ಪಲ್ಯ ಮಾಡುವಾಗ ಗೋಡೆಯ ಮೇಲೆ ಚಿಮ್ಮಿವಂತದ್ದು. ಇದರಿಂದಾಗಿ ಗೋಡೆಯ ಬಣ್ಣ ಬದಲಾಗುತ್ತದೆ ಹಾಗೂ ಜಿಡ್ಡಿನ ಕಲೆ ಹಾಗೆ ಉಳಿಯುತ್ತದೆ.. ಈ ಕಲೆಗಳನ್ನು ಮನೆಯಲ್ಲೇ ಇರುವ ಕೆಲವು ವಸ್ತುಗಳನ್ನ ಬಳಸಿ ಶಮನ ಮಾಡಬಹುದು ಹಾಗೂ ಅಡುಗೆಮನೆಯನ್ನು ಶುಚಿಯಾಗಿ ಇಟ್ಟುಕೊಳ್ಳಬಹುದು..

ನಿಂಬೆರಸ
ಯಾವುದೇ ಒಂದು ಕಲಿಗಳನ್ನ ಶಮನ ಮಾಡುವುದಕ್ಕೆ ನಿಂಬೆರಸ ಉತ್ತಮ. ಬಟ್ಟೆಯ ಮೇಲಿರುವ ಕಲೆಗಳಾಗಲಿ ಅಥವಾ ಗೋಡೆಯ ಮೇಲಿನ ಕಲೆಯನ್ನ ತಕ್ಷಣಕ್ಕೆ ಹೋಗಲಾಡಿಸುತ್ತದೆ.. ನಿಂಬೆರಸದೊಂದಿಗೆ ವಿನಿಗರನ್ನ ಬೆರೆಸಿ, ಚೆನ್ನಾಗಿ ಮಿಶ್ರಣ ಮಾಡಿ ಅದನ್ನ ಒಂದು ಬಟ್ಟೆ ಅಥವಾ ಸ್ಕ್ರಬ್ಬರ್ ಗೆ ಹಾಕಿ ಗೋಡೆಯನ್ನು ಉಜ್ಜುವುದರಿಂದ ತಕ್ಷಣಕ್ಕೆ ಕಲೆ ಶಮನವಾಗುತ್ತದೆ ಹಾಗೂ ಗೋಡೆಯ ನಿಜವಾದ ಬಣ್ಣ ಮರುಕಳಿಸುತ್ತದೆ.ಅದರಲ್ಲೂ ನಿಂಬೆ ರಸದಲ್ಲಿ ಸಿಟ್ರಿಕ್ ಅಂಶ ಇರುವುದರಿಂದ ಜಿಡ್ಡಿನ ಕಲೆಯನ್ನ ತಕ್ಷಣಕ್ಕೆ ಶಮನ ಮಾಡುತ್ತದೆ.

ಟೂತ್ಪೇಸ್ಟ್
ಪೇಸ್ಟ್ ಕಲೆಗಳನ್ನು ಶಮನ ಮಾಡುವುದಕ್ಕೆ ಇದೊಂದು ಉತ್ತಮ ಉಪಾಯ. ಅದರಲ್ಲೂ ಕೂಡ ಬಿಳಿಯ ಟೂತ್ಪೇಸ್ಟ್ ತುಂಬಾನೇ ಒಳ್ಳೆಯದು. ಒಂದು ಸ್ಕ್ರಬ್ಬರ್ ಬಗ್ಗೆ ಟೂತ್ಪೇಸ್ಟ್ ಅನ್ನ ಹಾಕಿ, ಕಲೆಗಳಾದ ಜಾಗದಲ್ಲಿ ಚೆನ್ನಾಗಿ ಉಜ್ಜಿ ಕೆಲ ನಿಮಿಷಗಳ ಕಾಲ ಹಾಗೆ ಬಿಡಿ. ನಂತರ ಉಗುರು ಬೆಚ್ಚ ನೀರಿನಿಂದ ತೊಳೆಯುವುದರಿಂದ ಕಲೆಗಳು ತಕ್ಷಣಕ್ಕೆ ಮಾಯವಾಗುತ್ತವೆ.

ಬೇಕಿಂಗ್ ಸೋಡಾ
ಬೇಕಿಂಗ್ ಸೋಡಾ ಗೆ ಸ್ವಲ್ಪ ನೀರನ್ನು ಬೆರೆಸಿ ಸ್ಕ್ರಬ್ಬರ್ ಮೂಲಕ ಕಲಿಗಳಾದ ಗೋಡೆಯನ್ನು ಚೆನ್ನಾಗಿ ಉಜ್ಜಿ ಕೆಲ ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ಬೆಚ್ಚಗಿನ ನೀರಿನಿಂದ ವಾಶ್ ಮಾಡಿ. ಕಲೆಗಳನ್ನ ನಿವಾರಣೆ ಮಾಡುವುದಕ್ಕೆ ಬೇಕಿಂಗ್ ಸೋಡಾ ಬೆಸ್ಟ್ ರೆಮಿಡಿ.. ಬೇಕಿಂಗ್ ಸೋಡಾ ಜೊತೆ ನಿಂಬೆ ರಸವನ್ನ ಬೆರೆಸುವುದರಿಂದ ತಕ್ಷಣಕ್ಕೆ ನಿಮಗೆ ರಿಸಲ್ಟ್ ಸಿಗುತ್ತದೆ..

ಉಪ್ಪು
ಒಂದು ಟೇಬಲ್ ಸ್ಪೂನ್ ಅಷ್ಟು ಉಪ್ಪಿಗೆ ಚಿಟಿಕೆಯಷ್ಟು ನೀರನ್ನ ಬೆರೆಸಿ ಅದನ್ನ ಒಂದು ಸ್ಕ್ರಬ್ಬರ್ ಗೆ ಹಾಕಿ ನಂತರ ಕೊಡೆಯನ್ನ ಹುಚ್ಚುವುದರಿಂದ ಕಲೆಗಳು ಮಾಯವಾಗುತ್ತದೆ ಅದರಲ್ಲೂ ಕೂಡ ಎಣ್ಣೆ ಕಲೆಗಳಿಗೆ ಉತ್ತಮವಾಗಿದೆ.. ಉಪ್ಪಿನೊಂದಿಗೆ ಜಾಸ್ತಿ ನೀರನ್ನು ಹಾಕಿದರೆ ಉಪ್ಪು ಕರಗುತ್ತದೆ ಹಾಗಾಗಿ ಚಿಟಿಕೆಯಷ್ಟು ಮಾತ್ರ ನೀರನ್ನು ಬೆರೆಸಬೇಕು..
