
IPL (IPL CRICKET) ಸೀಸನ್ 17ರ ರಣರೋಚಕ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಲಕ್ನೋ ಟೀಮ್ ಗೆದ್ದು ಹೊಸ ಇತಿಹಾಸ ಬರೆದಿದೆ. ಚೆನ್ನೈನ ಎಂ.ಚಿದಂಬರಂ ಮೈದಾನದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK)ತಂಡದ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ , (LSG)ಸೂಪರ್ ಆಟ ಆಡಿ ಗೆದ್ದು ಬೀಗಿದೆ. ಚೆನ್ನೈ ನೀಡಿದ 211 ರನ್ಗಳ ದೊಡ್ಡ ಟಾರ್ಗೆಟ್ ಬೆನ್ನತ್ತಿದ ಲಕ್ನೋ ತಂಡದ ಪರ ಓಪನರ್ ಆಗಿ ಬಂದ ಡಿಕಾಕ್, ಕೆ.ಎಲ್ ರಾಹುಲ್ ಶುಭಾರಂಭ ಕೊಡಲಿಲ್ಲ. ರಾಹುಲ್ 16 ರನ್ ಗಳಿಸಿ ಕ್ಯಾಚ್ ಕೊಟ್ಟು ವಿಕೆಟ್ ಒಪ್ಪಿಸಿದ್ರು.ಬಳಿಕ ಬಂದ ಮಾರ್ಕಸ್ ಸ್ಟೊಯ್ನೀಸ್ ಕೊನೆವರೆಗೂ ಕ್ರೀಸ್ನಲ್ಲಿ ನಿಂತು ಚೆನ್ನೈ ಬೌಲರ್ಗಳ ಬೆಂಡೆತ್ತಿದ್ರು. ಕೇವಲ 63 ಬಾಲ್ನಲ್ಲಿ 6 ಭರ್ಜರಿ ಸಿಕ್ಸರ್, 13 ಫೋರ್ ಸಮೇತ 124 ರನ್ ಸಿಡಿಸಿದ್ರು.

ಇವರಿಗೆ ಸಾಥ್ ನೀಡಿದ ನಿಕೋಲಸ್ ಪೂರನ್ ಕೇವಲ 15 ಬಾಲ್ನಲ್ಲಿ 2 ಸಿಕ್ಸರ್, 3 ಫೋರ್ ಸಮೇತ 34 ರನ್ ಬಾರಿಸಿದ್ರು. ಈ ಮೂಲಕ ಲಕ್ನೋ ತಂಡವನ್ನು ಗೆಲ್ಲಿಸಿದ್ರು.ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಕ್ಯಾಪ್ಟನ್ ಋತುರಾಜ್ ಗಾಯಕ್ವಾಡ್ ಕೇವಲ 60 ಬಾಲ್ನಲ್ಲಿ 3 ಸಿಕ್ಸ್, 12 ಫೋರ್ ಸಮೇತ 108 ರನ್ ಸಿಡಿಸಿದ್ರು.

ಬಳಿಕ ಬಂದ ಶಿವಂ ದುಬೆ 27 ಬಾಲ್ನಲ್ಲಿ 7 ಸಿಕ್ಸರ್, 3 ಫೋರ್ ಸಮೇತ 66 ರನ್ ಬಾರಿಸಿದ್ರು. ಜಡೇಜಾ 16, ಸ್ಟಾರ್ಕ್ 11, ಧೋನಿ 4 ರನ್ ಸಹಾಯದಿಂದ ಚೆನ್ನೈ 4 ವಿಕೆಟ್ ನಷ್ಟಕ್ಕೆ 211 ರನ್ ಕಲೆ ಹಾಕಿತ್ತು. ಇದನ್ನ ಬೆನ್ನತ್ತಿದ ಲಕ್ನೋ ತಂಡ ಗೆದ್ದು ಪಾಯಿಂಟ್ಸ್ ಟೇಬಲ್ ನಲ್ಲಿ 2 ಅಂಕ ಹೆಚ್ಚಿಸಿಕೊಂಡಿದೆ.