ಗರ್ಭಧಾರಣೆಯ ನಂತರ 9 ತಿಂಗಳವರೆಗೂ ಪಿರಿಯಡ್ಸ್ ಆಗುವುದಿಲ್ಲ ಎಂಬ ಮಾಹಿತಿ ಎಲ್ಲರಿಗೂ ತಿಳಿದಿದೆ. ಮಗು ಹುಟ್ಟಿದ ನಂತರ ಪೀರಿಯಡ್ಸ್ ಶುರುವಾಗುತ್ತದೆ. ಆದರೆ ಕೆಲವೊಬ್ಬ ಗರ್ಭಿಣಿಯರಿಗೆ ಗರ್ಭಾವಸ್ಥೆಯಲ್ಲಿ ಸ್ವಲ್ಪ ಬ್ಲೀಡಿಂಗ್ ಕಂಡು ಬರುತ್ತದೆ. ವೈದಿರು ಹೇಳುವ ಪ್ರಕಾರ ಈ ಬ್ಲೀಡಿಂಗ್ ಹೆಚ್ಚು ಜನಕ್ಕೆ ಕಾಡುತ್ತದೆ.ಆದರೆ ಕೆಲವೊಂದು ಸಂದರ್ಭದಲ್ಲಿ ಒಬ್ಬಬ್ಬರಿಗೆ ಅತಿಯಾಗಿ ಬ್ಲೀಡ್ ಆಗುತ್ತದೆ ಈ ವಿಚಾರದ ಬಗ್ಗೆಯ ಕಾಳಜಿ ವಹಿಸಿ ವೈದ್ಯರನ್ನ ಭೇಟಿಯಾಗುವುದು ಉತ್ತಮ. ಬ್ಲೀಡಿಂಗ್ 24 ಗಂಟೆ ಒಳಗೆ ನಿಂತರೆ ತೊಂದರೆ ಹೆಚ್ಚಿರುವುದಿಲ್ಲ . ಆದರೆ ಅದಕ್ಕಿಂತ ಹೆಚ್ಚು ಬ್ಲೀಡ್ ಆದರೆ ಅದು ಆರೋಗ್ಯಕರವಲ್ಲ. ಗರ್ಭಾವಸ್ಥೆಯಲ್ಲಿ ಬ್ಲೀಡಿಂಗ್ ಅನ್ನ ತಪ್ಪಿಸಲು ಈ ವಿಷಯಗಳನ್ನ ತಪ್ಪದೇ ಪಾಲಿಸಿ.

ವಿಶ್ರಾಂತಿ ಪಡೆಯಿರಿ
ಗರ್ಭಾವಸ್ಥೆಯಲ್ಲಿ ಬ್ಲೀಡಿಂಗ್ ಆದರೆ, ಅಂತ ಸಂದರ್ಭದಲ್ಲಿ ಹೆಚ್ಚು ಓಡಾಡುವುದು ಒಳ್ಳೆಯದಲ್ಲ ಬದಲಿಗೆ ಮಲಗುವುದು ಅಥವಾ ಸುಮ್ಮನೆ ಕುಳಿತುಕೊಳ್ಳುವುದು ಉತ್ತಮ. ಓಡಾಟ ಅಥವಾ ಅತಿಯಾಗಿ ನಡೆದಾಡುವುದರಿಂದ ರಕ್ತಸ್ರಾವ ಹೆಚ್ಚಾಗುವುದು.

ಭಾರವನ್ನ ಎತ್ತಬೇಡಿ
ಗರ್ಭಿಣಿಯಾದಾಗ ಅತಿಯಾದ ಭಾರವನ್ನ ಎತ್ತುವುದು ಒಳ್ಳೆಯದಲ್ಲ. ಹೆಚ್ಚು ಜನ ಗರ್ಭಾವಸ್ಥೆಯಲ್ಲಿಯು ಜಿಮ್ ಹಾಗೂ ವರ್ಕೌಟನ ಮಾಡ್ತಾರೆ. ಆದ್ರೆ ರಕ್ತಸ್ರಾವ ಆದಾಗ ಜಿಮ್ ಅನ್ನ ತಪ್ಪಿಸುವುದು ಉತ್ತಮ. ಇನ್ನು ಕೆಲ ಗರ್ಭಿಣಿಯರು ಮನೆಯಲ್ಲಿಯೇ ಕೆಲಸ ಮಾಡುವಾಗ ಬಾರದ ವಸ್ತುಗಳನ್ನ ಎತ್ತುವುದನ್ನ ಕೂಡ ತಪ್ಪಿಸಬೇಕು.

ಶ್ರಮದಾಯಕ ಕೆಲಸವನ್ನು ತಪ್ಪಿಸಿ
ಗರ್ಭಾವಸ್ಥೆಯಲ್ಲಿ ಅತಿಯಾದ ಮನೆ ಕೆಲಸ ಅದರಲ್ಲೂ ಮನವರಿಸುವುದು ಬಗ್ಗೆ ಕೆಲಸ ಮಾಡುವುದು ಭಾರವಾದ ವಸ್ತುಗಳನ್ನ ಎತ್ತುವುದು ಕೂತು ಕೆಲಸ ಮಾಡುವುದನ್ನು ಹೆಚ್ಚು ಮಾಡುವುದು ಒಳ್ಳೆಯದಲ್ಲ ಅದರಲ್ಲೂ ಕೂಡ ರಕ್ತಸ್ರಾವದ ಸಂದರ್ಭದಲ್ಲಿ ಈ ಕೆಲಸಗಳನ್ನ ತಪ್ಪಿಸುವುದು ಉತ್ತಮ. ಫಿಸಿಕಲಿ ಮಾತ್ರವಲ್ಲದೇ ಮೆಂಟಲ್ಲಿ ಕೂಡ ಸ್ಟ್ರೆಸ್ ಅನ್ನ ಹೆಚ್ಚು ತೆಗೆದುಕೊಳ್ಳುವುದು ಒಳ್ಳೆಯದಲ್ಲ. ನಿಮ್ಮ ಮೈಂಡ್ ಅನ್ನು ರಿಲ್ಯಾಕ್ಸ್ ಆಗಿ ಇಟ್ಟುಕೊಳ್ಳುವುದು ಉತ್ತಮ.

ಟ್ರಾವೆಲ್ ಮಾಡಬೇಡಿ
ಗರ್ಭವಸ್ತಿಯಲ್ಲಿ ನಾವು ನಮ್ಮ ಬಗ್ಗೆ ಕಾಳಜಿ ವಹಿಸುವುದು ಮಾತ್ರವಲ್ಲದೇ, ಮಗುವಿನ ಬಗ್ಗೆಯೂ ಕಾಳಜಿ ವಹಿಸುವುದು ಉತ್ತಮ. ಗರ್ಭಧಾರಣೆಯ ಸಂದರ್ಭದಲ್ಲಿ ಪ್ರಯಾಣವನ್ನು ಹೆಚ್ಚು ಮಾಡಬಾರದು.. ದೂರದ ಊರುಗಳಿಗೆ ಪ್ರಯಾಣ ಮಾಡುವುದು ಇದರಿಂದ ರಕ್ತಸ್ರಾವವನ್ನು ಅನುಭವಿಸುತ್ತೀರಾ. ಮುಖ್ಯವಾಗಿ ಗರ್ಭಾವಸ್ಥೆಯ ಆರಂಭದಲ್ಲಿ ಪ್ರಯಾಣವನ್ನು ಸಂಪೂರ್ಣವಾಗಿ ನಿಲ್ಲಿಸುವುದು ಉತ್ತಮ..

ಹೈಡ್ರೇಟ್ ಆಗಿರಿ
ದೇಹದಲ್ಲಿ ನೀರಿನ ಪ್ರಮಾಣವೂ ಕಡಿಮೆಯಾದಾಗ ಹಾಗೂ ಉಷ್ಣತೆ ಹೆಚ್ಚಾದಾಗ ರಕ್ತಸ್ರಾವಾಗುವಂತಹ ಚಾನ್ಸಸ್ ತುಂಬಾನೇ ಇರುತ್ತದೆ. ಹಾಗಾಗಿ ನಮ್ಮ ದೇಹವನ್ನ ಹೈಡ್ರೇಟ್ ಆಗಿಡುವುದು ನಮ್ಮ ಕರ್ತವ್ಯವಾಗಿರುತ್ತದೆ.
