ಕನ್ನಡ ಕಿರುತೆರೆ (Small screen) ಮತ್ತು ಹಿರಿತೆರೆಯಲ್ಲಿ (Sliver screen) ಉತ್ತಮ ಹೆಸರುಗಳಿಸಿದ್ದ ಹಿರಿಯ ನಟಿ ಪದ್ಮಜಾ ರಾವ್‌ಗೆ (Padmaja rao) ನ್ಯಾಯಾಲಯ 3 ತಿಂಗಳ ಜೈಲು ಶಿಕ್ಷೆ ಪ್ರಕಟ ಮಾಡಿದೆ.
ಚೆಕ್ ಬೌನ್ಸ್ (Cheque bounce) ಪ್ರಕರಣದಲ್ಲಿ ನಟಿ ಪದ್ಮಜಾ ರಾವ್‌ಗೆ 3 ತಿಂಗಳು ಶಿಕ್ಷೆ ಪ್ರಕಟವಾದ ಬೆನ್ನಲ್ಲೆ ನಿರ್ಮಾಪಕ ವೀರೇಂದ್ರ ಶೆಟ್ಟಿ (Virendra shetty) ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ವೈಯಕ್ತಿಕ ಕಾರಣಕ್ಕಾಗಿ ನನ್ನಿಂದ ಹಂತ ಹಂತವಾಗಿ ನಟಿ ಪದ್ಮಜಾ ರಾವ್ ಸಾಲ ಪಡೆದಿದ್ರು.ಆದ್ರೆ ಸಾಲ ಕೇಳಿದಾಗ ದೊಡ್ಡವರಿಂದ ಕಾಲ್ ಮಾಡಿಸಿ ಬೆದರಿಕೆ ಹಾಕಿದ್ರು ಎಂದು ಹೇಳಿದ್ದಾರೆ.
ಸಾಲ ಪಡೆದುಕೊಳ್ಳುವಾಗ ತನಗೆ ಚೆಕ್ ಕೊಟ್ಟಿದ್ದರು. ಆದ್ರೆ ಅದು ಬೌನ್ಸ್ ಆಗಿತ್ತು.ಹೀಗಾಗಿ ಕೋರ್ಟ್ ಮೊರೆ ಹೋದೆ.ಕೋರ್ಟ್ಲ್ಲಿ 4 ವರ್ಷ ತಡವಾದರೂ ನ್ಯಾಯ ಸಿಕ್ಕಿದೆ.ಹಿರಿಯ ನಟಿ,ಒಳ್ಳೆಯವರು ಎನ್ನುವ ಕಾರಣಕ್ಕಾಗಿ ಸಾಲ ಕೊಟ್ಟೆ.ಆದ್ರೆ ಮೋಸ ಮಾಡಿದ್ರು ಎಂದು ನಿರ್ಮಾಪಕ ವೀರೇಂದ್ರ ಶೆಟ್ಟಿ ಹೇಳಿದ್ರು.