• Home
  • About Us
  • ಕರ್ನಾಟಕ
Saturday, November 15, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಸಿನಿಮಾ

ರಾಜವರ್ಧನ್‌ ಅಭಿನಯದ ʻಪ್ರಣಯಂʼ ಶ್ರೀಮಂತಿಕೆಗೆ ಹಾಟ್ ಟ್ರೈಲರ್

Any Mind by Any Mind
January 19, 2024
in ಸಿನಿಮಾ
0
ರಾಜವರ್ಧನ್‌ ಅಭಿನಯದ ʻಪ್ರಣಯಂʼ ಶ್ರೀಮಂತಿಕೆಗೆ ಹಾಟ್ ಟ್ರೈಲರ್
Share on WhatsAppShare on FacebookShare on Telegram

ಮನಸ್ವಿ ವೆಂಚರ್ಸ್ ಹಾಗೂ ಪಿಟು ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಪರಮೇಶ್ ಅವರೇ ಕಥೆ ಬರೆದು ನಿರ್ಮಿಸಿರುವ “ಪ್ರಣಯಂ” ಚಿತ್ರಕ್ಕೆ ಎಸ್. ದತ್ತಾತ್ರೇಯ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.

ADVERTISEMENT

ಸ್ಯಾಂಡಲ್‌ವುಡ್‌ನಲ್ಲಿ ಈಗಾಗಲೇ ಪಲ್ಲಕ್ಕಿ, ಗಣಪ, ಪಾರಿಜಾತದಂಥ ಅದ್ಭುತ ಚಿತ್ರಗಳನ್ನು ನೀಡಿದ ಪರಮೇಶ್ ಅವರೀಗ ಮತ್ತೊಂದು ಇನ್ ಟೆನ್ಸ್ ಲವ್ ಸ್ಟೋರಿಯನ್ನು ಪ್ರಣಯಂ ಚಿತ್ರದ ಮೂಲಕ ಪ್ರೇಕ್ಷಕರಿಗೆ ನೀಡಲಿದ್ದಾರೆ. ಬಿಚ್ಚುಗತ್ತಿ ಖ್ಯಾತಿಯ ನಟ ರಾಜವರ್ಧನ್, ನೈನಾ ಗಂಗೂಲಿ ಚಿತ್ರದ ನಾಯಕ, ನಾಯಕಿಯಾಗಿ ಅಭಿನಯಿಸಿದ್ದಾರೆ. ಫೆಬ್ರವರಿ 9ಕ್ಕೆ ರಾಜ್ಯಾದ್ಯಂತ ತೆರೆಕಾಣುತ್ತಿರುವ ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಮಾಜಿ ಉಪ ಮೇಯರ್ ಮೋಹನ್ ರಾಜು ಟ್ರೈಲರ್ ರಿಲೀಸ್ ಮಾಡಿ ಈ ಟೈಟಲ್ ಕನ್ನಡದ ಜೊತೆ ತೆಲುಗು ಭಾಷೆಗೂ ಹತ್ತಿರವಾಗುವಂತಿದೆ. ಹಾಡು, ಕಾನ್ಸೆಪ್ಟ್ ಎರಡೂ ಚೆನ್ನಾಗಿದೆ ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದರು.

ಚಿಕ್ಕಮಗಳೂರು, ಮಡಿಕೇರಿಯಂಥ ಸುಂದರ ಲೊಕೇಶನ್ ಗಳಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಝಂಕಾರ್ ಮ್ಯೂಸಿಕ್ ಈ ಚಿತ್ರದ ಹಾಡುಗಳನ್ನು ಹೊರತಂದಿದೆ. ಕುನಾಲ್ ಗಾಂಜಾವಾಲ, ಶ್ರೇಯಾ ಘೋಷಾಲ್ ಇತರರು ದನಿಯಾಗಿದ್ದಾರೆ. ಚಿತ್ರದಲ್ಲಿ ಗೋವಿಂದೇಗೌಡ, ಮಂಥನ, ಪ್ರಶಾಂತ್, ಸಮೀಕ್ಷಾ, ಪ್ರಿಯಾ ತರುಣ್ ಉಳಿದ ಪಾತ್ರಗಳಲ್ಲಿ ನಟಿಸಿದ್ದಾರೆ. ಮನೋಮೂರ್ತಿ ಅವರ ಸಂಗೀತ ನಿರ್ದೇಶನ, ವಿ. ನಾಗೇಶ್ ಆಚಾರ್ಯ ಅವರ ಛಾಯಾಗ್ರಹಣ. ಮದನ್ ಹರಿಣಿ ಅವರ ನೃತ್ಯ ನಿರ್ದೇಶನ, ಥ್ರಿಲ್ಲರ್ ಮಂಜು, ಮಾಸ್ ಮಾದ ಅವರ ಸಾಹಸ ನಿರ್ದೇಶನ ಪ್ರಣಯಂ ಚಿತ್ರಕ್ಕಿದೆ.

ಈ ಚಿತ್ರದಲ್ಲಿ ಜಯಂತ್ ಕಾಯ್ಕಿಣಿ ಅವರು ೩ ಹಾಡುಗಳನ್ನು ಬರೆದಿದ್ದು, ಮನೋಮೂರ್ತಿ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ವಿ.ನಾಗೇಶ್ ಆಚಾರ್ಯ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಸಂಗೀತ ನಿರ್ದೇಶಕ ಮನೋಮೂರ್ತಿ ಚಿತ್ರದಲ್ಲಿ ೫ ಹಾಡಿದ್ದು, ಕ್ಯಾಮೆರಾ ವರ್ಕ್ ಅದ್ಭುತವಾಗಿ ಮೂಡಿಬಂದಿದೆ. ಪ್ರಣಯಂ ಅಂದ್ರೆ ಲವ್, ಅದನ್ನಿಲ್ಲಿ ಢಿಫರೆಂಟಾಗಿ ಹೇಳಿದ್ದಾರೆ. ಖಂಡಿತ ಈ ವರ್ಷದ ಮೊದಲ ಹಿಟ್ ಸಿನಿಮಾ ಆಗುತ್ತೆ ಎಂದರು.



ನಂತರ ಜಯಂತ್ ಕಾಯ್ಕಿಣಿ ಮಾತನಾಡಿ, ಪರಮೇಶ್ ತುಂಬಾ ಜೋಷ್ ಇರುವಂಥ ಪ್ರೊಡ್ಯೂಸರ್ ಸಿನಿಮಾಗಾಗಿ ತುಂಬಾ ಕಷ್ಟಪಡುತ್ತಾರೆ. ಮನೋಮೂರ್ತಿ ಹಾಗೂ ನಮ್ಮ ದಾಂಪತ್ಯಕ್ಕೆ ೧೭ ವರ್ಷ ಆಯ್ತು. ಆಗಿದ್ದ ಕುತೂಹಲ, ಚಡಪಡಿಕೆ ಈಗಲೂ ಇದೆ. ಹಿಂದೆ ಪರಮೇಶ್ ಅವರ ಕರಿಯ, ಗಣಪ, ಪಾರಿಜಾತ ಚಿತ್ರಗಳಿಗೂ ನಾನೇ ಸಾಂಗ್ ಬರೆದಿದ್ದೆ. ಇದರಲ್ಲಿ ೩ ಹಾಡನ್ನು ಬರೆದಿದ್ದೇನೆ ಎಂದು ಹೇಳಿದರು. ನಿರ್ದೇಶಕ ದತ್ತಾತ್ರೇಯ ಮಾತನಾಡುತ್ತ ನಾನು ಈ ಸ್ಕ್ರಿಪ್ಟ್ ಮಾಡಿಕೊಂಡು ಬಂದಾಗ ನಿರ್ಮಾಪಕರು ತುಂಬಾ ಚೆನ್ನಾಗಿ ಬಂದಿದೆ ಎಂದು ಖುಷಿಯಿಂದ ಹಗ್ ಮಾಡಿದರು. ಸುಮಾರು ಲೊಕೇಶನ್ ಗಳನ್ನು ನೋಡಿ ಕೊನೆಗೆ ಮಡಿಕೇರಿಯಲ್ಲಿ ನಮಗೆ ಬೇಕಾದ ಲೊಕೇಶನ್ ಸಿಕ್ತು. ಎಲ್ಲಾ ಲೆಜೆಂಡರಿಗಳ ಸಹಕಾರದಿಂದ ಸಿನಿಮಾ ಅದ್ಭುತವಾಗಿ ಬಂದಿದೆ. ನಾಗೇಶ್ ನನಗೆ ಇನ್ನೊಂದು ಕಣ್ಣಿದ್ದ ಹಾಗೆ. ತುಂಬಾ ಚೆನ್ನಾಗಿ ಶೂಟ್ ಮಾಡಿಕೊಟ್ಟಿದ್ದಾರೆ. ಎಲ್ಲರೂ ಸೇರಿ ಒಳ್ಳೆಯ ಸಿನಿಮಾ ಕೊಟ್ಟಿದ್ದೇವೆ. ಜನ ಇಷ್ಟಪಡುತ್ತಾರೆಂಬ ವಿಶ್ವಾಸವಿದೆ ಎಂದು ಹೇಳಿದರು.

ನಾಯಕ ರಾಜವರ್ಧನ್ ಮಾತನಾಡುತ್ತ ಬಿಚ್ಚುಗತ್ತಿಗೂ ಮುಂಚೆಯೇ ಪರಮೇಶ್ ಈ ಕಥೆಯನ್ನು ಹೇಳಿದರು .ಇವತ್ತಿನ ಫ್ಯಾಮಿಲಿಗಳಲ್ಲಿ ಈ ಥರದ ಘಟನೆಗಳು ನಡೆಯುತ್ತಲೇ ಇವೆ. ಅಂಥಾ ಒಂದು ಸ್ಟ್ರಾಂಗ್ ಕಂಟೆಂಟ್ ಇಟ್ಟುಕೊಂಡು ನಾವೀ ಸಿನಿಮಾ ಮಾಡಿದ್ದೇವೆ. ಬಿ.ಸಿ. ಸೆಂಟರ್ ಆಡಿಯನ್ಸ್ ಗಳಿಗೆ ಬೇಕಾದ ಕಾನ್ಸೆಪ್ಟ್ ಚಿತ್ರದಲ್ಲಿದೆ. ಆಗಿನ್ನೂ ವಿದೇಶದಿಂದ ಬರುವ ಗೌತಂ ಎಂಬ ಪಾತ್ರ ಮಾಡಿದ್ದೇನೆ. ಆತ 5-10 ದಿನದಲ್ಲಿ ಸ್ವಂತ ರಿಲೇಶನ್ ನಲ್ಲೇ ಹುಡುಗಿಯೊಬ್ಬಳನ್ನು ಮದುವೆಯಾಗ್ತಾನೆ. ಆನಂತರ 15-20 ದಿನಗಳಲ್ಲಿ ನಡೆಯುವ ಕಥೆ, ನನ್ನದು ತುಂಬಾ ಇನ್ ಟೆನ್ಸಿವ್ ಆಗಿರುವ ಪಾತ್ರ. ಮನೋಮೂರ್ತಿ, ಜಯಂತ್ ಕಾಯ್ಕಿಣಿ ಅವರಂಥ ಲೆಜೆಂಡರಿಗಳ‌ ಜೊತೆ ಕೆಲಸ ಮಾಡಿದ್ದು ನನ್ನ ಅದೃಷ್ಟ ಎಂದರು.
ನಿರ್ಮಾಪಕ ಪರಮೇಶ್ ಮಾತನಾಡುತ್ತ ನಮ್ಮ ಚಿತ್ರವನ್ನು ಫೆ.9ರಂದು ರಿಲೀಸ್ ಮಾಡುತ್ತಿದ್ದೇವೆ. ನಾನು ಈವರೆಗೆ 9 ಸಿನಿಮಾ ಮಾಡಿದ್ದೇನೆ. ಆದರೂ ಗಾಂಧಿನಗರದಲ್ಲಿ ಪ್ರೊಡ್ಯೂಸರ್ ಗೆ ನೆಲೆಯೆ ಇಲ್ಲದಾಗಿದೆ. ನಮ್ಮದು ತುಂಬಾ ಕ್ರಿಟಿಕಲ್ ಫೀಲ್ಡ್. ಈಗ ಸಿನಿಮಾ ಹೇಗೋ ಮಾಡಿಬಿಡಬಹುದು. ರಿಲೀಸ್ ಮಾಡೋದು ತುಂಬಾ ಕಷ್ಟ. ರಿಲೀಸ್ ಡೇಟ್ ಅನೌನ್ಸ್ ಮಾಡಲಿಕ್ಕೇ ಭಯವಾಗುತ್ತೆ. ಬಿಡುಗಡೆಗೇ 2ಕೋಟಿ ಬೇಕಾಗುತ್ತೆ, ಎಲ್ಲಿಂದ ತರೋದು. ಹಾಗೂ, ರಿಲೀಸ್ ಮಾಡಲು ಮೂರು ಸಲ ಟ್ರೈ ಮಾಡಿದೆ. ಆಗಲಿಲ್ಲ. ಈಗ ಧೈರ್ಯ ಮಾಡಿದ್ದೇನೆ. ಇಂಡಸ್ಟ್ರಿಗೆ ಒಂದೊಳ್ಳೆ ಸಿನಿಮಾ ಕೊಟ್ಟಿದ್ದೇನೆ. ಜನ ಕೈ ಹಿಡಿಯುತ್ತಾರೆಂಬ ನಂಬಿಕೆಯಿದೆ ಎಂದರು.

Previous Post

ಕರ್ನಾಟಕ ಲೋಕಸೇವಾ ಆಯೋಗದಿಂದ ಇಲಾಖಾ ವಿದ್ಯಾರ್ಥಿನಿಲಯಗಳ ವಾರ್ಡನ್ ನೇಮಕಾತಿ ಪತ್ರ ವಿತರಣೆ

Next Post

ರಾಮಲಲ್ಲಾ‌ ಮೂರ್ತಿಯ ಮೊದಲ ಚಿತ್ರ ಹೊರಕ್ಕೆ: ಬಾಲರಾಮನ ಮುಖದ ಲಕ್ಷಣ ಕಣ್ತುಂಬಿಕೊಳ್ಳಲು ಕಾದಿರುವ ಭಕ್ತಸಮೂಹ

Related Posts

ಹೊಸಬರ ಚಿತ್ರಕ್ಕೆ ಶ್ರೀಮುರಳಿ ಸಾಥ್: ದಿ ಟಾಸ್ಕ್ ಸಿನಿಮಾದ ಟ್ರೇಲರ್ ರಿಲೀಸ್
Top Story

ಹೊಸಬರ ಚಿತ್ರಕ್ಕೆ ಶ್ರೀಮುರಳಿ ಸಾಥ್: ದಿ ಟಾಸ್ಕ್ ಸಿನಿಮಾದ ಟ್ರೇಲರ್ ರಿಲೀಸ್

by ಪ್ರತಿಧ್ವನಿ
November 14, 2025
0

ಕನ್ನಡ ಚಿತ್ರರಂಗದ ಯುವ ಪ್ರತಿಭೆಗಳು ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ‘ದಿ‌‌ ಟಾಸ್ಕ್’ ಸಿನಿಮಾ ಟೈಟಲ್ ಮತ್ತು ಟೀಸರ್ ಮೂಲಕ‌ ಈಗಾಗಲೇ ಸಿನಿಪ್ರಿಯರಲ್ಲಿ ಕುತೂಹಲ ಹೆಚ್ಚಿಸಿದೆ. ನವೆಂಬರ್ 21ರಂದು...

Read moreDetails
ʼಬಾಯಿ ಮುಚ್ಚಿಕೊಂಡು ವಿಡಿಯೋ ಮಾಡಿʼ-ಜಯಾ ಬಚ್ಚನ್ ಫುಲ್‌ ಗರಂ

ʼಬಾಯಿ ಮುಚ್ಚಿಕೊಂಡು ವಿಡಿಯೋ ಮಾಡಿʼ-ಜಯಾ ಬಚ್ಚನ್ ಫುಲ್‌ ಗರಂ

November 14, 2025
ಕಿಚ್ಚನ ಧ್ವನಿಯಲ್ಲಿ ಮಾರ್ಧನಿಸಿದ ʼಮಾರ್ನಮಿʼ: ತೆರೆಗೆ ಅಬ್ಬರಿಸಲಿದೆ ಕರಾವಳಿಯ ಮತ್ತೊಂದು ಕಥೆ..!

ಕಿಚ್ಚನ ಧ್ವನಿಯಲ್ಲಿ ಮಾರ್ಧನಿಸಿದ ʼಮಾರ್ನಮಿʼ: ತೆರೆಗೆ ಅಬ್ಬರಿಸಲಿದೆ ಕರಾವಳಿಯ ಮತ್ತೊಂದು ಕಥೆ..!

November 13, 2025
ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ತಿಥಿ ಸಿನಿಮಾ ಖ್ಯಾತಿಯ ಗಡ್ಡಪ್ಪ ನಿಧನ

ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ತಿಥಿ ಸಿನಿಮಾ ಖ್ಯಾತಿಯ ಗಡ್ಡಪ್ಪ ನಿಧನ

November 12, 2025
ನಟ ಉಪೇಂದ್ರ ದಂಪತಿ ಮೊಬೈಲ್​ ಹ್ಯಾಕ್​ ಮಾಡಿದ್ದ ಆರೋಪಿ ಅರೆಸ್ಟ್

ನಟ ಉಪೇಂದ್ರ ದಂಪತಿ ಮೊಬೈಲ್​ ಹ್ಯಾಕ್​ ಮಾಡಿದ್ದ ಆರೋಪಿ ಅರೆಸ್ಟ್

November 12, 2025
Next Post
ರಾಮಲಲ್ಲಾ‌ ಮೂರ್ತಿಯ ಮೊದಲ ಚಿತ್ರ ಹೊರಕ್ಕೆ: ಬಾಲರಾಮನ ಮುಖದ ಲಕ್ಷಣ ಕಣ್ತುಂಬಿಕೊಳ್ಳಲು ಕಾದಿರುವ ಭಕ್ತಸಮೂಹ

ರಾಮಲಲ್ಲಾ‌ ಮೂರ್ತಿಯ ಮೊದಲ ಚಿತ್ರ ಹೊರಕ್ಕೆ: ಬಾಲರಾಮನ ಮುಖದ ಲಕ್ಷಣ ಕಣ್ತುಂಬಿಕೊಳ್ಳಲು ಕಾದಿರುವ ಭಕ್ತಸಮೂಹ

Please login to join discussion

Recent News

ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ: ಎನ್‌ಡಿಎಗೆ ಭರ್ಜರಿ ಜಯಭೇರಿ..!!
Top Story

ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ: ಎನ್‌ಡಿಎಗೆ ಭರ್ಜರಿ ಜಯಭೇರಿ..!!

by ಪ್ರತಿಧ್ವನಿ
November 14, 2025
Top Story

ಪದ್ಮಶ್ರೀ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ನವರ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ..!!

by ಪ್ರತಿಧ್ವನಿ
November 14, 2025
Top Story

ಅಂಧರ ಕ್ರಿಕೆಟ್ ಟೂರ್ನಿಗೂ ಜಾಗತಿಕ ಮನ್ನಣೆ ಸಿಗುವಂತಾಗಲಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
November 14, 2025
ಬಿಹಾರ ವಿಧಾನಸಭೆ ಚುನಾವಣೆ: 25 ವರ್ಷದ ಮೈಥಿಲಿ ಠಾಕೂರ್‌ಗೆ ಭರ್ಜರಿ ಗೆಲುವು
Top Story

ಬಿಹಾರ ವಿಧಾನಸಭೆ ಚುನಾವಣೆ: 25 ವರ್ಷದ ಮೈಥಿಲಿ ಠಾಕೂರ್‌ಗೆ ಭರ್ಜರಿ ಗೆಲುವು

by ಪ್ರತಿಧ್ವನಿ
November 14, 2025
Top Story

ಸಹಕಾರ ಕ್ಷೇತ್ರ ಗಟ್ಟಿಯಾದರೆ ಆರ್ಥಿಕ, ಸಾಮಾಜಿಕ ಚೈತನ್ಯ ಹೆಚ್ಚಾಗುತ್ತದೆ: ಸಿ.ಎಂ ಸಿದ್ದರಾಮಯ್ಯ

by ಪ್ರತಿಧ್ವನಿ
November 14, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ: ಎನ್‌ಡಿಎಗೆ ಭರ್ಜರಿ ಜಯಭೇರಿ..!!

ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ: ಎನ್‌ಡಿಎಗೆ ಭರ್ಜರಿ ಜಯಭೇರಿ..!!

November 14, 2025

ಪದ್ಮಶ್ರೀ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ನವರ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ..!!

November 14, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada