ಬಿಕ್ಕಳಿಕೆ(hiccups )ಎಲ್ಲರಿಗೂ ಬಂದೇ ಬರುತ್ತೆ.ಬಿಕ್ಕಳಿಕೆ ಬಂದಾಗ ಒಂದು ರೀತಿಯ ಹಿಂಸೆ.ಬಿಕ್ಕಳಿಕೆ ಯಾಕೆ ಬರುತ್ತೆ? ದೇಹದಲ್ಲಿ ಡಯಾಫ್ರಂ Diaphragm ಅನ್ನೊ ಒಂದು ಪದರ ಇರುತ್ತೆ.. ಇದು ನಾವು ಉಸಿರಾಡಿದಾಗ ಉಸಿರನ್ನ ಒಳಗೆ ತೆಗೆದುಕೊಳ್ಳುವುದಕ್ಕೆ ಹಾಗೂ ಹೊರಗೆ ಬಿಡೋದಿಕ್ಕೆ ನಮಗೆ ಹೆಚ್ಚು ಸಹಾಯವನ್ನು ಮಾಡುವಂತ ಅಂಗ ಆಗಿದೆ..ಇದು ಹೊಟ್ಟೆಯ ಮೇಲ್ಭಾಗದಲ್ಲಿ ಮತ್ತು ಎದೆಯ ಕೆಳಭಾಗದಲ್ಲಿ ಇರುತ್ತೆ ಯಾವುದಾದರೂ ಒಂದು ಕ್ಷಣದಲ್ಲಿ ಅಚಾನಕ್ಕಾಗಿ ಇದು ಸೆಳೆತಕ್ಕೆ ಒಳಗಾದಾಗ ಅದು ಅದರ ಪ್ರಭಾವದಿಂದ ಬಿಕ್ಕಳಿಕೆ ನಮಗೆ ಶುರುವಾಗುತ್ತೆ..ಅಂತ ಸಂದರ್ಭದಲ್ಲಿ ಏನು ಮಾಡಬೇಕು..
ಉಸಿರು ಹಿಡಿದುಕೊಳ್ಳಿ
ನಿಮಗೆ ಬಿಕ್ಕಳಿಕೆ( hiccups )ಶುರುವಾದಾಗ 30 ಸೆಕೆಂಡ್ಗಳ ಕಾಲ ನಿಮ್ಮ ಉಸಿರನ್ನ ಬಿಗಿಯಾಗಿ ಹಿಡಿದುಕೊಂಡರೆ ಬೇಗನೆ ಬಿಕ್ಕಳಿಕೆ ನಿಲ್ಲುತ್ತದೆ.. ಹೀಗೆ ಮಾಡೋದ್ರಿಂದ ಡಯಾಫ್ರಂ (Diaphragm )ನಲ್ಲಿನ ಸೆಳೆತವನ್ನು ತೊಳೆದು ಹಾಕಲು ಕಾರ್ಯನಿರ್ವಹಿಸುತ್ತದೆ..
ಐಸ್ ಕ್ಯೂಬ್
ಸಣ್ಣ ತುಂಡು(small piece )ಐಸ್ ಕ್ಯೂಬನ್ನು ಬಾಯಲ್ಲಿಟ್ಟು ಅದರ ನೀರನ್ನ ನುಂಗುವುದರಿಂದ ಅಥವಾ ಒಂದು ಲೋಟ ತಣ್ಣಗಿನ ನೀರನ್ನು ಕುಡಿಯುವುದರಿಂದ ತಕ್ಷಣವೇ ಬಿಕ್ಕಳಿಕೆ ನಿಲ್ಲುತ್ತದೆ.ಕೆಲವರಿಗೆ ಅತಿ ತಣ್ಣಗಿರುವ ನೀರನ್ನು (fridge water)ಕುಡಿಯುವುದಕ್ಕೆ ಆಗಲ್ಲ ಕಾರಣ ಹಲ್ಲು ನೋವಿನಿಂದ ಇವರು ತಕ್ಕ ಪ್ರಮಾಣದ ತಣ್ಣೀರನ್ನ ಕುಡಿಯುವುದು ಉತ್ತಮ..
ನಿಂಬೆಹಣ್ಣು
ಅರ್ಧ ತುಂಡಷ್ಟು ನಿಂಬೆಹಣ್ಣನ್ನು ಜಗ್ಗಿದು ಅದರ ರಸವನ್ನು ನುಂಗುವುದರಿಂದ ತಕ್ಷಣವೇ ಬಿಕ್ಕಳಿಕೆ ಕಡಿಮೆ ಆಗುತ್ತೆ ಇದು ಡಯಾಫ್ರಂ ಮಸಲ್ಸ್ ನಲ್ಲಿ ಆದಂತಹ ನಾಟ್ ಅನ್ನು ಬಿಡಿಸುವುದಕ್ಕೆ ಸಹಾಯಮಾಡುತ್ತದೆ ಹಾಗಾಗಿ ಬಿಕ್ಕಳಿಗಿ ಕೂಡ ಇಮ್ಮಿಡಿಯೇಟ್ ಆಗಿ ಕಡಿಮೆಯಾಗುತ್ತೆ..
ಈ ಬಿಕ್ಕಳಿಕೆ ಯಾವ ಕ್ಷಣದಲ್ಲಿ ಬೇಕಾದರೂ ಬರಬಹುದು..ಒಂದು ಬಾಡಿ ಡಿ ಹೈಡ್ರೇಟ್ (body dehydrate)ಆದಾಗ ಇನ್ನು ಕೆಲವು ಬಾರಿ ಊಟಕ್ಕೆ ಕುಳಿತಾಗ ಹಾಗೂ ಕೆಲವರಿಗೆ ಸುಮ್ನೆ ಇದ್ದಾಗ್ಲೂ ಕೂಡ ಬಿಕ್ಕಳಿಕೆ (hiccups )ಶುರುವಾಗುತ್ತೆ ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಬಿಕ್ಕಳಿಕೆ ಬಂದಾಗ ಒಂದು ಲೋಟ ನೀರನ್ನು ಕುಡಿತೀವಿ ಬಿಕ್ಕಳಿಗೆ ಕಡಿಮೆಯಾಗುತ್ತೆ ಇಲ್ಲ ಅಂದ್ರೆ ಕೆಲವರು ಒಂದು ಸ್ಪೂನ್ ಸಕ್ಕರೆಯನ್ನು ಬಾಯಲ್ಲಿ ಹಾಕಿಕೊಳ್ಳುತ್ತಾರೆ ಇದರಲ್ಲಿ ಕೂಡ ಬಿಕ್ಕಳಿಕೆ ನಿಲ್ಲುತ್ತೆ ಆದರೆ ಏನೇ ಮಾಡದರೂ ಕೆಲವರಿಗೆ ಬಿಕ್ಕಳಿಕೆ ನಿಲ್ಲೋದಿಲ್ಲ ಅಂಥವರು ಹೀಗೇ ಮಾಡಿ..