ಸ್ಯಾಂಡಲ್‌ವುಡ್‌ನ ನಟರಾಕ್ಷಸ ಡಾಲಿ ಧನಂಜನ್ ಅಭಿನಯದ ಗುರುದೇವ್ ಹೊಯ್ಸಳ ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಇದೇ ಮಾರ್ಚ್ 30ಕ್ಕೆ ಗುಗುದೇವ್ ಹೊಯ್ಸಳ ಸಿನಿಮಾ, ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ನಿರ್ದೇಶಕ ವಿಜಯ್ ಎನ್. ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ʻಗುರುದೇವ್ ಹೊಯ್ಸಳʼ ಸಿನಿಮಾದಲ್ಲಿ ಡಾಲಿಗೆ ಜೋಡಿಯಾಗಿ ಅಮೃತಾ ಅಯ್ಯಂಗಾರ್ ನಟಿಸಿದ್ದಾರೆ. ಈಗಾಗಲೇ ಸಾಂಗ್, ಟೀಸರ್, ಟ್ರೈಲರ್‌ಗಳ ಮೂಲಕ ಈ ಸಿನಿಮಾ, ಸಿನಿಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆಯನ್ನ ಹುಟ್ಟುಹಾಕಿದೆ.
ಈಗಾಗಲೇ ಚಿತ್ರದ ಸೆನ್ಸಾರ್ ಕೆಲಸ ಮುಗಿದಿದ್ದು ‘ಗುರುದೇವ್ ಹೊಯ್ಸಳ’ನ ಆರ್ಭಟ ನೋಡಲು ಸಿನಿರಸಿಕರು ಕಾಯುತ್ತಿದ್ದಾರೆ. ಚಿತ್ರದ ಬಿಡುಗಡೆಗೆ ನಾಲ್ಕೇ ದಿನ ಬಾಕಿ ಇದ್ದು, ಈಗಾಗಲೇ ಅಡ್ವಾನ್ಸ್ ಬುಕಿಂಗ್ ಶುರುವಾಗಿದೆ.. ಬೆಂಗಳೂರು, ಮೈಸೂರಿನ ಕೆಲವೆಡೆ ಫಸ್ಟ್ ಡೇ ಟಿಕೆಟ್ ಬುಕಿಂಗ್ ಸ್ಟಾರ್ಟ್ ಆಗಿದೆ. ʻಗುರುದೇವ್ ಹೊಯ್ಸಳʼ ಧನಂಜಯ್ ನಟನೆಯ 25ನೇ ಸಿನಿಮಾ ಆಗಿರೋದ್ರಿಂದ, ಚಿತ್ರದ ಬಗ್ಗೆ ನಿರೀಕ್ಷೆ ಸ್ವಲ್ಪ ಜಾಸ್ತಿನೇ ಇದೆ.