
ಹೊಹೊಸದಿಲ್ಲಿ : ಗುಜರಾತಿನ ವಿದ್ಯಾರ್ಥಿನಿಯೊಬ್ಬಳು 12ನೇ ತರಗತಿ ಪರೀಕ್ಷೆಯಲ್ಲಿ ಅನುತ್ತೀರ್ಣಳಾಗಿದ್ದರೂ, ನೀಟ್ ಯುಜಿ ಪರೀಕ್ಷೆಯಲ್ಲಿ 705 ಅಂಕ ಗಳಿಸುವ ಮೂಲಕ ಸುದ್ದಿಯಲ್ಲಿದ್ದಾಳೆ.
ಆಕೆ ಮಂಡಳಿ ಪರೀಕ್ಷೆಯಲ್ಲಿ ಹಾಗೂ ನೀಟ್ ಯುಜಿ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳಲ್ಲಿನ ವ್ಯತ್ಯಾಸವು ಸಾಮಾಜಿಕ ಮಾಧ್ಯಮ ಬಳಕೆದಾರರ ಹುಬ್ಬೇರುವಂತೆ ಮಾಡಿದೆ.ಕೆಲವರು ಆಕೆ ಮಂಡಳಿ ಪರೀಕ್ಷೆಯಲ್ಲಿ ಗಳಿಸಿರುವ ಅಂಕ ಹಾಗೂ ನೀಟ್ ಯುಜಿ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳ ವ್ಯತ್ಯಾಸವನ್ನು ಒಂದರ ಬದಿ ಒಂದಿಟ್ಟು ತೋರಿಸಿದ್ದಾರೆ.
#NEET_SCAM
— Dr Avdhesh Yadav (@Avdheshyadavsp) June 10, 2024
Neet exam में 705 नंबर पाने वाला फ़िज़िक्स/केमिस्ट्री में फेल
Neet aspirants के अभ्यर्थियों को न्याय दो@yadavakhilesh @myogiadityanath @narendramodi pic.twitter.com/oRylDOxwbH
The Times of India ಸುದ್ದಿ ಸಂಸ್ಥೆಯ ವರದಿ ಪ್ರಕಾರ, ಅಹಮದಾಬಾದ್‌ನ ವಿದ್ಯಾರ್ಥಿನಿಯೊಬ್ಬಳು ತರಬೇತಿ ಕೇಂದ್ರದಲ್ಲಿ ನೋಂದಣಿಗೊಂಡಿದ್ದು, ಆಕೆಯನ್ನು ಸಮೀಪದ ಶಾಲೆಯೊಂದರಲ್ಲಿ ಲೆಕ್ಕಕ್ಕಿಲ್ಲದ ವಿದ್ಯಾರ್ಥಿನಿಯನ್ನಾಗಿ ದಾಖಲು ಮಾಡಲಾಗಿದೆ.
ಆಕೆಯ 12ನೇ ತರಗತಿಯ ಅಂಕಪಟ್ಟಿಯು, ಆಕೆಯ ಕಳಪೆ ಪ್ರದರ್ಶನಕ್ಕೆ ಸಾಕ್ಷಿ ಹೇಳುತ್ತಿದ್ದು, ಭೌತಶಾಸ್ತ್ರದಲ್ಲಿ 21, ರಸಾಯನ ಶಾಸ್ತ್ರದಲ್ಲಿ 31, ಜೀವಶಾಸ್ತ್ರದಲ್ಲಿ 39 ಹಾಗೂ ಇಂಗ್ಲಿಷ್‌ನಲ್ಲಿ 59 ಅಂಕಗಳನ್ನು ಮಾತ್ರ ಗಳಿಸಿದ್ದಾಳೆ ಎನ್ನಲಾಗಿದೆ.ಆದರೆ, 12ನೇ ತರಗತಿ ಪರೀಕ್ಷೆಯಲ್ಲಿ ಕಳಪೆ ಪ್ರದರ್ಶನ ತೋರಿರುವ ಹೊರತಾಗಿಯೂ, ಆ ವಿದ್ಯಾರ್ಥಿನಿ ನೀಟ್-ಯುಜಿ ಪರೀಕ್ಷೆಯಲ್ಲಿ 720 ಅಂಕಗಳಿಗೆ ಎದುರಾಗಿ 705 ಅಂಕಗಳನ್ನು ಗಳಿಸಿದ್ದಾಳೆ. ಆ ಮೂಲಕ ಗುಜರಾತ್ ರಾಜ್ಯದ ಅಗ್ರ ಶ್ರೇಯಾಂಕಿತಳಾಗಿ ಹೊರ ಹೊಮ್ಮಿದ್ದಾಳೆ.ವಿದ್ಯಾರ್ಥಿನಿಯ ನೀಟ್ ಪರೀಕ್ಷಾ ಫಲಿತಾಂಶದಲ್ಲಿ ಆಕೆ ಭೌತಶಾಸ್ತ್ರದಲ್ಲಿ ಶೇ. 99.8, ರಸಾಯನ ಶಾಸ್ತ್ರದಲ್ಲಿ ಶೇ. 99.1 ಹಾಗೂ ಜೀವಶಾಸ್ತ್ರದಲ್ಲಿ ಶೇ. 99.1 ಅಂಕಗಳನ್ನು ಗಳಿಸುವ ಮೂಲಕ ಒಟ್ಟಾರೆಯಾಗಿ ಶೇ. 99.9 ಅಂಕ ಗಳಿಸಿರುವುದು ಕಂಡು ಬಂದಿದೆ.

ವಿಚಿತ್ರವೆಂದರೆ, ನೀಟ್-ಯುಜಿ ಪರೀಕ್ಷೆಯ ಅಂಕಗಳ ಆಧಾರದಲ್ಲಿ ಆಕೆ ಭಾರತದಲ್ಲಿನ ಯಾವುದೇ ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆಯಬಹುದಾಗಿದ್ದರೂ, ಆಕೆ 12ನೇ ತರಗತಿ ಪರೀಕ್ಷೆಯಲ್ಲಿ ಕನಿಷ್ಠ ಪಕ್ಷ ಶೇ. 50ರಷ್ಟು ಅಂಕ ಪಡೆಯಲು ವಿಫಲಗೊಂಡಿರುವುದರಿಂದ, ಆಕೆ ವೈದ್ಯಕೀಯ ಪದವಿಗೆ ಪ್ರವೇಶ ಪಡೆಯುವಲ್ಲಿ ವಿಫಲಗೊಂಡಿದ್ದಾಳೆ.
ರವಿವಾರ ರಾಷ್ಡ್ರೀಯ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿರುವ ನಗರವಾರು ಫಲಿತಾಂಶಗಳಲ್ಲಿ ಇಂತಹ ಹಲವಾರು ವೈರುಧ್ಯಗಳಿದ್ದು, ಇದು ಪರೀಕ್ಷೆಯಲ್ಲಿ ಅಕ್ರಮಗಳು ಜರುಗಿವೆ ಎಂಬುದಕ್ಕೆ ಸ್ಪಷ್ಟ ನಿದರ್ಶನ. ಹೀಗಾಗಿ, ನೀಟ್-ಯುಜಿ ಮರು ಪರೀಕ್ಷೆ ನಡೆಸಬೇಕು ಎಂದು ಹಲವು ಸಾಮಾಜಿಕ ಬಳಕೆದಾರರು ಆಗ್ರಹಿಸಿದ್ದಾರೆ.
