ಯುದ್ಧ ಪೀಡಿತ ಉಕ್ರೇನ್‌ನಲ್ಲಿ ನಿಲ್ಲದ ಗುಂಡಿನ ದಾಳಿಗೆ ಅನೇಕರು ಸಾವನಪ್ಪಿದ್ದರೆ ಸಾವಿರಾರು ಮಂದಿ ಗಾಯಗೊಳಗಾಗುತಿದ್ದಾರೆ. ಕಳೆದ ಒಂದುವಾರದಿಂದ ಇಬ್ಬರು ಭಾರತೀಯ ವಿದ್ಯಾರ್ಥಿಗಳು ರಷ್ಯಾ ದಾಳಿಗೆ ಬಲಿಯಾಗಿದ್ದು, ಇಂದು ಒರ್ವ ವಿದ್ಯಾರ್ಥಿಗೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ಬಂತು. ಉಕ್ರೇನ್ ನಿಂದ ಭಾರತಕ್ಕೆ ಬಂದ ಹಲವಾರು ಜನರು ಮತ್ತು ಉಕ್ರೇರ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಕೇಂದ್ರ ಸರ್ಕಾರ ಮತ್ತು ರಾಯಭಾರ ಕಛೇರಿಯ ವಿರುದ್ಧ ಕಿಡಿಕಾರುತ್ತಿರುವ ಬೆನ್ನಲ್ಲೇ ಗಾಯಕ್ಕೊಳಗಾದ ಭಾರತೀಯ ವಿದ್ಯಾರ್ಥಿ ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಿಂದ ಯಾವುದೇ ಬೆಂಬಲವನ್ನು ಸಿಕ್ಕಿಲ್ಲ ಎಂದು ದೂರಿದ್ದಾರೆ.
“ಭಾರತೀಯ ರಾಯಭಾರ ಕಚೇರಿಯಿಂದ ಇನ್ನೂ ಯಾವುದೇ ಬೆಂಬಲ/ ಸಹಾಯ ಸಿಕ್ಕಿಲ್ಲ. ನಾನು ಅವರೊಂದಿಗೆ ಸಂಪರ್ಕದಲ್ಲಿರಲು ಪ್ರಯತ್ನಿಸುತ್ತಿದ್ದೇನೆ, ಪ್ರತಿದಿನ ಅವರು ನಾವು ಏನಾದರೂ ಮಾಡುತ್ತೇವೆ ಎಂದು ಹೇಳುತ್ತಾರೆ ಆದರೆ ಇನ್ನೂ ಸಹಾಯ ಮಾಡಿಲ್ಲ” ಎಂದು ಕೈವ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹರ್ಜೋತ್ ಸಿಂಗ್ ANI ಗೆ ತಿಳಿಸಿದ್ದಾರೆ.
ಫೆಬ್ರವರಿ 27 ರಂದು ಈ ಘಟನೆ ಸಂಭವಿಸಿದೆ ಎಂದು ಸಿಂಗ್ ಹೇಳಿದರು. “ನಾವು ಮೂರನೇ ಚೆಕ್‌ಪೋಸ್ಟ್‌ಗೆ ಹೋಗುವ ದಾರಿಯಲ್ಲಿ ಮೂರು ಜನರು ಕ್ಯಾಬ್‌ನಲ್ಲಿದ್ದೆವು, ಅಲ್ಲಿ ಭದ್ರತಾ ಕಾರಣಗಳಿಂದ ಹಿಂತಿರುಗಲು ನಮಗೆ ತಿಳಿಸಲಾಯಿತು. ಹಿಂತಿರುಗುವಾಗ, ನಮ್ಮ ಕಾರಿಗೆ ಹಲವಾರು ಗುಂಡುಗಳನ್ನು ಹಾರಿಸಲಾಯಿತು. ನನಗೆ ಅನೇಕ ಬುಲೆಟ್ ತಗುಲಿ ಗಾಯಗೊಂಡೆಎ, ”ಎಂದು ಅವರು ಹೇಳಿದರು.
“ದೇವರು ನನಗೆ ಎರಡನೇ ಜೀವನವನ್ನು ನೀಡಿದ್ದಾನೆ, ನಾನು ಬದುಕಲು ಬಯಸುತ್ತೇನೆ, ನನ್ನನ್ನು ಇಲ್ಲಿಂದ ಸ್ಥಳಾಂತರಿಸಲು ರಾಯಭಾರ ಕಚೇರಿಗೆ ವಿನಂತಿಸುತ್ತೇನೆ, ನನಗೆ ಗಾಲಿಕುರ್ಚಿಯಂತಹ (wheelchair) ಸೌಲಭ್ಯಗಳನ್ನು ಒದಗಿಸಿ, ದಾಖಲಾತಿಗೆ ಸಹಾಯ ಮಾಡುತ್ತೇನೆ” ಎಂದು ಅವರು ಹೇಳಿದರು.