
ಬೆಂಗಳೂರು: ಕರ್ನಾಟಕ ಕಾರಗೃಹ ಮತ್ತು ಸುಧಾರಣ ಇಲಾಖೆ ನೂತನ ಡಿಜಿಪಿಯಾಗಿರೋ ಅಲೋಕ್ ಕುಮಾರ್ ನಿನ್ನೆ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ 15 ದಿನದಲ್ಲಿ ಜೈಲಿನಲ್ಲಿ ಎಲ್ಲವೂ ಸರಿಹೋಗಬೇಕು ಎಂದು ಅಧಿಕಾರಿಗಳು, ಸಿಬ್ಬಂದಿಗಳಿಗೆ ಡೆಡ್ ಲೈನ್ ನೀಡಿದ್ದಾರೆ.

ಡಿಜಿಪಿಯಾದ ಬಳಿಕ ಪರಪ್ಪನ ಅಗ್ರಹಾರ ಜೈಲಿಗೆ ಮೊದಲ ಭೇಟಿ ನೀಡಿದ್ದ ಅಲೋಕ್ ಕುಮಾರ್
ಡಿ.31 ರೊಳಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಎಲ್ಲವೂ ಸರಿ ಹೋಗಬೇಕು.
15 ದಿನದಲ್ಲಿ ಏನೆಲ್ಲ ಸರಿ ಮಾಡಬೇಕು ಎಲ್ಲವನ್ನೂ ನೀವೇ ಮಾಡಿ, ಮೊಬೈಲ್ ಬಳಕೆ, ಪ್ರತಿಭಟನೆಗಳು, ನೆಟ್ವರ್ಕ್ ಸಿಗುತ್ತಿರೋ ತಪ್ಪುಗಳೆಲ್ಲ 15 ದಿನದ ಒಳಗೆ ಸರಿ ಮಾಡಬೇಕು. ಇಲ್ಲವಆದರೆ ನಿಮ್ಮ ಮೇಲೆ ಕ್ರಮ ತೆಗೆದುಕೊಳ್ತೀನಿ ಎಂದು ಎಚ್ಚರಿಕೆ ನೀಡಿದ್ದಾರೆ.

ಇದರ ಜೊತೆ ಅಲೋಕ್ ಕುಮಾರ್ ನಿನ್ನೆ ಜೈಲಿನ ಎಲ್ಲಾ ಕಡೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಚಾರಣಾಧಿನ ಕೈದಿ, ಸಜಾ ಬಂಧಿಗಳ ಬ್ಯಾರಕ್, ಅಡುಗೆ ಮನೆ, ಎಂಟ್ರಿ, ಎಕ್ಸಿಟ್ ಭಾಗಗಳು, ದರ್ಶನ್ ಸೇರಿದಂತೆ ವಿಐಪಿಗಳು ಇರೋ ಸೆಲ್ ಗಳಲ್ಲಿ ಪರಿಶೀಲನೆ ನಡೆಸಿ ಕೆಲವು ಬದಲಾವಣೆ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.

ಇನ್ನು ರಾಜ್ಯದ ಹಲವು ಜೈಲುಗಳಲ್ಲಿ ಅಧಿಕಾರಿಗಳಿಂದ ತಪಾಸಣೆ ಮುಂದುವರಿದಿದೆ. ಕಳೆದ 72 ಗಂಟೆಗಳಲ್ಲಿ ನಡೆದ ಪರಿಶೀಲನೆ ವೇಳೆ ಪರಪ್ಪನ ಅಗ್ರಹಾರ ಜೈಲಿನಲ್ಲಿ 6 ಮೊಬೈಲ್ ಫೋನ್, ಮೈಸೂರು ಜೈಲಿನಲ್ಲಿ 6 ಗಾಂಜಾ ಪಾಕೇಟ್, ಕಾರವಾರ ಜೈಲಿನಲ್ಲಿ 7 ಮೊಬೈಲ್ ಫೋನ್ ಪತ್ತೆಯಾಗಿದೆ. ಹಾಗೆ ಕಾರವಾರ ಜೈಲಿನಲ್ಲಿ ನಾಲ್ವರು ಬಂಧಿಗಳ ಗಲಾಟೆ ವಿಚಾರ ಬೆಳಕಿಗೆ ಬಂದಿದ್ದು, ಆ ನಾಲ್ವರನ್ನ ಬೇರೆಬೇರೆ ಜೈಲುಗಳಿಗೆ ಸ್ಥಳಾಂತರ ಮಾಡಲು ಸೂಚನೆ ನೀಡಲಾಗಿದೆ.







