ಕಿವಿ ನಮ್ಮ ದೇಹದ ಪ್ರಮುಖ ಭಾಗ ಕಿವಿಗೆ ಹಾನಿ ಆದರೆ ಶಾಶ್ವತವಾಗಿ ಕಿವುಡುತನವನ್ನು ಎದುರಿಸಬೇಕಾಗುತ್ತದೆ. ಅದರಲ್ಲೂ ಈ ಮಳೆಗಾಳದಲ್ಲಿ ಕಿವಿಗೆ ಸ್ವಲ್ಪ ಮಂಜು ಹೋದರು ಅಥವಾ ನೀರು ಹೋದರು ಹಾಗೂ ಮಳೆಯಲ್ಲಿ ನೆನೆದರೆ ಕಿವಿ ನೋವು ಜೊತೆಗೆ ತಲೆನೋವು ಕಾಣಿಸಿಕೊಳ್ಳುತ್ತದೆ. ಆದರೆ ಕೆಲವರಿಗೆ ಕಿವಿ ನೋವು ಕಾಣಿಸಿಕೊಳ್ಳುವುದರ ಜೊತೆಗೆ ಕಿವಿಯಿಂದ ನೀರು ಸೋರುತ್ತದೆ . ಇದನ್ನ ಕಿವಿ ಸೋರುವುದು ಎಂದು ಕೂಡ ಕರೆಯುತ್ತಾರೆ ಹೆಚ್ಚು ಜನಕ್ಕೆ ಮಾನ್ಸೂನ್ ನಲ್ಲಿ ಈ ಒಂದು ಸಮಸ್ಯೆ ಕಾಡುತ್ತದೆ.. ಈ ಕಿವಿ ಸೋರುವ ಸಮಸ್ಯೆಗೆ ಮನೆಯಲ್ಲಿ ಒಂದಿಷ್ಟು ಮದ್ದುಗಳನ್ನ ಮಾಡಬಹುದು ಹೇಗೆ ಅನ್ನೋದರ ಡೀಟೇಲ್ಸ್ ಇಲ್ಲಿದೆ.

ಈರುಳ್ಳಿ
ಆಯುರ್ವೇದದಲ್ಲಿ ಈರುಳ್ಳಿ ತುಂಬಾನೇ ಔಷಧಿ ಅಂಶವನ್ನ ಹೊಂದುತ್ತೆ ಅದರಲ್ಲೂ ಕಿರಿ ಸೋರುವಿಕೆಗೆ ತುಂಬಾ ಒಳ್ಳೆಯ ಔಷಧಿ. ಒಂದು ಚಿಕ್ಕ ಈರುಳ್ಳಿಯನ್ನ ಚಿಕ್ಕ ಚಿಕ್ಕ ಪೀಸ್ ಗಳನ್ನು ಮಾಡಿ ರುಬ್ಬಿ ನಂತರ ಅದರ ರಸವನ್ನು ತೆಗೆದು ಸ್ವಲ್ಪ ಬಿಸಿ ಮಾಡಿ. ನಂತರ ಆ ರಸವನ್ನ ಕಿವಿಯೊಳಗೆ ಹಾಕಿ ಒಂದಿಷ್ಟು ಸೆಕೆಂಡ್ ಗಳು ಹಾಗೆ ಬಿಟ್ಟು ನಂತರ ತಲೆಯನ್ನು ಬಗ್ಗಿಸಿ ಆ ರಸವನ್ನ ಹೊರ ಹಾಕುವುದರಿಂದ ಕಿವಿ ನೋವು ಕಡಿಮೆಯಾಗುತ್ತದೆ ಮತ್ತು ಕೆಟ್ಟ ದ್ರವ ಹೊರಗೆ ಬರುತ್ತದೆ.

ಲವಂಗ ಮತ್ತು ಬೆಳ್ಳುಳ್ಳಿ
ಲವಂಗದ ಎಣ್ಣೆಯೊಂದಿಗೆ ಒಂದೆರಡು ಬೆಳ್ಳುಳ್ಳಿಯನ್ನು ಬೆರೆಸಿ ಚೆನ್ನಾಗಿ ಕುದಿಸಿ, ಉಗುರು ಬೆಚ್ಚಗಾದ ನಂತರ ಒಂದೆರಡು ಹನಿಗಳನ್ನು ಕಿವಿ ಒಳಗೆ ಹಾಕಿ 10 ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ಕಿವಿಯನ್ನು ನಿಧಾನವಾಗಿ ಒಂದು ಬಟ್ಟೆಯಿಂದ ಒರೆಸುವುದರಿಂದ ಕಿವಿ ಸೋರುವುದು ಕಡಿಮೆಯಾಗುತ್ತದೆ.

ಸ್ಟೀಮ್
ಒಂದು ಪಾತ್ರೆಯಲ್ಲಿ ಚೆನ್ನಾಗಿ ನೀರನ್ನ ಕುದಿಸಿ ಅದರ ಒಳಗಡೆ ಸ್ವಲ್ಪದಷ್ಟು ನೀಲಗಿರಿ ಎಣ್ಣೆ ಅಥವಾ ಅಮೃತಂಜನನ್ನ ಹಾಕಿ ಬಳಿಕೆ ಒಂದು ಬಟ್ಟೆ ಯನ್ನು ಬಳಸಿ ಸ್ಟೀಮ್ ಹೊರಹೋಗದಂತೆ ತಲೆ ಮೇಲೆ ಹಾಕಿಕೊಂಡು ಸ್ಟೀಮ್ ತೆಗೆದುಕೊಳ್ಳುವುದರಿಂದ ಕಿವಿ ನೋವು, ಶೀತ, ನೆಗಡಿ ಹಾಗೂ ಕಿವಿ ಸೋರುವುದು ತಕ್ಷಣಕ್ಕೆ ಕಡಿಮೆಯಾಗುತ್ತದೆ.
