• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಥಂಡಾ ಹೊಡೆದ ಟ್ರಂಪ್‌ : ಯುದ್ಧೋನ್ಮಾದಲ್ಲಿದ್ದ ಅಧ್ಯಕ್ಷನಿಗೆ ಭಾರಿ ಹೊಡೆತ..!

ದಿನಕ್ಕೊಂದರಂತೆ ಹೇಳಿಕೆಗಳನ್ನು ನೀಡಿ ಜನರನ್ನು ಹಾಗೂ ಮಾಧ್ಯಮಗಳ ದಾರಿ ತಪ್ಪಿಸುವ ಕೆಲಸ ಮಾಡುತ್ತಿರುವ ಸ್ವಯಂಘೋಷಿತ ಶಾಂತಿ ಪುರುಷ..!

ಪ್ರತಿಧ್ವನಿ by ಪ್ರತಿಧ್ವನಿ
March 18, 2026
in Top Story, ಇದೀಗ, ರಾಜಕೀಯ, ವಿದೇಶ
0
ಥಂಡಾ ಹೊಡೆದ ಟ್ರಂಪ್‌ : ಯುದ್ಧೋನ್ಮಾದಲ್ಲಿದ್ದ ಅಧ್ಯಕ್ಷನಿಗೆ ಭಾರಿ ಹೊಡೆತ..!
Share on WhatsAppShare on FacebookShare on Telegram

ಬೆಂಗಳೂರು :  ಮಧ್ಯಪ್ರಾಚ್ಯದಲ್ಲಿ ಮುಂದುವರೆದಿರುವ ಇರಾನ್‌ ಹಾಗೂ ಇಸ್ರೇಲ್‌ ನಡುವಿನ ಯುದ್ಧದಲ್ಲಿ ಈಗಾಗಲೇ ಅಮೆರಿಕವೂ ಭಾಗಿಯಾಗಿದೆ. ಇಸ್ರೇಲ್‌ ಜೊತೆಯಾಗಿ ಇರಾನ್‌ನ ಮೇಲೆ ದಾಳಿ ನಡೆಸುವ ಸಾಹಸಕ್ಕೆ ಕೈ ಹಾಕಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ದೊಡ್ಡ ಪೆಟ್ಟು ಬಿದ್ದಂತಾಗಿದೆ.

ADVERTISEMENT
Pratap Simha: ಕಾರ್ಪೊರೇಷನ್‌ಗೆ ಖಾಲಿ ಜಾಗ ತೋರಿಸಿ ಅಂದ್ರೆ ಫುಟ್‌ ಪಾತ್‌ ಜಾಗ ತೋರಿಸೋದಾ? #pratidhvani

ಸದ್ಯ ಇರಾನ್‌ ಮೇಲೆ ಹುಚ್ಚು ಸಾಹಸ ಮಾಡಿ ಯುದ್ಧ ಸಾರಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಂತರಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ, ಇರಾನ್ ವಿರುದ್ಧದ ಯುದ್ಧದ ಬಗ್ಗೆ ಅಮೆರಿಕನ್ನರು ತಮ್ಮ ದೇಶದ ನಾಯಕನ ವಿರುದ್ಧವೇ ಆಕ್ರೀೋಶಿತಗೊಂಡಿದ್ದಾರೆ. 

ಈ ಮೂಲಕ ಜಗತ್ತಿಗೆ ಶಾಂತಿಯ ಢೋಂಗಿ ನಾಟಕ ಮಾಡುವ ಟ್ರಂಪ್‌ಗೆ ಇದೀಗ ಭಾರಿ ಮುಖಭಂಗವಾಗಿದೆ. ಇರಾನ್‌ನ ಮೇಲೆ ದಾಳಿ ನಡೆಸಿರುವುದಕ್ಕೆ ಅಮೆರಿಕದಲ್ಲೇ ವಿರೋಧ ವ್ಯಕ್ತವಾಗುತ್ತಿದೆ. ತನ್ನ ತೆರಿಗೆ ನೀತಿಗಳಿಂದಲೇ ಸ್ವದೇಶದ ಕೆಂಗಣ್ಣಿಗೆ ಗುರಿಯಾಗಿರುವ ಟ್ರಂಪ್‌ಗೆ ಇರಾನ್‌ ಕೆಣಕಿ ತಪ್ಪು ಮಾಡಿಬಿಟ್ಟೆ ಎಂಬ ಭಾವನೆ ಕಾಡುತ್ತಿದೆ. ಹೀಗಾಗಿಯೇ ದಿನಕ್ಕೊಂದರಂತೆ ಹೇಳಿಕೆಗಳನ್ನು ನೀಡಿ ಜನರನ್ನು ಹಾಗೂ ಮಾಧ್ಯಮಗಳ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.

ಹೀಗಾಗಿಯೇ ಈ ಮೊದಲು ಭಯೋತ್ಪಾದನೆ ಹಾಗೂ ಬೆದರಿಕೆಗಳ ಕುರಿತು ಟ್ರಂಪ್‌ಗೆ ಸಲಹೆ ನೀಡುತ್ತಿದ್ದ ಅಮೆರಿಕದ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ ಮುಖ್ಯಸ್ಥ ಜೋ ಕೆಂಟ್ ಟ್ರಂಪ್‌ ನಡವಳಿಕೆ ಹಾಗೂ ದ್ವೇಷದ ಮನೋಭಾವಕ್ಕೆ ಬೇಸತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಇದನ್ನೂ ಓದಿ : ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ: ಶಾಕಿಂಗ್ ಅಂಶ ಬಯಲು

ಅಲ್ಲದೆ ಇರಾನ್ ಅಮೆರಿಕಕ್ಕೆ ಯಾವುದೇ ಬೆದರಿಕೆಯನ್ನು ಒಡ್ಡಿಲ್ಲ. ಅಮೆರಿಕ – ಇಸ್ರೇಲ್ ಒಟ್ಟಾಗಿ ಅಮೇರಿಕನ್ ಲಾಬಿಯ ಒತ್ತಡದಿಂದಾಗಿ ಈ ಯುದ್ಧವನ್ನು ಪ್ರಾರಂಭಿಸಿದೆ ಎಂದು ಕಟುವಾದ ಪದಗಳಲ್ಲಿ ಟೀಕಿಸಿದ್ದರು.

 ಆದರೆ ಕೆಂಟ್ ರಾಜೀನಾಮೆಗೆ ಪ್ರತಿಕ್ರಿಯಿಸಿದ ಟ್ರಂಪ್, ಇರಾನ್ ನಮಗೆ ಬೆದರಿಕೆ ನೀಡಲ್ಲ ಎಂದು ಹೇಳಿದ್ದರಿಂದ ಅವರು ನಮ್ಮಿಂದ ಹೊರಗಿರುವುದು ಒಳ್ಳೆಯದು ಎಂದು ಉದ್ದಟತನದ ಹೇಳಿಕೆ ನೀಡಿದ್ದಲ್ಲದೆ, ಕೆಂಟ್ ಒಳ್ಳೆಯ ವ್ಯಕ್ತಿ ಆದರೆ ಅವರು ಭದ್ರತೆಯ ವಿಷಯದಲ್ಲಿ ಅವರು ತುಂಬಾ ದುರ್ಬಲರಾಗಿದ್ದಾರೆ ಎಂದು ಟೀಕಿಸಿದ್ದಾರೆ.

ಜಾಗತಿಕವಾಗಿ ಟ್ರಂಪ್‌ ಹುಚ್ಚಾಟಕ್ಕೆ ಅಪಾರ ಸಾವು-ನೋವುಗಳು ಸಂಭವಿಸುತ್ತಿವೆ. ಇಂಧನ, ಗ್ಯಾಸ್‌ ಸೇರಿದಂತೆ ದಿನನಿತ್ಯದ ಬಳಕೆ ವಸ್ತುಗಳಿಗೆ ಕೃತಕ ಅಭಾವ ತಂದೊಡ್ಡುವ ಮೂಲಕ ಜಗತ್ತಿನ ಹಲವು ದೇಶಗಳನ್ನು ಅಪಾಯಕ್ಕೆ ತಳ್ಳಲು ಯೋಜನೆ ರೂಪಿಸಿದಂತೆ ಕಾಣುತ್ತಿದೆ.

Tags: Ayotullah ali KhameneiBenjamin Netamyahucommercial CylinderCooking gas cylinderCounterterrorism CenteDomestic CylinderDonald TrumpFormer Director of the United States National Counterterrorism CenteIran israel conflictsiran israel wariran warisrael PMJo KentPratidhvani
Previous Post

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ: ಶಾಕಿಂಗ್ ಅಂಶ ಬಯಲು

Next Post

ಯಾವುದೇ ಒತ್ತಡವಿಲ್ಲದೆ, ಭಯಮುಕ್ತರಾಗಿ ಪರೀಕ್ಷೆ ಎದುರಿಸಿ : ಗುಲಾಬಿ ಹೂ ನೀಡಿ ಮಧು ಬಂಗಾರಪ್ಪ ವಿಶ್..!

Related Posts

ಅನಗತ್ಯ ಹೇಳಿಕೆ ನೀಡಿದ್ರೆ ಶಿಸ್ತುಕ್ರಮ : ಶಾಸಕರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಖಡಕ್‌ ವಾರ್ನ್..!
Top Story

ಅನಗತ್ಯ ಹೇಳಿಕೆ ನೀಡಿದ್ರೆ ಶಿಸ್ತುಕ್ರಮ : ಶಾಸಕರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಖಡಕ್‌ ವಾರ್ನ್..!

by ಪ್ರತಿಧ್ವನಿ
April 13, 2026
0

ಬೆಂಗಳೂರು : ಪಕ್ಷದ ಶಾಸಕರು ಹೈಕಮಾಂಡ್ ವರಿಷ್ಠರನ್ನು ಭೇಟಿ ಮಾಡುವುದರಲ್ಲಿ ತಪ್ಪೇನಿಲ್ಲ. ಅನವಶ್ಯಕವಾಗಿ ಏನೇನೋ ಹೇಳಿಕೆ ನೀಡಿದರೆ ಶಿಸ್ತು ಕ್ರಮ ಜರುಗಿಸಲಾಗುವುದು" ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ...

Read moreDetails
ಹೊರ್ಮುಜ್‌ನಲ್ಲಿ ಹಡಗುಗಳ ಸಂಚಾರ ನಿರ್ಬಂಧ : ಟೆಹ್ರಾನ್‌ ಮೇಲೆ ಇಸ್ರೇಲ್‌ – ಅಮೆರಿಕದ ದಾಳಿಯಲ್ಲಿ ನಷ್ಟವಾಗಿದ್ದೆಷ್ಟು..?

ಹೊರ್ಮುಜ್‌ನಲ್ಲಿ ಹಡಗುಗಳ ಸಂಚಾರ ನಿರ್ಬಂಧ : ಟೆಹ್ರಾನ್‌ ಮೇಲೆ ಇಸ್ರೇಲ್‌ – ಅಮೆರಿಕದ ದಾಳಿಯಲ್ಲಿ ನಷ್ಟವಾಗಿದ್ದೆಷ್ಟು..?

April 13, 2026
ಕೈ ಶಾಸಕರ ದೆಹಲಿ ಯಾತ್ರೆ : ಹೈಕಮಾಂಡ್‌ ಭೇಟಿಯ ಹಿಂದೆ ಯಾರ ಕೈವಾಡ.? ಸಂಪುಟ ವಿಸ್ತರಣೆಯಾದ್ರೆ ಯಾರಿಗೆಲ್ಲ ಮಂತ್ರಿಗಿರಿ..?

ಕೈ ಶಾಸಕರ ದೆಹಲಿ ಯಾತ್ರೆ : ಹೈಕಮಾಂಡ್‌ ಭೇಟಿಯ ಹಿಂದೆ ಯಾರ ಕೈವಾಡ.? ಸಂಪುಟ ವಿಸ್ತರಣೆಯಾದ್ರೆ ಯಾರಿಗೆಲ್ಲ ಮಂತ್ರಿಗಿರಿ..?

April 13, 2026
ಆಚರಣೆ ಸಂಭ್ರಮದ ನಡುವೆ ಅಂಬೇಡ್ಕರ್ ಎಲ್ಲಿದ್ದಾರೆ ?

ಆಚರಣೆ ಸಂಭ್ರಮದ ನಡುವೆ ಅಂಬೇಡ್ಕರ್ ಎಲ್ಲಿದ್ದಾರೆ ?

April 13, 2026
ಟಿಸಿಎಸ್ ಘಟಕದ ವಿರುದ್ಧ ಗಂಭೀರ ಆರೋಪ: ಅಂಡರ್‌ಕವರ್ ಕಾರ್ಯಾಚರಣೆಯಲ್ಲಿ ಪ್ರಕರಣ ಬಯಲು

ಟಿಸಿಎಸ್ ಘಟಕದ ವಿರುದ್ಧ ಗಂಭೀರ ಆರೋಪ: ಅಂಡರ್‌ಕವರ್ ಕಾರ್ಯಾಚರಣೆಯಲ್ಲಿ ಪ್ರಕರಣ ಬಯಲು

April 12, 2026
Next Post
ಯಾವುದೇ ಒತ್ತಡವಿಲ್ಲದೆ, ಭಯಮುಕ್ತರಾಗಿ ಪರೀಕ್ಷೆ ಎದುರಿಸಿ : ಗುಲಾಬಿ ಹೂ ನೀಡಿ ಮಧು ಬಂಗಾರಪ್ಪ ವಿಶ್..!

ಯಾವುದೇ ಒತ್ತಡವಿಲ್ಲದೆ, ಭಯಮುಕ್ತರಾಗಿ ಪರೀಕ್ಷೆ ಎದುರಿಸಿ : ಗುಲಾಬಿ ಹೂ ನೀಡಿ ಮಧು ಬಂಗಾರಪ್ಪ ವಿಶ್..!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada