ರಷ್ಯಾದಿಂದ ತೈಲ ಖರೀದಿ ಸ್ಥಗಿತಕ್ಕೆ ಭಾರತ ನಿರ್ಧರಿಸಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದಾರೆ. ಟ್ರಂಪ್ ಹೇಳಿಕೆಯಂತೆ ಭಾರತ ಪೂರ್ಣ ಪ್ರಮಾಣದಲ್ಲಿ ತೈಲ ಖರೀದಿ ಸ್ಥಗಿತಗೊಳಿಸಿದರೆ ಭಾರತಕ್ಕೆ ವಾರ್ಷಿಕ 30000 ಕೋಟಿ ರೂಪಾಯಿನಷ್ಟು ನಷ್ಟ ಉಂಟಾಗಲಿದೆ ಎಂದು ಹಣಕಾಸು ಸಂಸ್ಥೆಯೊಂದು ಹೇಳಿದೆ.

ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ ಎಂದು ಟ್ರಂಪ್ ಹೇಳಿದ್ದರು. ಇದಕ್ಕೆ ಪ್ರತಿಯಾಗಿ ರಷ್ಯಾ, ತೈಲ ಖರೀದಿ ಸ್ಥಗಿತದ ಬಗ್ಗೆ ಭಾರತ ನಮಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಹೇಳಿತ್ತು.

ಪ್ರತಿ ಬ್ಯಾರಲ್‌ಗೆ 5 ಡಾಲರ್‌ನಂತೆ, ದಿನಕ್ಕೆ 18 ಲಕ್ಷ ಬ್ಯಾರಲ್‌ಗಳಿಗೆ ಲೆಕ್ಕ ಹಾಕಿದರೆ ಒಟ್ಟು ವಾರ್ಷಿಕ 36,000 ಕೋಟಿ ರು. ಹೆಚ್ಚುವರಿ ತೈಲ ಬಿಲ್ ಪಾವತಿ ಮಾಡಬೇಕಿದೆ. ಇದು ಒಟ್ಟು ಬಿಲ್‌ನಲ್ಲಿ ಶೇ.2ರಷ್ಟು ಹೆಚ್ಚು, ಹಾಗಾಗಿ ರಷ್ಯಾದ ತೈಲ ಆಮದನ್ನು ಭಾರತ ನಿಲ್ಲಿಸಿದರೆ ಭಾರತಕ್ಕೆ ವಾರ್ಷಿಕ 36,000 ಕೋಟಿ ರು. ನಷ್ಟವಾಗಲಿದೆ ಎಂದು ಕೆಪ್ಲರ್ ಹಣಕಾಸು ಸಂಸ್ಥೆ ಹೇಳಿದೆ.

ರಷ್ಯಾವು ಭಾರತಕ್ಕೆ 15 ಲಕ್ಷ ಬ್ಯಾರಲ್‌ನಿಂದ 20 ಲಕ್ಷ ಬ್ಯಾರೆಲ್ ತೈಲ ರಫ್ತು ಮಾಡುತ್ತದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ತೈಲ ರಫ್ತು ಮಾಡಲು ಅಮೆರಿಕಕ್ಕೆ ಸಾಧ್ಯವೇ ಇಲ್ಲ. ರಷ್ಯಾದಿಂದ ತೈಲ ಖರೀದಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಲು ಭಾರತಕ್ಕೆ ಸಾಧ್ಯವಿಲ್ಲ. ರಷ್ಯಾದ ವಕ್ತಾರ ಡಿಮಿತ್ರಿಪೆಸ್ಕೊ ಹೇಳಿದ್ದಾರೆ .ರಷ್ಯಾ ಮೂಲಕ ಕಚ್ಚಾತೈಲ ಖರೀದಿ ನಿಲ್ಲಿಸುವ ಬಗ್ಗೆ ಈವರೆಗೂ ಭಾರತದಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.

