ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಈಗಾಗಲೇ ಪಕ್ಷದ ನಾಯಕರು, ಮುಖಂಡರು ರಾಜ್ಯದ ಮೂಲೆ ಮೂಲೆಗೂ ಹೋಗಿ ಭರ್ಜರಿ ಮತ ಪ್ರಚಾರ ಮಾಡುತ್ತಿದ್ದಾರೆ.

ಇದೀಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಚುನಾವಣೆ ವೇಳೆಯೇ ದೇವರ ಮೊರೆ ಹೋಗಿದ್ದು, ಶೃಂಗೇರಿ ಶಾರದಾಂಬೆ ದೇಗುಲದಲ್ಲಿ ಚಂಡಿಕಾಯಾಗ ಮಾಡಿಸುತ್ತಿದ್ದಾರೆ. ಉಡುಪಿಯ ಜ್ಯೋತಿಷಿ ದ್ವಾರಕನಾಥ್ ಸಲಹೆಯಂತೆ 15ಕ್ಕೂ ಹೆಚ್ಚು ಪುರೋಹಿತರ ನೇತೃತ್ವದಲ್ಲಿ ಚಂಡಿಕಾಯಾಗ ಮಾಡಿಸುತ್ತಿದ್ದಾರೆ.

ಒಂದೇ ತಿಂಗಳಲ್ಲಿ 2 ಬಾರಿ ಡಿಕೆಶಿ ಶೃಂಗೇರಿಗೆ ಭೇಟಿ ನೀಡಿದ್ದಾರೆ. ಅಧಿಕಾರಕ್ಕಾಗಿ ರಾಜರು ಚಂಡಿಕಾಯಾಗ ನಡೆಸುತ್ತಿದ್ದರು. ಈಗ ಸಿಎಂ ಕುರ್ಚಿಗಾಗಿ ಶಕ್ತಿ ಪೀಠದಲ್ಲಿ ಡಿಕೆಶಿ ಯಾಗದ ಮೊರೆ ಹೋಗಿದ್ದಾರೆ. ಅಧಿಕಾರ, ಇಷ್ಟಾರ್ಥ ಸಿದ್ಧಿಗಾಗಿ ಯಾಗ ಮಾಡಲಾಗಿದೆ.










