ಬಾಂಗ್ಲದೇಶದಲ್ಲಿ (Bangladesh) ಉದ್ಯೋಗ ಹಂಚಿಕೆ ಕೋಟಾ ವ್ಯವಸ್ಥೆಯನ್ನ ವಿರೋಧಿಸಿ ವಿದ್ಯಾರ್ಥಿಗಳು (Students protest) ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಹಿಂಸಾಚಾರದಲ್ಲಿ ಈವರೆಗೆ 32 ಮಂದಿ ಸಾವನ್ನಪ್ಪಿದ್ದಾರೆ.
ದೇಶಾದ್ಯಂತ ಪ್ರತಿಭಟನೆ ತೀವ್ರತೆ ಹೆಚ್ಚಾಗಿದ್ದು, ಢಾಕಾದ ವಿಶ್ವವಿದ್ಯಾನಿಲಯ (Dhaka university) ಕ್ಯಾಂಪಸ್ ಎದುರು ಸಾರ್ವಜನಿಕ ಸೇವೆಯಲ್ಲಿ ಕೋಟಾ ವ್ಯವಸ್ಥೆ ನೀಡಬೇಕೆಂದು ವಿದ್ಯಾರ್ಥಿಗಳು ಬೃಹತ್ ಹೋರಾಟ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳನ್ನು ಚದುರಿಸಲು ಪೊಲೀಸರು (Police) ಅಶ್ರುವಾಯು ಶೆಲ್‌ಗಳು ಮತ್ತು ರಬ್ಬರ್ ಬುಲೆಟ್‌ಗಳನ್ನು ಹಾರಿಸಿದ್ದು,ಪೊಲೀಸ್- ವಿದ್ಯಾರ್ಥಿಗಳ ಘರ್ಷಣೆ ವೇಳೆ 32 ಮಂದಿ ಮೃತ ಪಟ್ಟಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.
ಸ್ವಾತಂತ್ರ್ಯ ಹೋರಾಟಗಾರರು (Freedom fighters) & ಅವರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗದಲ್ಲಿ ನಿಡಿರುವ ಶೇಕಡಾ 30 ರಷ್ಟು ಮೀಸಲಾತಿ ಪದ್ಧತಿಯನ್ನು ತೆರವು ಮಾಡಿ, ಪ್ರತಿಭೆಗೆ ತಕ್ಕಂತೆ ಎಲ್ಲಾ ವರ್ಗಗಳಿಗೂ ಅವಕಾಶ ಕಲ್ಪಿಸಬೆಕು ಎಂದು ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ.