ಬೆಂಗಳೂರು : ಬಾಬಾ ವಂಗಾ ಅವರ ಭವಿಷ್ಯವಾಣಿಗಳು ಪ್ರತಿ ವರ್ಷವೂ ಸಾಕಷ್ಟು ಸದ್ದು ಮಾಡುತ್ತಿರುತ್ತವೆ. 2025ನೇ ವರ್ಷದಲ್ಲೂ ಬಾಬಾ ವಂಗಾರ ಕೆಲ ಭವಿಷ್ಯಗಳು ನಿಜವಾಗಿದ್ದವು. ಬಾಬಾ ವಂಗಾ, 2026 ರಲ್ಲಿ ಜಗತ್ತನ್ನು ಅಪ್ಪಳಿಸುವ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಭವಿಷ್ಯ ನುಡಿದಿದ್ದರು. ಪ್ರಮುಖ ಹಣದ ಕೊರತೆಯು ಜಾಗತಿಕ ವಿತ್ತೀಯ ವ್ಯವಸ್ಥೆಗಳು ವಿಫಲಗೊಳ್ಳಲು ಕಾರಣವಾಗುತ್ತದೆ ಎಂದು ಅವರು ಭವಿಷ್ಯ ನುಡಿದಿದ್ದರು. ಚಿನ್ನ, ಬೆಳ್ಳಿ ಮತ್ತು ತಾಮ್ರವು ಸುರಕ್ಷಿತ ಹೂಡಿಕೆಗಳಾಗುತ್ತವೆ ಎಂದು ವಂಗಾ ಭವಿಷ್ಯ ನುಡಿದಿದ್ದರು.

ಬಾಬಾ ವಂಗಾ ಪ್ರಕಾರ 2026ರಲ್ಲಿ ಇಡೀ ಪ್ರಪಂಚ ದೊಡ್ಡ ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದೆ. ಬ್ಯಾಂಕುಗಳೇ ಹೆದರುವ ಪರಿಸ್ಥಿತಿ ಬರಬಹುದು ಅನ್ನೋದು ಅವರ ಭವಿಷ್ಯವಾಣಿ. ಹೀಗಾದಾಗ ಜನರಿಗೆ ದುಡ್ಡಿಗಿಂತ ಚಿನ್ನವೇ ಸುರಕ್ಷತೆ ಎನ್ನಿಸಬಹುದು.ವ ರ್ಷದೊಳಗೆ ಚಿನ್ನದ ಬೆಲೆಗಳು 25% ರಿಂದ 40% ರಷ್ಟು ಏರಿಕೆಯಾಗಬಹುದು ಎಂದು ಕೆಲವರು ಸೂಚಿಸುತ್ತಾರೆ.

ಚಿನ್ನವು ಪ್ರಸ್ತುತ 10 ಗ್ರಾಂಗೆ 1.69 ಲಕ್ಷ ರೂ. (ಅಂದಾಜು), ಇದು 2025 ರಿಂದ 50 ಪ್ರತಿಶತದಷ್ಟು ಹೆಚ್ಚಾಗಿದೆ.ಇಟಿಎಫ್ ಹೂಡಿಕೆಯು 2026 ರ ದೀಪಾವಳಿಯ ವೇಳೆಗೆ ಚಿನ್ನದ ಬೆಲೆಯನ್ನು 10 ಗ್ರಾಂಗೆ 1.62-1.82 ಲಕ್ಷ ರೂ. (ಅಂದಾಜು) ಗೆ ಹೆಚ್ಚಿಸುತ್ತದೆ ಎನ್ನಲಾಗುತ್ತಿದೆ.
ಕಳೆದ ವಾರ ಬೆಳ್ಳಿ ಬೆಲೆ ಶೇ. 9 ರಷ್ಟು ಏರಿಕೆಯಾಗಿ, ಪ್ರತಿ ಕೆಜಿಗೆ ₹ 4,20,048 ಕ್ಕೆ ತಲುಪಿ, ನಂತರ ₹ 3,99,893 ಕ್ಕೆ ಇಳಿದಿತ್ತು. ಅದೇ ದಿನ ಚಿನ್ನ ಕೂಡ ಶೇ. 9 ರಷ್ಟು ಏರಿಕೆಯಾಗಿ, 10 ಗ್ರಾಂಗೆ ₹ 1,80,779 ಕ್ಕೆ ತಲುಪಿ, ನಂತರ ₹ 1,69,403 ಕ್ಕೆ ಇಳಿದು ಐತಿಹಾಸಿಕ ಗರಿಷ್ಠ ಮಟ್ಟ ತಲುಪಿತು.

