ಸ್ಯಾಂಡಲ್‌ವುಡ್‌ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾರ ಮಗಳು ಹೇಗಿದ್ದಾಳೆ ಅಂತ ನೋಡೋ ಕುತೂಹಲ ಸಾಕಷ್ಟು ಅಭಿಮಾನಿಗಳಲ್ಲಿತ್ತು. ಇದೀಗ ಅವರ ಕುತೂಹಲಕ್ಕೆ ತೆರೆಬಿದ್ದಿದೆ. ತಮ್ಮ ಮಗಳ ಮುಖ ರಿವೀಲ್ ಮಾಡುವ ಮೂಲಕ ಧ್ರುವ ಫ್ಯಾನ್ಸ್ಗೆ ಗುಡ್ ನ್ಯೂಸ್ ನೀಡಿದ್ದಾರೆ.

ಹೌದು.. ಧ್ರುವ ಸರ್ಜಾ ಮತ್ತು ಪ್ರೇರಣಾ ದಂಪತಿಗೆ ಮಗಳು ಹುಟ್ಟಿ 7 ತಿಂಗಳ ಕಳೆದಿದೆ. ಇದೀಗ ಆಕ್ಷನ್ ಹೀರೋ ಮೊದಲ ಬಾರಿಗೆ ಮಗಳ ಮುಖವನ್ನ ರಿವೀಲ್ ಮಾಡಿದ್ದು, ಮಗಳಿಗೆ ಫೋಟೋಶೂಟ್ ಮಾಡಿಸಿದ ಕೆಲ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿವೆ.

ಬಾಲ್ಯದ ಗೆಳತಿ ಪ್ರೇರಣಾರನ್ನ ಪ್ರೀತಿಸಿ 2019ರಲ್ಲಿ ಮದುವೆಯಾದ ನಟ ಧ್ರುವ ಸರ್ಜಾ, ತಂದೆಯಾಗುತ್ತಿರುವ ಸಿಹಿ ಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ರು. ಬಳಿಕ ಮಗಳು ಪ್ರೇರಣಾಗೆ ಮುದ್ದು ಮಗಳು ಜನಿಸಿದ ಗುಡ್ ನ್ಯೂಸ್ ಅನ್ನು ಕೂಡ ನಟ ಹಂಚಿಕೊಂಡಿದ್ದರು. ಇದೀಗ ಧ್ರುವ 7 ತಿಂಗಳ ಬಳಿಕ ಮಗಳ ಫೋಟೋವನ್ನು ಶೇರ್ ಮಾಡಿದ್ದಾರೆ.
