ಧಾರವಾಡದ ನುಗ್ಗಿಕೆರೆ ಹನುಮಂತ ದೇವರ ಗುಡಿ ಹತ್ತಿರ ಯಾರೋ 08-10 ಜನ ಆಪಾದಿತರು ಗುಂಪೊಂದು ಮುಸ್ಲಿಮರ ಅಂಗಡಿಗಳನ್ನು ಪದಾರ್ಥಗಳನ್ನು ಧ್ವಂಸಗೊಳಿಸಿ ಬಲವಂತವಾಗಿ ಅಂಗಡಿ ತೆರವುಗೊಳಿಸಿದ ಪ್ರಕರಣಕ್ಕೆ ಸಂಬಂಧಿ ಇದೀಗ ನಾಲ್ವರು ಶ್ರೀರಾಮ ಸೇನೆ ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ಆರೋಪಿತರಾದ 1) ಮೈಲಾರಪ್ಪ ಗುಡ್ಡಪ್ಪನವರ ವಯಾ 27, 2) ಮಹಾನಿಂಗ ಐಗಳಿ ವಯಾ 26 , 3) ಚಿಂದಾನAದ ಕಲಾಲ ವಯಾ 25 ಸಾ. 4) ಕುಮಾರ ಕಟ್ಟಿಮನಿ ವಯಾ 26 ಎಂಬುವವರನ್ನು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನುಗ್ಗಿಕೆರೆ ಹನುಮಂತ ದೇವರ ಗುಡಿ ಆವರಣದಲ್ಲಿ
ಕಲ್ಲಂಗಡಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಪರ‍್ಯಾದಿ ನಬೀಸಾಬ ಗೌಸುಸಾಬ ಕಿಲ್ಲೇದಾರ ಮತ್ತು ತೆಂಗಿನಕಾಯಿ ವ್ಯಾಪಾರ ಮಾಡುತ್ತಿದ್ದ ಸಲೀಂ ತಂದೆ ಮೆಹಬೂಬಸಾಬ ಮುಜಾವರ್ ಸಾ ಅವರ ಅಂಗಡಿಗೆ ಬಂದ ಗುಂಪೊಂದು ಏಕಾಏಕಿ ಹಣ್ಣಗಳನ್ನು ರೋಡಿಗೆ ಎಸೆದು ಬಲವಂತವಾಗಿ ಅಂಗಡಿಗಳನ್ನು ತೆರವುಗೊಳಿಸಿದ್ದರು. ಈ ಬಗ್ಗೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ಪ್ರಕರಣ ಸಂ. 66/2022 ಕಲಂ. 143, 147 298 427 504 506 ಸಹ ಕಲಂ 149 ಐಪಿಸಿ ನೇದ್ದು ದಾಖಲಾಗಿತ್ತು.
ಈ ಕುರಿತು ಧಾರವಾಡ ಜಿಲ್ಲಾ ಪೊಲೀಸ್ ವತಿಯಿಂದ ಪ್ರಕರಣದಲ್ಲಿ ಭಾಗಿಯಾದ ನಾಲ್ಕು ಆರೋಪಿಗಳನ್ನು ಬಂದಿಸಿರುವುದಾಗಿ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದೀಗ ನಾಲ್ವರು ಶ್ರೀರಾಮ ಸೇನೆ ಕಾರ್ಯಕರ್ತರನ್ನು ಬಂಧಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ