ಕಣ್ಣಿನ ಸುತ್ತ ಕಂಡುಬರುವಂತಹ ಡಾರ್ಕ್ ಸರ್ಕಲ್ ಪ್ರತಿಯೊಬ್ಬರಿಗೂ ಕೂಡ ಇರುತ್ತೆ. ಆದ್ರೆ ಕೆಲವರಿಗೆ ಇದು ಜಾಸ್ತಿ ಇರುತ್ತೆ.ಡಾರ್ಕ್ ಸರ್ಕಲ್ ಇದ್ರೆ ಮುಖದ ಸೌಂದರ್ಯವನ್ನು ಸ್ವಲ್ಪ ಕಡಿಮೆ ಮಾಡುತ್ತೆ.. ನಮ್ಮ ಫೇಸ್ ಡಲ್ ಕಾಣಿಸೋದಕ್ಕೆ ಡಾರ್ಕ್ ಸರ್ಕಲ್ ಪ್ರಮುಖ ಕಾರಣ..ನಾವು ಡಾರ್ಕ್ ಸರ್ಕಲ್ಸ್ ನ ಕಡಿಮೆ ಮಾಡ್ಲೆಬೇಕು ಅನ್ನುವ ಸ್ಥಿತಿ ಎದುರಾಗತ್ತೆ ಯಾಕೆಂದರೆ ನಮ್ಮ ಅಂದದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ..
ಇನ್ನು ಡಾರ್ಕ್ ಸರ್ಕಲ್ ಬರೋದಕ್ಕೆ ಪ್ರಮುಖ ಕಾರಣ..ನಮ್ಮ ಲೈಫ್ಸ್ಟೈಲ್, ರಾತ್ರಿ ಹೊತ್ತು ಹೆಚ್ಚು ಸಮಯ ಮೊಬೈಲ್ ನೋಡುವುದು ಜೊತೆಗೆ ಸರಿಯಾಗಿ ನಿದ್ದೆ ಆಗದಿದ್ರೂ ಕೂಡ ಡಾರ್ಕ್ ಸರ್ಕಲ್ಸ್ ಶುರುವಾಗುತ್ತೆ.. ವಿಟಮಿನ್ ಬಿ12 ಅಂಶ ನಮ್ಮ ದೇಹದಲ್ಲಿ ಕಡಿಮೆ ಆದಾಗ ಕೂಡ ಈ ಸಮಸ್ಯೆ ಕಂಡುಬರುತ್ತದೆ..ಹಾಗೂ ಸ್ಟ್ರೆಸ್ ಇಂದಾಗಿಯು ಡಾರ್ಕ್ ಸರ್ಕಲ್ ಬರುತ್ತದೆ..
ಡಾರ್ಕ್ ಸರ್ಕಲ್ಸ್ ಕಡಿಮೆ ಆಗ್ಬೇಕು ಅಂದ್ರೆ ಈ ಸಿಂಪಲ್ ಮನೆ ಮದ್ದು ಟ್ರೈ ಮಾಡಿ ..
ಆಲೂಗೆಡ್ಡೆ
ಡಾರ್ಕ್ ಸರ್ಕಲ್ ಹೆಚ್ಚಾದಾಗ ಪ್ರತಿದಿನ ನಾವು ಆಲೂಗೆಡ್ಡೆ ರಸವನ್ನ ಕಣ್ಣಿನ ಕೆಳಭಾಗಕ್ಕೆ ಹಚ್ಚುವುದರಿಂದ ಡಾರ್ಕ್ ಸರ್ಕಿಲ್ಸ್ ಬೇಗನೆ ನಿವಾರಣೆ ಆಗುತ್ತದೇ.ಆಲೂಗಡ್ಡೆಯಲ್ಲಿ ವಿಟಮಿನ್ ಸಿ ಅಂಶ ಹೆಚ್ಚಿರುತ್ತದೇ ಇದು ನಮ್ಮ ಕಣ್ಣಿನ ಕೆಳಗೆ ಆಗಿರುವಂತಹ ಕಪ್ಪು ಕಲೆಯನ್ನು ನೈಸರ್ಗಿಕ ಬಣ್ಣಕ್ಕೆ ಹಿಂದಿರುಗಲು ಸಹಾಯ ಮಾಡುತ್ತದೆ..
ವಿಟಮಿನ್ ಇ ಕ್ಯಾಪ್ಸುಲ್
ವಿಟಮಿನ್ ಇ ಟ್ಯಾಬ್ಲೆಟ್ ಅಲ್ಲಿ ಇರುವಂತಹ ಆಯಿಲನ್ನು ನಮ್ಮ ಕಣ್ಣಿನ ಕೆಳಗೆ ಹಚ್ಚಿ 15 ನಿಮಿಷಗಳ ಕಾಲ ಬಿಟ್ಟು ವಾಶ್ ಮಾಡುವುದರಿಂದ ಬೇಗನೆ ಡಾರ್ಕ್ ಸರ್ಕಲ್ ನಿವಾರಣೆ ಆಗುತ್ತದೇ. ನಮ್ಮ ಕಣ್ಣನ್ನು ಹೈಡ್ರೇಟ್ ಮಾಡುತ್ತದೆ. ಇದರ ಜೊತೆಗೆ ರೋಜ್ ವಾಟರ್ ನ ಕೂಡ ನೀವು ಮಿಕ್ಸ್ ಮಾಡಿಕೊಳ್ಳಬಹುದು..
ಹಾಲು ಮತ್ತು ಅರಿಶಿನ
ಅರ್ಧ ಟೇಬಲ್ ಸ್ಪೂನ್ ಅರಿಶಿಣಕ್ಕೆ ಅದಕ್ಕೆ ಬೇಕಾದಷ್ಟು ಹಾಲನ್ನ ಹಾಕಿ ಮಿಶ್ರಣ ಮಾಡಿಕೊಂಡು ಪ್ರತಿದಿನ ನೀವು ಕಣ್ಣಿನ ಕೆಳಗೆ ಹಚ್ಚಿ 10 ನಿಮಿಷಗಳ ಕಾಲ ಬಿಟ್ಟು ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಹೀಗೆ ಮಾಡುವುದರಿಂದ ಕಣ್ಣಿನ ಕೆಳಗಾಗಿರುವಂಥ ಕಪ್ಪು ಕಲೆಗಳು ಬೇಗನೆ ಕಡಿಮೆಯಾಗುತ್ತದೆ. ಅರಿಶಿನದಲ್ಲಿ ಸಾಕಷ್ಟು ಔಷಧಿ ಅಂಶ ಇರುತ್ತದೆ ಹಾಗೂ ನಮ್ಮ ಸ್ಕಿನ್ ಗ್ಲೋ ಆಗುತ್ತದೆ. ನಮ್ಮ ಕಣ್ಣಿಗೆ ತುಂಬಾನೇ ಒಳ್ಳೆಯದು ಇದರ ಜೊತೆಗೆ ನೀವು ತೆಂಗಿನ ಎಣ್ಣೆಯನ್ನು ಕೂಡ ಬಳಸಿಕೊಳ್ಳಬಹುದು..
ಬಾದಾಮಿ ಎಣ್ಣೆ
ಪ್ರತಿದಿನ ಕಣ್ಣಿನ ಕೆಳಗೆ ಎಣ್ಣೆಯನ್ನ ಹಚ್ಚಿ ೨೦ ನಿಮಿಷ ಬಿಟ್ಟು ಬೆಚ್ಚಗಿನ ನೀರಿನಿಂದ ತೊಳೆಯುವುದರಿಂದ ಡಾರ್ಕ್ ಸರ್ಕಲ್ಸ್ ಬೇಗ ಕಡಿಮೆ ಆಗುತ್ತದೆ..
ಇದೆಲ್ಲದರ ಜೊತೆಗೆ ಸರಿಯಾದ ಸಮಯಕ್ಕೆ ನಿದ್ದೆ ಮಾಡಬೇಕು ಹಾಗೂ ಹೆಚ್ಚು ನೀರನ್ನ ಕುಡಿಬೇಕು, ಒತ್ತಡವನ್ನು ಕಡಿಮೆ ಮಾಡಿಕೊಳ್ಬೇಕು..ಒಟ್ಟಿನಲ್ಲಿ ಈ ರೆಮಿಡೀಸ್ ನ ಟ್ರೈ ಮಾಡಿದ್ರೆ ಡಾರ್ಕ್ ಸರ್ಕಲ್ಸ್ ಬೇಗ ಕಡಿಮೆ ಆಗುತ್ತದೆ..