ಮನೆಯಲ್ಲಿ ಸಿಹಿ ತಿಂಡಿ ಮಾಡಿದಾಗ
ಪಾಯ್ಸ, ಕೇಸರಿಬಾತ್ ಹೀಗೆ ಏನೋ ಒಂದು ಸ್ವೀಟ್ ಮಾಡಿದಾಗ ಅದರಲ್ಲಿ ಉಪಯೋಗಿಸೋದು ದ್ರಾಕ್ಷಿ ಮತ್ತು ಗೋಡಂಬಿಯನ್ನು ಹಾಕಬೇಕು ಅಂತ.. ಹೆಚ್ಚಿನ ಸಿಹಿ ಪದಾರ್ಥಗಳಲ್ಲಿ ಗೋಡಂಬಿಯನ್ನು ಬಳಸುತ್ತಾರೆ..ಗೋಡಂಬಿಯಿಂದ ನಮ್ಮ ದೇಹಕ್ಕೆ ಸಾಕಷ್ಟು ಲಾಭಗಳಿವೆ ಏನೆಲ್ಲ ಅಂತ ನೋಡ್ತಾ ಹೋದ್ರೆ.
ಹೃದಯದ ಆರೋಗ್ಯವನ್ನು ಕಾಪಾಡುತ್ತದೆ
ನಮ್ಮ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ನ ಕಡಿಮೆ ಮಾಡುವುದರಲ್ಲದೆ ಇದರಲ್ಲಿ ಮೆಗ್ನಾಷಿಯಂ ಅಂಶ ಹೆಚ್ಚಿರುವುದರಿಂದ ಹೃದ್ರೋಗವನ್ನ ತಡೆಯಲು ಗೋಡಂಬಿ ಸಹಾಯವನ್ನು ಮಾಡುತ್ತೆ.. ಹಾಗೂ ಗೋಡಂಬಿಯಲ್ಲಿ ಮ್ಯಾಗ್ನೇಷಿಯಂ ಅಂಶ ಹೆಚ್ಚಿರುವುದರಿಂದ ಸ್ಟ್ರೋಕ್ ಆಗುವುದು ಕೂಡ ನಿಯಂತ್ರಣಗೊಳ್ಳುತ್ತದೆ..
ಮೂಳೆಗಳಿಗೆ ಒಳ್ಳೆಯದು
ಗೋಡಂಬಿಯಲ್ಲಿ ಕಾಪರ್ , ಮೆಗ್ನೇಶಿಯಂ ಹಾಗೂ ಕ್ಯಾಲ್ಸಿಯಂ ಅಂಶ ಹೆಚ್ಚಿರುತ್ತದೆ ಹಾಗೂ ಮುಖ್ಯವಾಗಿ ನ್ಯೂಟ್ರಿಯಂಟ್ಸ್ ಅಂಶ ಜಾಸ್ತಿ ಇರೋದ್ರಿಂದ ಮೂಳೆಗಳಿಗೆ ತುಂಬಾನೇ ಒಳ್ಳೆಯದು.. ಇನ್ನು ಗೋಡಂಬಿಯಲ್ಲಿರುವಂತಹ ಮಿನರಲ್ಸ್ ಆಸ್ಟಿಯೊಪೊರೋಸಿಸ್ ನಾ ತಡೆಗಟ್ಟಲು ಸಹಾಯ ಮಾಡುತ್ತದೆ.. ಹಾಗಾಗಿ ಬೆಳೆಯುವ ಮಕ್ಕಳಿಗೆ ಹೆಚ್ಚಿನ ಪ್ರಮಾಣದಲ್ಲಿ ಗೋಡಂಬಿಯನ್ನು ತಿನ್ನಿಸುವುದರಿಂದ ಮೂಳೆಗಳು ಗಟ್ಟಿಯಾಗುತ್ತದೆ..
ಡಯಾಬಿಟಿಸ್ ನಿಯಂತ್ರಣ
ಕ್ಯಾಶ್ಯೂ ರಿಚ್ ಇನ್ ನ್ಯೂಟ್ರಿಯಂಟ್ಸ ಅನ್ನೋದು ನಿಜ.. ಹೌದು ಡಯಾಬಿಟಿಸ್ ಇದ್ದವರಿಗೆ ತುಂಬಾನೇ ಲಾಭಗಳಿದೆ. ಹೆಲ್ದಿ ಫ್ಯಾಟ್ಸ ಇದೆ. ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ ಮತ್ತು ಮಧುಮೇಹಕ್ಕೆ ಸಂಬಂಧಿಸಿದ ಹೃದಯ ರಕ್ತನಾಳದ ತೊಂದರೆಗಳ ಅಪಾಯಗಳನ್ನು ಕಡಿಮೆ ಮಾಡುತ್ತದೆ..
ಹೇಳ್ತಾ ಹೋದ್ರೆ ಗೋಡಂಬಿಯಿಂದ ಇನ್ನು ಸಾಕಷ್ಟು ಪ್ರಯೋಜನಗಳಿವೆ..ನಮ್ಮ ಸ್ಕಿನ್ ಗೆ ತುಂಬಾನೆ ಒಳ್ಳೆಯದು ಗ್ಲೋಯಿಂಗ್ ಸ್ಕಿನ್ ನಮ್ಮದಾಗತ್ತೆ ಜೊತೆಗೆ ನಮ್ಮ ಕೂದಲಿನಲ್ಲಿ ಮೆಲನಿನ್ ಅಂಶವನ್ನು ಹೆಚ್ಚು ಮಾಡುತ್ತೆ ಹಾಗಾಗಿ ಕೂದಲ ಬೆಳವಣಿಗೆಗೂ ಕೂಡ ತುಂಬಾನೇ ಒಳ್ಳೆಯದು.
ಹಾಗಂತ ಗೋಡಂಬಿಯಿಂದ ಒಳ್ಳೆಯದು ಅಂತ ಹೇಳಿ ಹೆಚ್ಚಿನ ಪ್ರಮಾಣದಲ್ಲಿ ಕೂಡ ತಿನ್ನೋದಕ್ಕೆ ಹೋಗಬಾರದು.. ದಿನಕ್ಕೆ ಅಬ್ಬಬ್ಬಾ ಅಂತ ಹೇಳಿದ್ರು 25 ಗ್ರಾಂ ಗೋಡಂಬಿಯನ್ನ ಮಾತ್ರ ತಿನ್ನಬೇಕು.ಹೆಚ್ಚಾದರೆ ಅಮೃತವು ಕೂಡ ವಿಷ ಆಗುತ್ತೆ.