ದೇಶದಲ್ಲಿ ಕೋವಿಡ್ ಹಟ್ಟಹಾಸ ಮುಂದುವರಿದ ಹಿನ್ನೆಲೆಯಲ್ಲಿ ವಿದೇಶಿ ಪ್ರಯಾಣಿಕರ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. ಭಾರತದ ವಿಮಾನಗಳಿಗೆ ಫ್ರಾನ್ಸ್, ಬ್ರಿಟನ್ ಈಗಾಗಲೇ ನಿರ್ಬಂಧದ ಹೇರಿದ ಬೆನ್ನಲೇ ನೆರೆ ರಾಷ್ಟ್ರ ಯುಎಇ, ಕೆನಡಾ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಕೂಡ ಈ ಎರಡು ದೇಶಗಳ ಹಾದಿಯನ್ನೇ ಹಿಡಿದಿದೆ.
ಭಾರತದಲ್ಲಿ ಕರೋನ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಬೆನ್ನಲ್ಲೇ ದೇಶದಿಂದ ತರೆಳುವ ವಿಮಾನಗಳ ಪ್ರವೇಶ ನಿರ್ಬಂಧ ಮಾಡುತ್ತಿರುವ ದೇಶಗಳ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗುತ್ತಲೇ ಇದೆ.
ದೇಶದಲ್ಲಿ ಕರೋನ ಉಗ್ರ ಸ್ವರೂಪ ತಾಳಿದ್ದು ನೆರೆ ರಾಷ್ಟ್ರ ಯುಎಇ ಕೂಡ ಏಪ್ರಿಲ್ 24ರಿಂದ ಮುಂದಿನ 10 ದಿನಗಳ ಕಾಲ ಭಾರತದಿಂದ ಬರುವ ಎಲ್ಲಾ ರೀತಿಯ ವಿಮಾನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವುದಾಗಿ ಅರಬ್ ಎಮಿರೇಟ್ಸ್ ಘೋಷಿಸಿದೆ.
ಭಾರತದಿಂದ ಕೆನಡಾಕ್ಕೆ ವಿಮಾನದಲ್ಲಿ ಆಗಮಿಸುತ್ತಿರುವ ಪ್ರಯಾಣಿಕರಲ್ಲಿ ಕರೋನ ಸೋಂಕು ಹೆಚ್ಚಿನ ಪತ್ತೆಯಾಗುತ್ತಿದ್ದು, ಮುಂದಿನ 30 ದಿನಗಳ ಕಾಲ ಭಾರತದಿಂದ ಕೆನಡಾಕ್ಕೆ ಆಗಮಿಸುವ ಎಲ್ಲಾ ವಾಣಿಜ್ಯ ಮತ್ತು ಖಾಸಗಿ ನಾಗರಿಕ ವಿಮಾನಗಳ ಸಂಚಾರವನ್ನು ರದ್ದುಗೊಳಿಸಿರುವುದಾಗಿ” ಒಮರ್ ತಿಳಿಸಿದ್ದಾರೆ ಎಂದು ವರದಿ ಹೇಳಿದೆ.
ಭಾರತ ಸೇರಿದಂತೆ ಕರೋನಾ ಪ್ರಕರಣಗಳು ತೀವ್ರವಾಗಿ ಹೆಚ್ಚಾಗುತ್ತಿರುವ ಎಲ್ಲಾ ದೇಶಗಳಿಂದ ಬರುವ ವಿಮಾನಗಳು ಆಸ್ಟ್ರೇಲಿಯಾಗೆ ಬರುವುದನ್ನು ಶೇ 30% ಕಡಿಮೆ ಮಾಡಿದ್ದೇವೆ ಎಂದು ಆಸೀಸ್ ಪ್ರಧಾನಿ ಸ್ಕಾಟ್ ಮಾರಿಸನ್ ಘೋಷಿಸಿದ್ದಾರೆ.
ಭಾರತದಲ್ಲಿ ಕರೋನಾ ಅಟ್ಟಹಾಸ ಹೆಚ್ಚಾಗಿರುವ ಕಾರಣ, ಭಾರತದಿಂದ ಬರುವ ಹೆಚ್ಚವರಿ ವಿಮಾನಗಳಿಗೆ ನಿಷೇಧ ಹೇರಿದೆ. ವಿಮಾನ ಸಂಚಾರ ವಿಷಯದ ಕುರಿತಾಗಿ ಇಂಗ್ಲೆಂಡ್ ನ ಹೌಸ್ ಆಫ್ ಕಾಮರ್ಸ್ ಭಾರತವನ್ನು ಕೆಂಪು ಪಟ್ಟಿಯಲ್ಲಿ ಸೇರಿಸಲು ನಿರ್ಣಾಯ ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ.
ಈ ಮೊದಲು ಪ್ರಾನ್ಸ್, ಬ್ರಿಟನ್ ಮತ್ತು ಪಾಕಿಸ್ತಾನ ಭಾರತದಿಂದ ಬರುವ ವಿಮಾನಗಳನ್ನು ನಿಷೇಧಿಸಿತ್ತು.