ಅಡುಗೆ ಮಾಡುವ ಆತುರದಲ್ಲಿ ಕೆಲವು ಬಾರಿ ಕೈ ಸುಟ್ಟುಕೊಳ್ಳಬಹುದು. ಕೈಗೆ ಎಣ್ಣೆ ಬಿಸಿತಾಗಿ ಅಥವಾ ಹಂಚು ,ಪಾತ್ರೆ ತಾಗಿ ಕೂಡ ಚರ್ಮ ಸುಡುತ್ತಿದೆ ಇದರಿಂದ ಉರಿ ಹಾಗೂ ನೋವು ಶುರುವಾಗುತ್ತದೆ. ಕೆಲವು ಬಾರಿ ಗುಳ್ಳೆಗಳಾಗಿ ಅದರೊಳಗಡೆ ನೀರು ಕೂಡ ತುಂಬಿಕೊಳ್ಳುತ್ತದೆ.. ಹಾಗಾಗಿ ಅಡಿಗೆ ಮನೆಯಲ್ಲಿದ್ದಾಗ ಎಷ್ಟೇ ಕಾಳಜಿ ವಹಿಸಿದರೂ ಕಮ್ಮಿ.. ಅಡುಗೆ ಮಾಡುವಾಗ ಈ ಸಣ್ಣ ಪುಟ್ಟ ಗಾಯಗಳಾದಾಗ ಚಿಂತೆ ಮಾಡದೆ ಈ ಹೋಮ್ ರೆಮಿಡೀಸ್ ನ ತಪ್ಪದೇ ಫಾಲೋ ಮಾಡಿ.
- ಅಪ್ಪಿ ತಪ್ಪಿ ಕೈ ಸುಟ್ಟುಕೊಂಡಾಗ ತಕ್ಷಣಕ್ಕೆ ಸುಟ್ಟುಕೊಂಡ ಜಾಗದಲ್ಲಿ ನೀರನ್ನ ಹಾಕುವುದು ಉತ್ತಮ ಇದರಿಂದ ಗುಳ್ಳೆಗಳಾಗುವುದಿಲ್ಲ ಹಾಗೂ ಉರಿ ಕೂಡ ಕಡಿಮೆಯಾಗುತ್ತದೆ.
- ಎಣ್ಣೆ ತಾಗಿ ಚರ್ಮ ಸುಟ್ಟರೆ ತಕ್ಷಣಕ್ಕೆ ಐಸ್ ಕ್ಯೂಬ್ ಗಳನ್ನ ಸುಟ್ಟ ಜಾಗದಲ್ಲಿ ಇಡುವುದರಿಂದ ತಣ್ಣಗಾಗುತ್ತದೆ. ಹಾಗೂ ಸುಟ್ಟ ಜಾಗದಲ್ಲಿ ಗುಳ್ಳೆ ಆಗುವುದಿಲ್ಲ.
- ಚರ್ಮದ ಯಾವುದೇ ಕಲೆಗಳನ್ನ ನಿವಾರಣೆ ಮಾಡುವುದಕ್ಕೆ ಅಲೋವೆರಾ ತುಂಬಾನೇ ಉಪಕಾರಿ. ಹಾಗಾಗಿ ಸುಟ್ಟ ಜಾಗಕ್ಕೆ ತಕ್ಷಣ ಅಲೋವೆರವನ್ನ ಹಚ್ಚುವುದರಿಂದ ಗಾಯ ಮಾಯವಾಗುತ್ತದೆ ಹಾಗೂ ಉರಿಯುತವು ಕಡಿಮೆಯಾಗುತ್ತದೆ ಗುಳ್ಳೆಗಳು ಕಾಣಿಸಿಕೊಳ್ಳುವುದಿಲ್ಲ.
- ಸುಟ್ಟ ಗಾಯದ ಮೇಲೆ ತಕ್ಷಣಕ್ಕೆ ಅರಿಶಿನ ಪುಡಿಯನ್ನು ಹಾಕುವುದರಿಂದ ಸೆಪ್ಟಿಕ್ ಕಡಿಮೆಯಾಗುತ್ತದೆ ಕಾರಣ ಇದರಲ್ಲಿ ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ಫಂಗಲ್ ಅಂಶಗಳು ಹೆಚ್ಚಿರುತ್ತದೆ.
- ಜೇನುತುಪ್ಪವೂ ತುಂಬಾನೇ ಒಳ್ಳೆಯದು, ಇದರಲ್ಲಿ ಆಂಟಿಸೆಪ್ಟಿಕ್ ಮತ್ತು ಆಂಟಿ ಬ್ಯಾಕ್ಟೀರಿಯಲ್ ವಿರೋಧಿ ಲಕ್ಷಣಗಳು ಹೆಚ್ಚಿದೇ.. ಹಾಗಾಗಿ ಸುಟ್ಟ ಗಾಯದ ಮೇಲೆ ಸ್ವಲ್ಪ ಜೇನುತುಪ್ಪವನ್ನು ಹಚ್ಚಿ ಕೆಲ ನಿಮಿಷಗಳ ಕಾಲ ಹಾಗೆ ಬಿಡುವುದರಿಂದ ಗಾಯದ ನೋವು ಕಡಿಮೆಯಾಗುತ್ತದೆ.