ತೆಂಗಿನ ಎಣ್ಣೆ ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಹೆಚ್ಚಾಗಿ ತೆಂಗಿನ ಎಣ್ಣೆಯನ್ನು ತಲೆ ಕೂದಲಿಗೆ ಬಳಸುತ್ತಾರೆ. ಕೂದಲಿಗೆ ಹಚ್ಚಿ ಸ್ನಾನ ಮಾಡುವುದರಿಂದ ಕಪ್ಪು ಕೂದಲು ದಟ್ಟವಾದ ಕೂದಲು ಹಾಗೂ ಕೂದಲು ಉದುರುತ್ತಿದ್ದರೆ ಅದು ನಿವಾರಣೆ ಆಗುತ್ತದೆ.
ಇನ್ನು ಕೆಲವರು ಈ ತೆಂಗಿನ ಎಣ್ಣೆಯನ್ನು ಅಡುಗೆ ಮಾಡುವಾಗ ಕೂಡ ಬಳಸ್ತಾರೆ. ಹಲವು ಕಡೆ ತೆಂಗಿನ ಎಣ್ಣೆ ಸರಿಯಾಗುವುದಿಲ್ಲ ಟೇಸ್ಟ್ ಸಿಗುವುದಿಲ್ಲ ಎಂದು ಕಾರಣ ಹೇಳುವವರು ಸಾಕಷ್ಟು ಜನ ಇದ್ದಾರೆ. ಆದರೆ ಕೋಸ್ಟಲ್ ರೀಜನ್ ನಲ್ಲಿ ತೆಂಗಿನ ಎಣ್ಣೆಯ ಬಳಕೆ ಜಾಸ್ತಿ ,ಕೊಬ್ಬರಿ ಎಣ್ಣೆ ಬಿಟ್ಟು ಬೇರೆ ಯಾವ ಎಣ್ಣೆಯನ್ನು ಅಡುಗೆಗೆ ಬಳಸುವುದಿಲ್ಲ..ಇದನ್ನ ಅಡುಗೆಯಲ್ಲಿ ಬಳಸುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳು ಇವೆ. ಏನೆಲ್ಲ ಪ್ರಯೋಜನಗಳು ಅನ್ನೋದು ಹೀಗಿದೆ.
ಎನರ್ಜಿ ಬೂಸ್ಟ್
ಅಡುಗೆಯಲ್ಲಿ ಹೆಚ್ಚು ತೆಂಗಿನ ಎಣ್ಣೆಯನ್ನು ಬಳಸುವುದರಿಂದ ನಮ್ಮಲ್ಲಿ ಎನರ್ಜಿಯನ್ನ ಬೂಸ್ಟ್ ಮಾಡುತ್ತದೆ . ಇಮ್ಯುನಿಟಿ ಪವರ್ ಅನ್ನು ಹೆಚ್ಚು ಮಾಡುತ್ತದೆ ಇದರಿಂದ ಯಾವುದೇ ಕಾಯಿಲೆಗಳು ಕೂಡ ಹೆಚ್ಚಾಗಿ ನಮ್ಮನ್ನು ಕಾಡುವುದಿಲ್ಲ.
ನೆನಪಿನ ಶಕ್ತಿಯ
ತೆಂಗಿನ ಎಣ್ಣೆನ ಹೆಚ್ಚು ಬಳಸುವುದರಿಂದ ಮೆಮೊರಿ ಪವರ್ ಜಾಸ್ತಿಯಾಗುತ್ತದೆ. ಇದು ಬ್ರೈನ್ ಫಂಕ್ಷನ್ ಗೆ ತುಂಬಾನೇ ಒಳ್ಳೆಯದು. ಅದಲ್ಲೂ ಕೂಡ ಪುಟ್ಟ ಮಕ್ಕಳಿಗೆ ತೆಂಗಿನ ಎಣ್ಣೆಯಲ್ಲಿ ಮಾಡಿದಂತಹ ಪದಾರ್ಥಗಳನ್ನ ತಿನಿಸುವುದರಿಂದ ಅವರ ಮೆಮೊರಿ ಪವರ್ ಜಾಸ್ತಿಯಾಗುತ್ತದೆ ಹಾಗೂ ಓದುವುದರಲ್ಲಿ ಫಾಸ್ಟ್ ಇರುತ್ತಾರೆ.
ಹಾರ್ಟ್ ಹೆಲ್ತ್
ಹೃದಯಕ್ಕೆ ಸಂಬಂಧಿಸಿದ ಯಾವುದೇ ಕಾಯಿಲೆಗಳನ್ನ ದೂರ ಮಾಡಲು ತೆಂಗಿನ ಎಣ್ಣೆ ಮಹತ್ವಪೂರ್ವ ಕೆಲಸವನ್ನು ಮಾಡುತ್ತದೆ. ಹೃದಯದ ಆರೋಗ್ಯವನ್ನು ಕಾಪಾಡುತ್ತದೆ ಬ್ಲಡ್ ಸ್ಲೋ ಮತ್ತು ಸರ್ಕ್ಯುಲೇಶನ್ ತುಂಬಾನೇ ಒಳ್ಳೆಯದು.
ಇಷ್ಟು ಮಾತ್ರವಲ್ಲದೇ ಚರ್ಮಕ್ಕೆ ತೆಂಗಿನ ಎಣ್ಣೆ ತುಂಬಾನೇ ಒಳ್ಳೆಯದು.ಚರ್ಮದಲ್ಲಿ ಯಾವುದೇ ಕಲೆಗಳಿದ್ದರೂ ದೂರ ಮಾಡುತ್ತದೆ. ಅಲರ್ಜಿ ಆಗಿದ್ದರೂ ,ಚರ್ಮ ರೋಗಕ್ಕು ಕೂಡ ಉತ್ತಮ ಮದ್ದು,ಹಾಗೂ ಮುಖದಲ್ಲಿರುವಂತಹ ಮೊಡವೆಗಳನ್ನ, ಪಿಗ್ಮೆಂಟೇಷನನ್ನ ಶಮನ ಮಾಡುತ್ತದೆ. ಡಾರ್ಕ್ ಸರ್ಕಲ್ ಗೆ ಬೆಸ್ಟ್ ರೆಮಿಡಿ ಅಂದ್ರೆ ತೆಂಗಿನ ಎಣ್ಣೆ. ಮಾತ್ರವಲ್ಲದೆ ಚಿಕ್ಕ ಮಕ್ಕಳಿಗೂ ಕೂಡ ಸ್ನಾನಕ್ಕಿಂತ ಮೊದಲು ತೆಂಗಿನ ಎಣ್ಣೆ ಹಚ್ಚಿ ಮಸಾಜ್ ಮಾಡಿ ನಂತರ ಸ್ನಾನ ಮಾಡಿಸುತ್ತಾರೆ ಇದು ತ್ವಚೆಯನ್ನ ಹೊಳೆಯುವಂತೆ ಮಾಡುತ್ತದೆ.