ನವದೆಹಲಿ : ಮಧ್ಯ ಪ್ರಾಚ್ಯದಲ್ಲಿ (Middle East) ಯುದ್ಧದ ಹಿನ್ನೆಲೆ ತೀವ್ರ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ. ಇರಾನ್ ತನ್ನ ನಾಯಕ ಆಯತೊಲ್ಲಾ ಅಲಿ ಖಮೇನಿ ಹತ್ಯೆಯ ಸೇಡನ್ನು ತೀರಿಸಿಕೊಳ್ಳಲು ಅಮೆರಿಕದೊಂದಿಗೆ ಸಂಬಂದ ಹೊಂದಿರುವ ಅಮೆರಿಕದ ಸೇನಾ ನೆಲೆಗಳಿರುವ ದೇಶಗಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದೆ. ಅಲ್ಲದೆ ಇಸ್ರೇಲ್‌ನ ಟೆಲ್ ಅವಿವ್ ಸೇರಿದಂತೆ ಹಲವು ನಗರಗಳ ಮೇಲೂ ಮಿಸೈಲ್ ಸುರಿಮಳೆ ಸುರಿಸುತ್ತಿದೆ. ಹೀಗಾಗಿ ಕೊಲ್ಲಿ ದೇಶಗಳಲ್ಲಿ ಕ್ಷಣ ಕ್ಷಣಕ್ಕೂ ಯುದ್ಧ ತೀವ್ರ ಸ್ವರೂಪ ಪಡೆದುಕೊಂಡಿದೆ.

ಈ ನಡುವೆಯೇ ಖಮೇನಿ ಕೊಲೆಗೆ ಕಾದು ಕೆಂಡವಾಗಿರುವ ಇರಾನ್ ಪ್ರತೀಕಾರದ ದಾಳಿಯನ್ನು ಮುಂದುವರೆಸಿದೆ. ಈ ನಡುವೆಯೇ ಇರಾನ್ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿರುವುದಾಗಿ ತಿಳಿಸಿದೆ. ವಿಶ್ವದ ಪ್ರಮುಖ ತೈಲ ಮಾರ್ಗವಾಗಿರುವ ಹಾರ್ಮುಜ್ ಜಲ ಸಂಧಿಯ ಮೂಲಕ ಹಾದುಹೋಗುವ ಯಾವುದೇ ಶತ್ರು ದೇಶಗಳ ಹಡಗುಗಳಿಗೆ ಬೆಂಕಿ ಹಚ್ಚುವುದಾಗಿ ಐಆರ್‌ಜಿಸಿ (Islamic Revolutionary Guard Corps)ನ ಸಲಹೆಗಾರ ಬ್ರಿಗೇಡಿಯರ್ ಜನರಲ್ ಸರ್ದಾರ್ ಇಬ್ರಾಹಿಂ ಜಬ್ಬಾರಿ ಈ ಉಗ್ರ ಎಚ್ಚರಿಕೆಯನ್ನು ನೀಡಿದ್ದಾರೆ.
ಟೆಹ್ರಾನ್ ಮೇಲೆ ಅಮೆರಿಕ- ಇಸ್ರೇಲ್ ದಾಳಿಗಳನ್ನು ಮುಂದುವರೆಸಿದೆ. ಆದರೆ ಈ ಪ್ರದೇಶದಿಂದ ಒಂದು ಹನಿ ತೈಲವೂ ಕೂಡ ಹೊರಹೋಗುವುದಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಇಸ್ರೇಲ್ ಪ್ರಧಾನಿ ನೆತನ್ಯಾಹು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಯಾರಾದರೂ ಈ ಜಲ ಸಂಧಿಯ ಮೂಲಕ ಹಾದು ಹೋಗಲು ಬಯಸಿದರೆ, ನಮ್ಮ ನೌಕಾಪಡೆ ಮತ್ತು ಸೈನ್ಯದಲ್ಲಿರುವ ನಮ್ಮ ತ್ಯಾಗದ ವೀರರು ಆ ಹಡಗುಗಳಿಗೆ ಬೆಂಕಿ ಹಚ್ಚುತ್ತಾರೆ ಎಂದು ಬ್ರಿಗೇಡಿಯರ್ ಗುಡುಗಿದ್ದಾರೆ.
ಇದನ್ನೂ ಓದಿ : ಕುಮಾರಸ್ವಾಮಿ ಷಡ್ಯಂತ್ರದಿಂದ ಪ್ರಜ್ವಲ್‌ನನ್ನು ಜೈಲಿಗೆ ಹಾಕಿಸಿದ್ದಾರೆ : ಕದಲೂರು ಉದಯ್ ಸ್ಫೋಟಕ ಆರೋಪ..!
ಫೆಬ್ರವರಿ 18 ರಂದು ಕೊಲ್ಲಿಯಲ್ಲಿ ಅಮೆರಿಕ ಯುದ್ಧನೌಕೆಗಳಿಗೆ ಬೆದರಿಕೆ ಹಾಕಿದ ನಂತರ, ವಾರಗಳಲ್ಲಿ ಇರಾನ್ ಎರಡನೇ ಬಾರಿಗೆ ಜಲ ಸಂಧಿಯನ್ನು ಮುಚ್ಚಿದೆ. ಪ್ರಮುಖವಾಗಿ ಇರಾನ್ ಈ 33 ಕಿಲೋ ಮೀಟರ್ ವ್ಯಾಪ್ತಿಯ ಕಿರಿದಾದ ಜಲಮಾರ್ಗವನ್ನು ನಿಯಂತ್ರಿಸುತ್ತದೆ, ಅಲ್ಲದೆ ಅಮೆರಿಕದ ಭೀಕರ ದಾಳಿಯನ್ನೂ ಲೆಕ್ಕಿಸದೆ ಇರಾನ್ ಎದೆಗಾರಿಕೆ ತೋರಿಸಲು ಮುಂದಾಗಿದೆ. ಈ ನಡುವೆಯೇ ಅಮೆರಿಕ ಈಗಾಗಲೇ 11 ಇರಾನಿನ ಯುದ್ಧನೌಕೆಗಳನ್ನು ಹೊಡೆದುರುಳಿಸಿದೆ ಎಂದು ಹೇಳಿಕೊಂಡಿದೆ.
ಅಬ್ಬಾಸ್ ಬಂದರಿನ ಬಳಿ ಇರಾನಿನ ತೈಲ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಈ ಜಲಸಂಧಿಯಲ್ಲಿ ಟ್ಯಾಂಕರ್ ಉರಿಯುತ್ತಿರುವುದನ್ನು ನಮ್ಮ ಉಪಗ್ರಹ ಚಿತ್ರಗಳು ಸೆರೆಹಿಡಿದಿವೆ. ಐಆರ್‌ಜಿಸಿ ಡ್ರೋನ್ ದಾಳಿಯಿಂದ ಇಸ್ರೇಲ್ ಇಂಧನ ಟ್ಯಾಂಕರ್‌ಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಇರಾನ್ ಹೇಳಿದೆ.







