ಬಿಗ್ ಬಾಸ್ ಕನ್ನಡ ಸೀಸನ್ 12 ದಿನದಿಂದ ದಿನಕ್ಕೆ ಹೆಚ್ಚೆಚ್ಚು ಮನೋರಂಜನೆ ನೀಡುತ್ತಿದ್ದು, ಈ ವಾರ ಅತಿಥಿಗಳ ಆಗಮನದಿಂದ ಬಿಗ್ ಬಾಸ್ ಮನೆ ಮತ್ತಷ್ಟು ಕಳೆ ಕಟ್ಟಿದೆ.

ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಗಳಾದ ತ್ರಿವಿಕ್ರಂ, ಮೋಕ್ಷಿತಾ ಪೈ, ರಜತ್, ಚೈತ್ರಾ ಕುಂದಾಪುರ ಹಾಗೂ ಉಗ್ರಂ ಮಂಜು ಈ ವಾರ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು, ಶೀಘ್ರದಲ್ಲೇ ಹಸೆಮಣೆ ಏರಲಿರುವ ಉಗ್ರಂ ಮಂಜು ಅವರ ಬ್ಯಾಚುಲರ್ ಪಾರ್ಟಿ ಆಚರಿಸಿದ್ದಾರೆ. ಇಂದು ಬಿಗ್ ಬಾಸ್ ಮನೆಯಲ್ಲಿ ಈ ಐವರ ಕೊನೆಯ ದಿನವಾಗಿದ್ದು, ಅತಿಥಿಗಳಾಗಿ ಆಗಮಿಸಿರುವ ಮಾಜಿ ಸ್ಪರ್ಧಿಗಳು ಬಿಗ್ ಬಾಸ್ ತಮಗೆ ಏನು ನೀಡಿತು ಎನ್ನುವುದರ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ.

ಇಂದಿನ ಪ್ರೋಮೋದಲ್ಲಿ ರಜತ್ ʼನಾವು ಸತ್ತ ಮೇಲೂ ನಮ್ಮ ಮುಂದಿನ ಪೀಳಿಗೆಯವರು ನೋಡುವಂತಹ ನೆನಪು ಬಿಗ್ ಬಾಸ್ ಕೊಟ್ಟಿದೆʼ ಎಂದಿದ್ದಾರೆ. ಉಗ್ರಂ ಮಂಜು ಬಿಗ್ ಬಾಸ್ ಬಳಿಕ ತಮಗೆ ಸಿಕ್ಕ ಪ್ರೀತಿ ಬಗ್ಗೆ ವಿವರಿಸಿದರೆ, ತ್ರಿವಿಕ್ರಮ್ ʼನನ್ನ ಕರ್ಮಗಳನ್ನು ಕಳೆದ ಜಾಗ ಇದುʼ ಎಂದಿದ್ದಾರೆ. ಇನ್ನು ಚೈತ್ರಾ ಕುಂದಾಪುರ ʼಯಾರಿಗೆ ಏನು ಕೊಟ್ಟಿದೆಯೋ ಗೊತ್ತಿಲ್ಲ. ನನಗೆ ಪುನರ್ಜನ್ಮ ಕೊಟ್ಟಿದೆʼ ಎಂದು ಜೋರಾಗಿ ಅತ್ತಿದ್ದಾರೆ. ಇಂದಿನ ಸಂಚಿಕೆಯಲ್ಲಿ ಏನಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.













