ಜೆಡಿಎಸ್‌ನ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕ ಸುರೇಶ್‌ಬಾಬು ಅವರನ್ನು ನೇಮಕ ಮಾಡಲಾಗಿದೆ. ಈ ಬೆಳವಣಿಗೆಯಿಂದ ಹಿರಿಯ ಶಾಸ ಜಿ.ಟಿ ದೇವೇಗೌಡರ ನಿಗಿನಿಗಿ ಕೆಂಡವಾಗಿದ್ದಾರೆ. ಕೇಂದ್ರ ಸಚಿವ ಕುಮಾರಸ್ವಾಮಿ ನಡೆಗೆ ತೀವ್ರ ಬೇಸರ ಹೊರಹಾಕಿದ್ದು, ವಿಧಾನಸಭೆ ಅಧಿವೇಶವನಕ್ಕೂ ಬಾರದೇ ದೂರ ಉಳಿದಿದ್ದಾರೆ. ಜೊತೆಗೆ ಕೋರ್‌ಕಮಿಟಿ ಅಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ಕೊಡುವ ಚಿಂತನೆಯಲ್ಲಿ ಇದ್ದಾರೆ ಎನ್ನಲಾಗಿದೆ.
ಈಗಾಗಲೇ ಈ ಹಿಂದೆ ಕುಮಾರಸ್ವಾಮಿ ವಿರುದ್ಧ ಜಿ.ಟಿ ದೇವೇಗೌಡ ಬಂಡೆದ್ದು ಪಕ್ಷದಿಂದ ಹೊರ ಹೋಗಲು ಮುಂದಾಗಿದ್ದರು. ಆಗಲೂ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಮನವೊಲಿಸಿದ್ರು. ಈಗಲೂ ಖುದ್ದು ಮಾಜಿ ಪ್ರಧಾನಿ ದೇವೇಗೌಡರೇ ಮನವೊಲಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.. ಆದರೆ ಈ ಎಲ್ಲಾ ಬೆಳವಣಿಗೆಗೆ ಕ.ಆರ್ ನಗರ ಮಾಜಿ ಶಾಸಕ ಸಾರಾ ಮಹೇಶ್ ಮಾಡಿರುವ ರಾಜಕೀಯ ಕುತಂತ್ರ ಅನ್ನೋದು ಜಿ.ಟಿ ದೇವೇಗೌಡರ ಆರೋಪ. ಹೀಗಾಗಿ ಸಾರಾ ಮಹೇಶ್ ವಿರುದ್ಧವೂ ಜಿ.ಟಿ ದೇವೇಗೌಡರು ಅಸಮಾಧಾನಗೊಂಡಿದ್ದಾರೆ ಎನ್ನುವುದು ತಿಳಿದುಬಂದಿದೆ
ಸುರೇಶ್ ಬಾಬು ಪರ ಸಾ.ರಾ ಮಹೇಶ್ ಲಾಬಿ ಮಾಡಿದ್ದು, ಆಪ್ತನ ಒತ್ತಡಕ್ಕೆ ಮಣಿದು ಸುರೇಶ್ ಬಾಬುಗೆ ಕುಮಾರಸ್ವಾಮಿ ಮಣೆ ಹಾಕಿದ್ದಾರೆ ಎನ್ನಲಾಗ್ತಿದೆ. ಮೈಸೂರು ಜಿಲ್ಲೆಯ ಆಧಿಪತ್ಯ ಕೈತಪ್ಪುವ ಭೀತಿಯಿಂದ ಸಾ.ರಾ ಮಹೇಶ್ ಸುರೇಶ್ ಬಾಬು ಪರ ಕುಮಾರಸ್ವಾಮಿ ಬಳಿ ಲಾಬಿ ಮಾಡಿದ್ದಾರೆ ಎನ್ನುವುದು GT ದೇವೇಗೌಡರ ಆಪ್ತ ಬಳಗದ ಮಾತು. ಜಿ.ಟಿ ದೇವೇಗೌಡರಿಗೆ ಅವಕಾಶ ಕೊಟ್ಟರೆ ಪಕ್ಷದಲ್ಲಿ ಸ್ಟ್ರಾಂಗ್ ಆಗಲಿದ್ದು, ಮೈಸೂರು ಜೆಡಿಎಸ್‌ನಲ್ಲಿ ಅವರೇ ಪಾರುಪತ್ಯ ಸಾಧಿಸ್ತಾರೆ ಅನ್ನೋ ಭೀತಿ ಇತ್ತು. ಇದೇ ಕಾರಣಕ್ಕೆ ಜಿಟಿ ದೇವೇಗೌಡಗೆ ಸಾ.ರಾ ಚೆಕ್‌ಮೆಟ್ ನೀಡಿದ್ದಾರೆ ಎನ್ನಲಾಗ್ತಿದೆ.
JDS ಪಕ್ಷದ ವರಿಷ್ಠರ ತೀರ್ಮಾನದಂತೆ ನನ್ನನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ನೇಮಕ ಮಾಡಲಾಗಿದೆ. ಜನಪರವಾದ ವಿಚಾರಗಳ ಬಗ್ಗೆ ಸದನದಲ್ಲಿ ಹೋರಾಟ ಮಾಡುತ್ತೇನೆ. ಜಿ.ಟಿ.ದೇವೆಗೌಡರನ್ನ ವಿಶ್ವಾಸಕ್ಕೆ ಪಡೆದು ಕೆಲಸ ಮಾಡ್ತೀನಿ ಎಂದಿದ್ದಾರೆ ಸುರೇಶ್ ಬಾಬು. ಆದರೆ ಜಿ.ಟಿ ದೇವೇಗೌಡರ ಅಸಮಾಧಾನ ಅನಮ್ನೋದು ಸತ್ಯ. ಕುಮಾರಸ್ವಾಮಿ ಹಾಗು ದೇವೇಗೌಡರು ಯಾವ ರೀತಿಯಲ್ಲಿ ಸಮಾಧಾನ ಮಾಡ್ತಾರೆ ಅನ್ನೋದನ್ನು ಕಾದು ನೋಡಬೇಕು. ಈ ನಡುವೆ ಸದನದಲ್ಲಿ ಕುಮಾರಸ್ವಾಮಿ ಕುಟುಂಬದ ವಿಚಾರಗಳನ್ನು ಹಿಡಿದು ಜೆಡಿಎಸ್ ಅಣಿಯಲು ಕಾಂಗ್ರೆಸ್ ಪ್ಲ್ಯಾನ್ ಮಾಡಿದ್ದು, ಸುರೇಶ್ ಬಾಬು ಆಯ್ಕೆ ಸಮರ್ಥನಿಯವೋ ಅಮರ್ಥನಿಯವೋ ಅನ್ನೋದು ರಾಜ್ಯದ ಜನರ ಎದುರು ತೆರೆದುಕೊಳ್ಳಲಿದೆ.
ಕೃಷ್ಣಮಣಿ