ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬಿಜೆಪಿ ಕಾರ್ಯಕರ್ತರ ಮೇಲೆ ಕಾನೂನು ದೌರ್ಜನ್ಯ ಹೆಚ್ಚಾಗುತ್ತಿದೆ ಎಂದು ಬಿಜೆಪಿ ನಾಯಕರು ಆರೋಪ ಮಾಡುತ್ತಲೇ ಬಂದಿದ್ದರು. ಇದೀಗ ಕಾಂಗ್ರೆಸ್ ಸರ್ಕಾರಕ್ಕೆ ಮೊದಲ ಸೆಡ್ಡು ನೀಡಿರುವ ಬಿಜೆಪಿ ತನ್ನ ಪಕ್ಷದ ಕಾರ್ಯಕರ್ತರ ಸುರಕ್ಷತೆಗೆಂದು ಕಾನೂನು ಸಹಾಯವಾಣಿಯನ್ನು ಉದ್ಘಾಟನೆ ಮಾಡಿದೆ.

ಸಂಸದ ತೇಜಸ್ವಿ ಸೂರ್ಯ ಬಿಜೆಪಿ ಕಾರ್ಯಕರ್ತ ರಕ್ಷಣೆಗೆಂದು ಮಾಡಲಾದ ಕಾನೂನು ಸಹಾಯವಾಣಿಯನ್ನು ಉದ್ಘಾಟನೆ ಮಾಡಿದರು. ನಮ್ಮ ಕಾರ್ಯಕರ್ತರ ರಕ್ಷಣೆಗೆ ಇನ್ಮೇಲೆ ವಕೀಲರ ತಂಡವೇ ಇರಲಿದೆ ಎಂದು ಹೇಳಿದರು.
ನಮ್ಮ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ಗಳನ್ನು ಹಾಕೋದು, ಹಿಂದುತ್ವದ ಪರ ಮಾತನಾಡಿದವರಿಗೆ ಕಾನೂನು ದೌರ್ಜನ್ಯ ಮಾಡುವುದು, ಈ ರೀತಿ ಏನೆ ಮಾಡಿದರೂ ಕಾನೂನು ಸಹಾಯವಾಣಿಯ ಮೂಲಕ ನಾವು ಕಾರ್ಯಕರ್ತರ ಪರವಾಗಿ ನಿಲ್ಲಲಿದ್ದೇವೆ ಎಂದು ಹೇಳಿದ್ದಾರೆ.






