ಇನ್ನೇನು ಕೆಲವೇ ಕೆಲವು ದಿನಗಳಲ್ಲಿ 2023ರ ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದೆ.(karnataka assembly election) ರಾಜ್ಯದಲ್ಲಿ ಚುನಾವಣಾ ರಣಕಹಳೆ ಮೊಳಗಿದ್ದು, ಈಗಾಗಲೇ ಪಕ್ಷದ ನಾಯಕರು, ಮುಖಂಡರು ಅಖಾಡಕ್ಕಿಳಿದು, ಭರ್ಜರಿ ಮತಬೇಟೆ ನಡೆಸುತ್ತಿದ್ದಾರೆ. ಹನೂರು ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ಪ್ರೀತಮ್ ನಾಗಪ್ಪ(preetam nagappa) ಭಾರತೀಯ ಜನತಾ ಪಕ್ಷದಿಂದ(bharatiya janata party) ಸ್ಪರ್ಧಿಸುತ್ತಿದ್ದಾರೆ. ಈ ಸಲ ಪ್ರೀತಮ್ ನಾಗಪ್ಪ ತಮ್ಮನ್ನು ಈ ಬಾರಿ ಚುನಾವಣೆಯಲ್ಲಿ(election) ಮತ ಹಾಕಿ ಗೆಲ್ಲಿಸುವಂತೆ ಹನೂರು ವಿಧಾನಸಭಾ ಕ್ಷೇತ್ರದ ಜನತೆಯಲ್ಲಿ ಕೇಳಿಕೊಂಡಿದ್ದಾರೆ. ʻ ಹನೂರು (hanur)ಕ್ಷೇತ್ರದ ವ್ಯಾಪ್ತಿಯಲ್ಲಿ ಮಲೆ ಮಹದೇಶ್ವರ, ಚಿಕ್ಕಲೂರು ಸಿದ್ದಪ್ಪಾಜಿ ಹಾಗೂ ಇನ್ನಿತರ ಪವಾಡ ಪುರುಷರನ್ನು ಆರಾಧಿಸುವ ಜನರೇ ಹೆಚ್ಚು. ಈ ಜನರು ಹೆಚ್ಚಾಗಿ ಕೃಷಿಯನ್ನು ಅವಲಂಬಿಸಿದ್ದಾರೆ. ಜಮೀನು ಹೊಂದಿರುವವರು ಹಾಗೂ ಕೂಲಿ ಕಾರ್ಮಿಕರ ನಡುವೆ ಮಾನವೀಯ ಸಂಬಂಧವಿದೆ. ಭಾವನಾತ್ಮಕವಾಗಿ ಸ್ಪಂದಿಸುವ ಈ ಭಾಗದ ಜನರು ಕೊಟ್ಟ ಮಾತಿಗೆ ಬೆಲೆ ಕೊಟ್ಟಷ್ಟೇ, ಮಾತಿಗೆ ತಪ್ಪಿದವರನ್ನು ಕ್ಷಣ ಮಾತ್ರದಲ್ಲಿ ದೂರ ತಳ್ಳುವುದಕ್ಕೆಯೋಚನೆ ಮಾಡುವವರಲ್ಲ. ಈ ಜನರು ಹೆಚ್ಚಾಗಿ ಸತ್ಯದ ಮಾತಿಗೆ ಕಟ್ಟು ಬೀಳುವವರು ಎಂಬುದು ಅಷ್ಟೇ ಸತ್ಯ. ಮಲೆ ಮಹದೇಶ್ವರ, ಸಿದ್ದಪ್ಪಾಜಿ ದೊಡ್ಡ ದೊಡ್ಡ ಮಠಾಧೀಶರುಗಳು ನಡೆದಾಡಿದ ಈ ನೆಲದಲ್ಲಿ ಸುಳ್ಳು, ಮೋಸ, ವಂಚನೆ, ಹಣ-ಅಂತಸ್ತಿನ ದರ್ಪ, ದುಷ್ಟರ ಆಡಳಿತ ಗಟ್ಟಿಯಾಗಿ ಉಳಿದದ್ದೇ ಇಲ್ಲ. ಗಡಿ ನಾಡಿನ ಎಲ್ಲಾ ಧರ್ಮ, ಜಾತಿಯ ಜನರು ಒಂದಿಲ್ಲೊಂದು ಕಾರಣಕ್ಕೆ ಇಂತಹ ನಡೆ-ನುಡಿಗೆ ಕಟ್ಟು ಬೀಳುತ್ತಾರೆ. ಅಂತಹ ಜನರು ಇಲ್ಲಿಯವರೆಗೂ ಸಾಕಷ್ಟು ಪ್ರಮಾಣಿಕ ರಾಜಕಾರಣಿಯನ್ನು ನಾಡಿಗೆ ಕೊಡುಗೆಯಾಗಿ ನೀಡಿದ್ದಾರೆ. ಸಚಿವರಾಗಿಯೂ ಸರಳ ಸಜ್ಜನಕೆ ಗೆ ಹೆಸರಾಗಿದ್ದಾರೆ. ಪ್ರಾಮಾಣಿಕತೆಯನ್ನೇ ನಡೆಯಾಗಿಸಿಕೊಂಡಿದ್ದ ದಿವಂಗತ ಎಚ್ ನಾಗಪ್ಪ ಅವರೇ ಇದಕ್ಕೆ ದೊಡ್ಡ ಉದಾಹರಣೆ. ಅಂತಹ ಪ್ರಾಮಾಣಿಕರು ಹೇಗೆ ಚುನಾವಣೆ ನಡೆಸುತ್ತಿದ್ದರು ಎಂದು ಊಹಿಸಿಕೊಂಡು ಇಂದಿನ ರಾಜಕಾರಣಿಗಳ ದರ್ಪದ ನಡೆಯನ್ನು ಹಾಗೂ ದುಡ್ಡಿನ ಚಮತ್ಕಾರದಿಂದ ತಮ್ಮ ಜನರ ಒಗ್ಗಟ್ಟನ್ನು ಹೊಡೆಯುತ್ತಿರುವುದನ್ನು ನೋಡಿದರೆ ಭಯವಾಗುತ್ತದೆ

ಹನೂರು ವಿಧಾನಸಭಾ ಕ್ಷೇತ್ರದಿಂದಲೂ ಹಲವು ಪ್ರಾಮಾಣಿಕ ರಾಜಕಾರಣಿಯನ್ನು ಜನರು ಆಯ್ಕೆ ಮಾಡಿದ್ದಾರೆ. ಪ್ರಾಮಾಣಿಕ ಮುಖವಾಡ ತೊಟ್ಟವರನ್ನು ಒಮ್ಮೊಮ್ಮೆ ಬೆಂಬಲಿಸಿದ್ದಾರೆ. ಈ ಬಾರಿ ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸಿರುವ ಪ್ರೀತಮ್ ನಾಗಪ್ಪನವರನ್ನು(preetam nagappa) ತಮ್ಮ ಪ್ರಾಮಾಣಿಕತೆ ಹಾಗೂ ಸಾಮಾನ್ಯರಲ್ಲೇ ಸಾಮಾನ್ಯರಂತೆ ಉಳಿಯುವ ಗುಣದಿಂದ ನಮ್ಮೆಲ್ಲರ ನಿಮ್ಮೆಲ್ಲರ ಮನಸ್ಸಲ್ಲಿದ್ದಾರೆ . ಆದರೆ ದುರದೃಷ್ಟವಶಾತ್ ಅವರು ಹಲವು ಬಾರಿ ಸೋಲನ್ನು ಉಂಡರು. ಅವರ ನಡೆ-ನುಡಿಯಲ್ಲಿ ಮಲೆ ಮಹದೇಶ್ವರ , ಸಿದ್ದಪ್ಪಾಜಿ ಪರಂಪರೆಯ ಸಮಾನತೆಯ ಸಿದ್ಧಾಂತ ಅಡಗಿದೆ. ಅವರು ಇಂದಿಗೂ ಜನರೊಂದಿಗೆ ಇರುವವರು ಎಂಬುದಕ್ಕೆ ಕ್ಷೇತ್ರದ ಪ್ರತಿಯೊಬ್ಬರ ಮನೆ-ಮನಗಳಿಗೆ ಸಾಗಿ ಮತಯಾಚನೆ ಮಾಡುತ್ತಿರುವುದೇ ಸಾಕ್ಷಿ. ಹನೂರು ವಿಧಾನಸಭಾ ಕ್ಷೇತ್ರದ ಪ್ರಜ್ಞಾವಂತ ಮತದಾರರೇ ಎಚ್ಚರ ಶ್ರವಣ ದೊರೆಯ ದರ್ಪವನ್ನು ಮಟ್ಟ ಹಾಕಿದ ಮಲೆ ಮಹದೇಶ್ವರನ ನೆಲ ಇದು. ಪಂಚಾಳರ ದುರಹಂಕಾರಕ್ಕೆ ಅಂತ್ಯವಾಡಿದ ಮಂಟೇಸ್ವಾಮಿ ಸಿದ್ದಪ್ಪಾಜಿ ನಡೆದಾಡಿದ ಪುಣ್ಯ ಭೂಮಿ ಇದು. ಇಲ್ಲಿ ಮೋಸ, ವಂಚನೆ, ದರ್ಪ, ಕುತಂತ್ರ ಹೆಚ್ಚು ಕಾಲ ಉಳಿಯುವುದಿಲ್ಲ. ದರ್ಪದ ಶ್ರವಣ ದೊರೆ ಮತ್ತೆ ಗೆಲ್ಲದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ, ಕರ್ತವ್ಯ.ಕ್ಷೇತ್ರದ ಮನೆ ಬಾಗಿಲಿಗೆ ಬರುವ ಪ್ರಜಾ ಪ್ರಭುತ್ವದ ಪರವಾದವರನ್ನು ಆಯ್ಕೆ ಮಾಡುತ್ತೀರೋ ಹೊರತು ಬೀದಿಯಲ್ಲಿ ಹಣ ಬಿಸಾಡಿ ನಮ್ಮನ್ನು ಖರೀದಿಸುತ್ತೇನೆ ಎನ್ನುವ ಸರ್ವಾಧಿಕಾರಿ ಧೋರಣೆಯನ್ನು ಬೆಂಬಲಿಸುತ್ತೀರೋ ನಿಮ್ಮದೇ ಆಯ್ಕೆ ಅಂತ ಹನೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ(BJP candidate) ಪ್ರೀತಂ ನಾಗಪ್ಪ ಮನವಿ ಮಾಡಿಕೊಂಡಿದ್ದಾರೆ.
