ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ತುಂಬಾನೇ ಜೋರಾಗಿ ನಡಿತಾ ಇದೆ. ಎಲ್ಲಾ ಕಂಟೆಸ್ಟಂಟ್‌ಗಳ ಭಾವಚಿತ್ರವನ್ನು ಇಟ್ಟಿರುತ್ತಾರೆ ಒಬ್ಬೊಬ್ಬರಾಗಿಯೇ ಬಂದು ಬಾಣಕ್ಕೆ ಅವರು ನಾಮಿನೇಟ್ ಮಾಡಬೇಕು ಎಂದುಕೊಂಡಿರುವ ವ್ಯಕ್ತಿಯ ಚಿತ್ರವನ್ನ ಚುಚ್ಚಿ , ಮುಖ್ಯದ್ವಾರದಿಂದ ಹೊರಗೆ ಹೋಗುವಂತೆ ಬಾಣವನ್ನ ಬಿಡಬೇಕು ಹಾಗೂ ಕಾರಣವನ್ನು ನೀಡಬೇಕು.

ಕಂಟೆಸ್ಟೆಂಟ್ಗಳು ಹೇಳಿದಂತಹ ಕಾರಣಗಳು ಮಹಾರಾಜರಿಗೆ ಒಪ್ಪಿಗೆ ಆದರೆ ಅವರು ನಾಮಿನೇಟ್ ಮಾಡಿ ಬಾಣವನ್ನ ಬಿಡಬಹುದು. ಇನ್ನು ಹನುಮಂತ ಶೋಭಾ ಶೆಟ್ಟಿ ಅವರ ಹೆಸರನ್ನು ಆಯ್ಕೆ ಮಾಡಿ ಈ ವಾರ ಅವರು ನಮ್ಮ ತಂಡದ ಕ್ಯಾಪ್ಟನ್ ಆಗಿದ್ದರು ಆದರೆ ನನಗೆ ಅವರ ಬುದ್ಧಿವಂತಿಕೆ ಇಷ್ಟ ಆಗಿಲ್ಲ, ಕಾರಣ ಅವರಿಗಿಂತ ಹೆಚ್ಚಾಗಿ ಮಂಜಣ್ಣ ಮತ್ತು ರಜತ್ ಹೇಳಿದಂತೆ ತಂಡ ಆಟವಾಡುತ್ತಿತ್ತು ಎಂಬ ಕಾರಣವನ್ನು ನೀಡುತ್ತಾರೆ.

ಇದಕ್ಕೆ ಶೋಭಾ ಶೆಟ್ಟಿ ಹಾಗಾದರೆ ನಿಮ್ಮ ಬುದ್ಧಿವಂತಿಕೆ ಎಲ್ಲಿ ಹೋಗಿತ್ತು ಎಂಬ ಪ್ರಶ್ನೆಯನ್ನು ಮಾಡುತ್ತಾರೆ ಹಾಗೂ ಹನುಮಂತ ಅವರು ಕೊಟ್ಟ ಕಾರಣವನ್ನು ನಾನು ಒಪ್ಪುವುದಿಲ್ಲ ಎಂದು ಹೇಳಿದಾಗ ಮಹಾರಾಜ ಮಂಜೂರು ಹನುಮಂತ ಕೊಟ್ಟ ಕಾರಣವನ್ನು ನಾನು ಒಪ್ಪುತ್ತೇನೆ ನೀವು ನಾಮಿನೇಟ್ ಮಾಡಬಹುದು ಎಂದು ಹೇಳುತ್ತಾರೆ.

ಹಾಗೂ ಶೋಭಾ ಶೆಟ್ಟಿ ನೀವು ನಿಮ್ಮ ಸ್ಥಳದಲ್ಲಿ ಹೋಗಿ ಕುಳಿತುಕೊಳ್ಳ ಬಹುದು ಎಂದು ಮಂಜೂ ಹೇಳಿದಾಗ ,ಶೋಭಾ ಅವರು ನಾನು ಹೋಗಲ್ಲ ನಾನು ಇಲ್ಲೇ ಇರ್ತೀನಿ ಎಂಬ ವಾದವನ್ನು ಮಾಡ್ತಾರೆ,ಇದಕ್ಕೆ ಮಂಜು ಫುಲ್ ಗರಂ ಆಗಿ ಇದು ಬಿಗ್ ಬಾಸ್ ಸಾಮ್ರಾಜ್ಯದ ಮಹಾ ಪ್ರಭುಗಳ ಆಜ್ಞೆ ನೀವು ಪಾಲಿಸಲೇಬೇಕು ಎನ್ನುತ್ತಾರೆ.
ಒಟ್ಟಿನಲ್ಲಿ ಬಿಗ್ ಬಾಸ್ ಮನೆಯ ನಾಮಿನೇಷನ್ ಪ್ರಕ್ರಿಯೆಯಿಂದ ಸ್ಪರ್ಧಿಗಳ ನಡುವೆ ರೋಷ ಆವೇಶ ಹಾಗೂ ಜಗಳ ವಾರದಿಂದ ವಾರಕ್ಕೆ ಹೆಚ್ಚಾಗುತ್ತಿದೆ.










