ಬಿಗ್ ಬಾಸ್ ನಲ್ಲಿ ವೀಕ್ ಎಂಡ್ ಬಂತು ಅಂದ್ರೆ ಅಂದ್ರೆ ಸ್ಪರ್ಧಿಗಳಿಗೆ ಒಂದು ರೀತಿ ಖುಷಿ ಹಾಗೂ ಭಯ ಎರಡು ಕೂಡ ಇರುತ್ತದೆ.ಅದರಲ್ಲು ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್ನಲ್ಲಿ ಕಿಚ್ಚ ಇಡಿ ವಾರ ಯಾರು ತಪ್ಪು ಮಾಡ್ತಾರೆ ಅವರಿಗೆ ಕ್ಲಾಸ್ ತಗೊಳೋದು ಪಕ್ಕಾ..

ಕೊಳವೆ ಟಾಸ್ಕ್ ಆಡುವಾಗ ರಜತ್ ಹಾಗೂ ಗೋಲ್ಡ್ ಸುರೇಶ್ ನಡುವೆ ನಡೆದ ಜಗಳದಲ್ಲಿ ರಜತ್ ಅವರು ಬಳಸಿದ ಪದಗಳು ಸರಿಯಲ್ಲ ಎಂಬುದು ಕಂಟೆಸ್ಟೆಂಟ್ಗಳ ಮಾತು ಒಂದೆಡೆಯಾತ್ರೆ ಹೊರಗಡೆ ಪ್ರೇಕ್ಷಕರು ಕೂಡ ಅದನ್ನೇ ಕಾಮೆಂಟ್ ಮೂಲಕ ತಿಳಿಸುತ್ತಿದ್ದರು.

ಹಾಗೂ ವೀಕೆಂಡ್ ಎಪಿಸೋಡ್ ನಲ್ಲಿ ಕಿಚ್ಚ ಅವರು ಇದರ ಬಗ್ಗೆ ರಜತ್ ಅವರಿಗೆ ತಿಳಿ ಹೇಳಬೇಕು ಎಂಬ ಚರ್ಚೆಗಳು ಕೂಡ ಹೊರಗಡೆ ನಡಿತಾ ಇತ್ತು. ಸದ್ಯ ಬಿಗ್ ಬಾಸ್ ನ ಪ್ರೊಮೋ ಅವರ ಬಿದ್ದಿದ್ದು ರಜತ್ ಅವರಿಗೆ ಕಿಚ್ಚ ಸುದೀಪ್ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಕಿಚ್ಚ ಅವರ ಮಾತಿಗೆ ರಜತ್ ಗಪ್ ಚುಪ್.

ಹಾಗೂ ಕೊನೆಯಲ್ಲಿ ರಜತ್ ತಪ್ಪಾಯ್ತು ಇನ್ಮುಂದೆ ಹೀಗೆ ಮಾಡಲ್ಲ ಎಂದು ಹೇಳಿದಾಗ, ಕಿಚ್ಚ ಸುದೀಪ್ ಅವರು ಇನ್ನು ಮುಂದೆ ಹೀಗೆ ಮಾಡಿದ್ರೆ ಮನೆಯಿಂದ ನೀವು ಹೊರ ಹೋಗಬೇಕಾಗುತ್ತೆ ಎಂಬ ವಾರ್ನಿಂಗ್ ಕೂಡ ನೀಡುತ್ತಾರೆ.
ಕಳೆದ ವಾರ ಕಿಚ್ಚನ ಚಪ್ಪಾಳೆ ಗೋಲ್ಡ್ ಸುರೇಶ್ ಅವರಿಗೆ ಸಿಕ್ಕಿತ್ತು, ಆದರೆ ಈ ವಾರ ಕಿಚ್ಚನ ಚಪ್ಪಾಳೆ ಯಾರಿಗೆ ಸಿಗಬಹುದು ಎಂಬ ಚರ್ಚೆಗಳು ಕೂಡ ಆಗ್ತಾ ಇದೆ. ಈ ನಡುವೆ ಪ್ರೇಕ್ಷಕರು ಮೋಕ್ಷಿತಾಗೆ ಸಿಗ್ಬೇಕು ಎಂದು ಒಂದೆಡೆ ಹೇಳಿದ್ರೆ.ಮಂಜು ಅವರಿಗೆ ಸಿಗ್ಬೇಕು ಎಂದು ಮತ್ತಷ್ಟು ಜನ ಪ್ರೇಕ್ಷಕರು ಕಾಮೆಂಟ್ ಮೂಲಕ ತಿಳಿಸಿದ್ದಾರೆ.

ಒಟ್ಟಿನಲ್ಲಿ ಇವತ್ತಿನ ಎಪಿಸೋಡ್ ನಲ್ಲಿ ಕಿಚ್ಚ ರಜತ್ ಅವರಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದು, ಇತರೆ ಸ್ಪರ್ಧಿ ಗಳಿಗೆ ಹಾಗೂ ಪ್ರೇಕ್ಷಕರಿಗೆ ಖುಷಿ ತಂದಿದೆ.