ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದೀಗ ತನ್ನ ಗ್ರಾಹಕರಿಗೆ ಮಹತ್ವದ ಎಚ್ಚರಿಕೆ ನೀಡಿದೆ. ಬ್ಯಾಂಕ್ ಗ್ರಾಹಕರು ಮೋಸ ಹೋಗಬಾರದೆಂದು ಎಸ್‌ಬಿಐ ಈ ಎಚ್ಚರಿಕೆ ನೀಡಿದೆ. ಇತ್ತೀಚಿಗೆ ರಿವಾರ್ಡ್ ಪಾಯಿಂಟ್ಸ್ (Reward Points) ಹೆಸರಿನಲ್ಲಿ ಗ್ರಾಹಕರನ್ನು ಮೋಸ ಮಾಡಲಾಗುತ್ತಿದೆ ಎಂದು SBI ತಿಳಿಸಿದೆ.

ನಕಲಿ ಸಂದೇಶಗಳ ಬಗ್ಗೆ ಎಸ್‌ಬಿಐ ಎಚ್ಚರಿಸಿದೆ. ಮೆಸೇಜ್‌ಗೆ ಬರುವ ಈ ರೀತಿಯ ಸಂದೇಶಗಳ ಯಾವುದೇ ಲಿಂಕ್ ಕ್ಲಿಕ್ ಮಾಡಬೇಡಿ ಎಂದು ಎಸ್‌ಬಿಐ ತನ್ನ ಗ್ರಾಹಕರಿಗೆ ಅಲರ್ಟ್ ನಡಿದೆ. ಎಸ್‌ಬಿಐ ರೀತಿಯ ಮೆಸೇಜ್ ಮೂಲಕ ಯಾವುದೇ ಲಿಂಕ್ ಕಳುಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಮೋಸಗಾರರು ಎಸ್‌ಎಂಎಸ್ ಅಥವಾ ವಾಟ್ಸಾಪ್ ಮೂಲಕ ಗ್ರಾಹಕರಿಗೆ ಸಂದೇಶ ಕಳುಹಿಸುತ್ತಾರೆ. ನಿಮ್ಮ ಖಾತೆಯಲ್ಲಿ ಸಾವಿರಾರು ರಿವಾರ್ಡ್ ಪಾಯಿಂಟ್ಸ್ಗಳಿವೆ, ಈ ಪಾಯಿಂಟ್ಗಳ ಬದಲಿಗೆ ಹಣ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ಎಂದು ಆಸೆ ಹುಟ್ಟಿಸುತ್ತಾರೆ. ಪಾಯಿಂಟ್ಸ್ ಪಡೆದುಕೊಳ್ಳಬೇಕು ಎಂದು ಗ್ರಾಹಕರು ಲಿಂಕ್ ಕ್ಲಿಕ್ ಮಾಡಿದಾಗ, ಅವರ ಡೆಬಿಟ್ ಕಾರ್ಡ್ ವಿವರಗಳನ್ನು ನಮೂದಿಸಲು ಕೇಳಲಾಗುತ್ತದೆ. ಒಮ್ಮೆ ಮಾಹಿತಿ ನೀಡಿದರೆ ತಕ್ಷಣ ಬ್ಯಾಂಕ್ ಖಾತೆ ಖಾಲಿಯಾಗುತ್ತದೆ.
ಇಂತಹ ವಂಚನೆಗೆ ಬಲಿಯಾದರೆ, ತಕ್ಷಣವೇ 1930 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಅಥವಾ cybercrime.gov.in ಪೋರ್ಟಲ್ನಲ್ಲಿ ದೂರು ದಾಖಲಿಸಿ ಎಂದು ಎಸ್ಬಿಐ ಸ್ಪಷ್ಟಪಡಿಸಿದೆ.

