ಏಷ್ಯನ್ ಗೇಮ್ಸ್ 2023ರಲ್ಲಿ ಭಾರತ ಆಟಗಾರರು ಎಲ್ಲಾ ಕ್ಷೇತ್ರದಲ್ಲೂ ಅತ್ಯಂತ ದೊಡ್ಡ ಮಟ್ಟದ ಪ್ರದರ್ಶನ ನೀಡುತ್ತಿದ್ದು, ದಿನದಿಂದ ದಿನಕ್ಕೆ ಪದಕಗಳನ್ನು ಗೆದ್ದು ಬೀಗುತ್ತಿದ್ದಾರೆ. ಈಗ ಪುರುಷರ 4×400 ರಿಲೇಯಲ್ಲಿ ಭಾರತ ಬಂಗಾರದ ಪದಕ ಗೆದ್ದು ಬೀಗಿದೆ. ಇದಕ್ಕೂ ಮುನ್ನ 4×400 ರಿಲೇಯಲ್ಲೇ ಮಹಿಳೆಯರ ತಂಡ ಬೆಳ್ಳಿ ಪದಕ ಗೆದ್ದುಕೊಂಡಿತು.
ಪುರುಷರ 5000 ಮೀಟರ್ ಓಟದ ಫೈನಲ್’ನಲ್ಲಿ ಅವಿನಾಶ್ ಸಾಬ್ಲೆ ಬೆಳ್ಳಿ ಪದಕ ಗೆದ್ದಿದ್ದಾರೆ. ಮಹಿಳೆಯರ 800 ಮೀಟರ್ ಓಟದಲ್ಲಿ ಭಾರತದ ಹರ್ಮಿಲನ್ ಬೈನ್ಸ್ ಅವ್ರು ಬೆಳ್ಳಿ ಪದಕ ಗೆದ್ದಿದ್ದಾರೆ.
ಪುರುಷರ ಹಾಕಿಯಲ್ಲಿ ಭಾರತವು ದಕ್ಷಿಣ ಕೊರಿಯಾವನ್ನ ಸೋಲಿಸಿ ಏಷ್ಯನ್ ಗೇಮ್ಸ್ 2023 ರ ಫೈನಲ್ಗೆ ಪ್ರವೇಶಿಸಿದೆ. 2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆಲ್ಲಲು ಒಂದು ಗೆಲುವಿನ ಅಂತರವಿದೆ.
1951ರಲ್ಲಿ ಏಶ್ಯನ್ ಗೇಮ್ಸ್ ಆರಂಭವಾದಾಗಿನಿಂದ ಭಾರತ 70 ಪದಕಗಳ ಗಡಿ ದಾಟಲು ಸಾಧ್ಯವಾಗಿಲ್ಲ. ಆದರೆ 81 ಪದಕಗಳನ್ನು ಗೆದ್ದು ಭಾರತ ಐತಿಹಾಸಿಕ ದಾಖಲೆ ಬರೆದಿದೆ.